(ರಸಾಯನವಿಜ್ಞಾನ) ವರಣಶೀಲ; ಕೆಲವು ಪದಾರ್ಥಗಳ ಮೇಲೆ ಮಾತ್ರ ವರ್ತಿಸುವ ಯಾ ಕೆಲವು ಪದಾರ್ಥಗಳೊಂದಿಗೆ ಮಾತ್ರ ಸಂಬಂಧ ಕಲ್ಪಿಸಿಕೊಳ್ಳುವ.
elective
ನಾಮವಾಚಕ
(ಅಮೆರಿಕನ್ ಪ್ರಯೋಗ) ಆಯ್ಕೆ ವಿಷಯ; ಐಚ್ಛಿಕ ವಿಷಯ; ಪಠ್ಯಕ್ರಮದಲ್ಲಿ ಆಯ್ದುಕೊಳ್ಳಬಹುದಾದ ವಿಷಯ: his electives included English ಅವನ ಐಚ್ಛಿಕ ವಿಷಯಗಳಲ್ಲಿ ಇಂಗ್ಲಿಷ್ ಸೇರಿತ್ತು.
elective affinity
ನಾಮವಾಚಕ
(ರಸಾಯನವಿಜ್ಞಾನ) ಇಷ್ಟಬಂಧುತ್ವ; ವರಣಬಂಧುತ್ವ; (ರಾಸಾಯನಿಕ ಸಂಯೋಗದ ವಿಷಯದಲ್ಲಿ) ನಿರ್ದಿಷ್ಟ ಪದಾರ್ಥಗಳೊಡನೆ ಸಂಯೋಜಿಸುವ ಪ್ರತ್ತಿ.
(Elector) (ಚರಿತ್ರೆ) ಇಲೆಕ್ಟರ್; ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯನ್ನು ಚುನಾಯಿಸುವ ಹಕ್ಕಿದ್ದ ಜರ್ಮನ್ ದೊರೆ.
ಅಧ್ಯಕ್ಷ ಚುನಾಯಕ ಸಮುದಾಯದ ಸದಸ್ಯ.
electoral
ಗುಣವಾಚಕ
ಚುನಾಯಕರ; ಮತದಾರರ.
ಚುನಾಯಕರಿಂದ ಕೂಡಿದ.
ಚುನಾವಣೆಯ ಹಕ್ಕುಳ್ಳ.
electoral college
ನಾಮವಾಚಕ
(ಅಮೆರಿಕನ್ ಪ್ರಯೋಗ) ಅಧ್ಯಕ್ಷ ಮತದಾರ ಸಮುದಾಯ; ಅಧ್ಯಕ್ಷ ಚುನಾಯಕ ಸಮುದಾಯ; ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲು ಅಮೆರಿಕದ ಪ್ರತಿ ರಾಜ್ಯದಿಂದಲೂ ಚುನಾಯಿತರಾದ ಮತದಾರರ ಸಮುದಾಯ.
electorate
ನಾಮವಾಚಕ
(ಚರಿತ್ರೆ) ಇಲೆಕ್ಟರನ, ಪವಿತ್ರ ರೋಮನ್ ಚಕ್ರಾಧಿಪತಿಯನ್ನು ಆರಿಸುವ ಜರ್ಮನ್ ಚುನಾಯಕನ — ಪದವಿ ಯಾ ರಾಜ್ಯ.