(ನ್ಯಾಯಶಾಸ್ತ್ರ) ಮ್ಯಾಂಡ(ಡೇ)ಮಸ್; ಮೇಲಿನ ನ್ಯಾಯಾಲಯ ಕೆಳಗಿನ ನ್ಯಾಯಾಲಯಕ್ಕೆ ಕೊಡುವ ಯಾ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕ ಯಾ ಶಾಸನಬದ್ಧ ಕರ್ತವ್ಯವೊಂದನ್ನು ನಿರ್ವಹಿಸುವಂತೆ ಕೊಡುವ – ನಿರೂಪ, ಆಜ್ಞಾಪತ್ರ, ಆದೇಶಪತ್ರ.
mandarin
ನಾಮವಾಚಕ
ಪದಗುಚ್ಛ
ಮ್ಯಾಂಡರಿನ್:
(ಚರಿತ್ರೆ) (ಪ್ರಾಕ್ ಕಮ್ಯೂನಿಸ್ಟ್ ಚೀನಾದ ನಾಗರಿಕ ಸೇವೆಯ ಒಂಬತ್ತು ದರ್ಜೆಗಳಲ್ಲಿ ಒಂದಕ್ಕೆ ಸೇರಿದ) ಚೀನೀ ಅಧಿಕಾರಿ.
(Mandarin) ಚೀನಾ ದೇಶದ ಅಧಿಕೃತ ಆಡುನುಡಿ.
ಪಕ್ಷದ ನಾಯಕ, ಮುಖಂಡ.
(ಸರ್ಕಾರಿ) ಅಧಿಕಾರಿ.
ಆಡಳಿತ ಪಕ್ಷದ ಯಾ ವ್ಯವಸ್ಥೆಯ ಪ್ರಭಾವೀ ಸದಸ್ಯ.
ಚೀನೀ ಬೊಂಬೆ; ಚೀನಾ ದೇಶದ ಪೋಷಾಕಿನಲ್ಲಿರುವ ಯಾ ತಲೆ ತೂಗುತ್ತಲೇ ಇರುವ (ಸಾಮಾನ್ಯವಾಗಿ ಪಿಂಗಾಣಿಯ) ಮನುಷ್ಯ ಬೊಂಬೆ.
ಚೀನೀ ಪೋಷಾಕಿನಲ್ಲಿರುವ ವ್ಯಕ್ತಿಗಳನ್ನು ಚಿತ್ರಿಸಿರುವ ಪಿಂಗಾಣಿ ಮೊದಲಾದ ಸಾಮಾನು.
mandarin
ನಾಮವಾಚಕ
ಮ್ಯಾಂಡರಿನ್:
ದಟ್ಟ ಬಣ್ಣದ, ಚಪ್ಪಟೆಯ, ಕಿತ್ತಳೆ ಹಣ್ಣು.
(ಟಾರೆಣ್ಣೆಯಿಂದ ತಯಾರಿಸಿದ) ಇಂತಹ ಬಣ್ಣ.
ಒಂದು ಬಗೆಯ ರುಚಿಕಟ್ಟಿದ, ಆಲ್ಕೊಹಾಲ್ ಅಂಶವುಳ್ಳ ಮದ್ಯ.
mandarin duck
ನಾಮವಾಚಕ
ಮ್ಯಾಂಡರಿನ್ ಬಾತು (ಕೋಳಿ); ಉಜ್ವಲ ವರ್ಣದ ರೆಕ್ಕೆಗಳಿಗೆ ಪ್ರಸಿದ್ಧವಾದ, ಸಣ್ಣ ಗಾತ್ರದ ಚೀನೀ ಬಾತು.
mandarin orange
ನಾಮವಾಚಕ
ಮ್ಯಾಂಡರಿನ್ ಕಿತ್ತಳೆ:
ಸಿಪ್ಪೆ ಅಂಟಿಕೊಂಡಿರದ, ಕಡು ಬಣ್ಣದ, ಒಂದು ಬಗೆಯ ಸಣ್ಣ ಕಿತ್ತಳೆ ಹಣ್ಣು.
ಇಂಥ ಹಣ್ಣಿನ ಮರ.
mandarine
ನಾಮವಾಚಕ
= 2mandarin.
mandatary
ನಾಮವಾಚಕ
(ಮುಖ್ಯವಾಗಿ ಚರಿತ್ರೆ) ನಿಯುಕ್ತ; ಆಜ್ಞಪ್ತ; ಆದಿಷ್ಟ; ನಿಯೋಗ ಕೊಡಲ್ಪಟ್ಟ; ಆಜ್ಞೆ ಕೊಡಲ್ಪಟ್ಟ – ವ್ಯಕ್ತಿ ಯಾ ರಾಜ್ಯ.
mandate
ನಾಮವಾಚಕ
ಅಧಿಕೃತ – ಆದೇಶ, ಆಜ್ಞೆ; ಮೇಲಧಿಕಾರಿಯಿಂದ ಬಂದ, ನ್ಯಾಯಸ್ಥಾನದ ಯಾ ಕಾನೂನಿಗನುಗುಣವಾದ ಆದೇಶ, ಆಜ್ಞೆ.
(ಮತ್ತೊಬ್ಬರಿಗಾಗಿ ಕಾರ್ಯ ನಿರ್ವಾಹ ಮಾಡಲು ಕೊಟ್ಟ) ನಿಯೋಗ.
(ಚರಿತ್ರೆ) (ಲೀಗ್ ಆಹ್ ನೇಷನ್ಸ್ ಸಂಸ್ಥೆಯಿಂದ ಪ್ರಪಂಚದ ಯಾವುದೇ ರಾಷ್ಟ್ರಕ್ಕೆ ಸ್ವಾತಂತ್ರ್ಯ ಪಡೆಯಲು ಇನ್ನೂ ಅರ್ಹವಲ್ಲವೆಂದು ಪರಿಗಣಿತವಾದ ಒಂದು ನಾಂಗವನ್ನು) ಆಳಲು ಕೊಟ್ಟ ನಿಯೋಗ.
(ಕಾವ್ಯಪ್ರಯೋಗ) ಆಜ್ಞೆ.
ಪೋಪ್‍ನ ರಾಯಸ, ನಿರೂಪ; (ತೀರ್ಮಾನವನ್ನೊಳಗೊಂಡ) ಆಜ್ಞೆ.
(ನ್ಯಾಯಶಾಸ್ತ್ರ) ನಿಯೋಗ ಕರಾರು; ನಿಯೋಗ ಕೊಡಲ್ಪಟ್ಟವನು ತನಗೆ ವಹಿಸಿಕೊಟ್ಟಿರುವ ವಿಷಯದಲ್ಲಿ (ಸಾಮಾನ್ಯವಾಗಿ) ಪ್ರತಿಫಲ ಕೋರದೆ ಕಾರ್ಯ ಮಾಡಲು ಮತ್ತು ನಷ್ಟ ಸಂಭವಿಸಿದರೆ ಅದನ್ನು ತುಂಬಿಕೊಡಲು ಬರೆದುಕೊಟ್ಟ ಕರಾರು.
ಜನಾದೇಶ; ಚುನಾವಣೆಯಲ್ಲಿ ಜನರ ಆಶೋತ್ತರಗಳನ್ನು ಪೂರೈಸಲು ಜಯಶೀಲ ಪಕ್ಷ, ಅಭ್ಯರ್ಥಿ, ಮೊದಲಾದವರಿಗೆ ಯಾವುದೇ ನೀತಿ ಯಾ ಕಾರ್ಯಕ್ರಮಕ್ಕೆ ಬೇಕಾದ ಬೆಂಬಲ.
mandate
ಸಕರ್ಮಕ ಕ್ರಿಯಾಪದ
(ಒಂದು ಭೂಭಾಗ ಮೊದಲಾದವನ್ನು) ನಿಯೋಗ ಕೊಡಲ್ಪಟ್ಟವನಿಗೆ ಯಾ ಕೊಡಲ್ಪಟ್ಟ ರಾಷ್ಟ ಕ್ಕೆ ವಹಿಸಿಕೊಡು; ನಿಯೋಗಿಗೆ – ಒಪ್ಪಿಸು, ವಶ ಮಾಡು, ಸ್ವಾಧೀನ ಕೊಡು.
(ಒಬ್ಬ ಪ್ರತಿನಿಧಿಗೆ) ಆದೇಶಿಸು; ನಿರ್ದೇಶಿಸು; ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಯಾ ಮತ ಚಲಾಯಿಸುವಂತೆ ಸೂಚಿಸು, ನಿರ್ದೇಶನ ನೀಡು.