logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

largen
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ದೊಡ್ಡದಾಗಿಸು; ದೊಡ್ಡದಾಗಿ ಬೆಳೆಸು. ದೊಡ್ಡದಾಗು; ದೊಡ್ಡದಾಗಿ ಬೆಳೆ; ವರ್ಧಿಸು.

largeness
ನಾಮವಾಚಕ
  • (ಗಾತ್ರ, ಪ್ರಮಾಣ, ಮೊದಲಾದವುಗಳಲ್ಲಿ) ಬೃಹತ್ತು (ಆಗಿರುವಿಕೆ): ದೊಡ್ಡದಾಗಿರುವಿಕೆ; ಭಾರಿಯಾಗಿರುವಿಕೆ.
  • ವಿಸ್ತಾರ; ವೈಶಾಲ್ಯ; ವಿಶಾಲತೆ; ವ್ಯಾಪಕತೆ.

  • largess
    ನಾಮವಾಚಕ
    = largesse.

    largesse
    ನಾಮವಾಚಕ
  • ಇನಾಮು; ಬಕ್ಷೀಸು; ಸಂತೋಷ ಸಮಾರಂಭದಲ್ಲಿ, ಮುಖ್ಯವಾಗಿ ಉನ್ನತ ಅಂತಸ್ತಿನವನು ಧಾರಾಳವಾಗಿ ಕೊಟ್ಟ ಹಣ ಯಾ ಉಡುಗೊರೆ.
  • ಉದಾರ ದಾನ; ಧಾರಾಳ ಕೊಡುಗೆ.

  • larghetto
    ಕ್ರಿಯಾವಿಶೇಷಣ
    (ಸಂಗೀತ) ವಿಲಂಬಗತಿಯಲ್ಲಿ; ನಿಧಾನಗತಿಯಲ್ಲಿ; ಮಂದಗತಿಯಲ್ಲಿ.

    larghetto
    ಗುಣವಾಚಕ
    (ಸಂಗೀತ) ವಿಲಂಬಗತಿಯ; ನಿಧಾನಗತಿಯ.

    larghetto
    ನಾಮವಾಚಕ
    (ಸಂಗೀತ) (ಬಹುವಚನ larghettos). ವಿಲಂಬಗತಿಯ ನಡೆ.

    largish
    ಗುಣವಾಚಕ
    ದೊಡ್ಡದೆನಿಸುವ; ಸ್ವಲ್ಪ ಮಟ್ಟಿಗೆ ದೊಡ್ಡದಾದ.

    largo
    ಕ್ರಿಯಾವಿಶೇಷಣ
    (ಸಂಗೀತ) ವಿಲಂಬಗತಿಯಲ್ಲಿ ಗಂಭೀರವಾಗಿ.

    largo
    ಗುಣವಾಚಕ
    (ಸಂಗೀತ) ಗಂಭೀರವಾದ ವಿಲಂಬಗತಿಯ.


    logo