logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

candid friend
ನಾಮವಾಚಕ
(ವ್ಯಂಗ್ಯವಾಗಿ) ಹಿತಶತ್ರು; ಮಿತ್ರಶತ್ರು; ಗೆಳೆಯಹಗೆ; ಅಹಿತವಾಗಿ ನುಡಿಯುತ್ತ ಸ್ನೇಹಿತನಂತೆ ವರ್ತಿಸುವವ; ನಿಷ್ಪಕ್ಷಪಾತವಾಗಿ ವರ್ತಿಸುವೆನೆಂದು ಹೇಳುತ್ತಾ ಅಪ್ರಿಯವಾಗಿ ಮಾತನಾಡುವವನು.

candid photograph
ನಾಮವಾಚಕ
ಸಾಚಾ ಹೋಟೋ; ನೇರಚಿತ್ರ; ವ್ಯಕ್ತಿಗಳು ಸಹಜವಾಗಿ ಇರುವ ಹಾಗೆಯೇ, ಸಾಮಾನ್ಯವಾಗಿ ಅವರಿಗೆ ಗೊತ್ತಾಗದಂತೆ, ತೆಗೆದ ಛಾಯಾಚಿತ್ರ.

candidacy
ನಾಮವಾಚಕ
ಉಮೇದುವಾರಿಕೆ; ಅಭ್ಯರ್ಥಿಕೆ.

candidate
ನಾಮವಾಚಕ
  • (ಯಾವುದೇ ಅಧಿಕಾರ, ಹಕ್ಕು, ಸದಸ್ಯತ್ವ, ಸ್ಥಾನ ಮೊದಲಾದವುಗಳ) ಉಮೇದುವಾರ; ಅಭ್ಯರ್ಥಿ; ಹುರಿಯಾಳು.
  • ಪರೀಕ್ಷಾರ್ಥಿ; ಪದವಿಗಾಗಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ.

  • candidature
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಉಮೇದುವಾರಿಕೆ; ಅಭ್ಯರ್ಥಿತನ.

    candidly
    ಕ್ರಿಯಾವಿಶೇಷಣ
  • ಸಾಚಾತನದಿಂದ; ಬಿಚ್ಚುಮನದಿಂದ; ನಿಷ್ಕಪಟವಾಗಿ; ಮುಚ್ಚುಮರೆಯಿಲ್ಲದೆ; ನೇರವಾಗಿ; ಖಡಾಖಂಡಿತವಾಗಿ; ಇದ್ದದ್ದನ್ನು ಇದ್ದಂತೆ.
  • ನಿಷ್ಟಕ್ಷಪಾತವಾಗಿ; ಪೂರ್ವಗ್ರಹವಿಲ್ಲದೆ; ಪಕ್ಷಪಾತವಿಲ್ಲದೆ.

  • candidness
    ನಾಮವಾಚಕ
  • ಸಾಚಾತನ; ಬಿಚ್ಚುಮನಸ್ಸು; ನಿಷ್ಕಪಟತೆ; ಮುಚ್ಚುಮರೆ ಇಲ್ಲದಿರುವಿಕೆ; ನೇರಸ್ವಭಾವ; ಇದ್ದದ್ದನ್ನು ಇದ್ದಂತೆ ಹೇಳುವುದು.
  • ಪಕ್ಷಪಾತರಾಹಿತ್ಯ; ನಿಷ್ಪಕ್ಷಪಾತತೆ; ಪೂರ್ವಗ್ರಹವಿಲ್ಲದಿರುವಿಕೆ.

  • candied
    ಗುಣವಾಚಕ
  • ಸಕ್ಕರೆ–ನವರಿದ, ಲೇಪಿಸಿದ; ಸಕ್ಕರೆಯಲ್ಲಿ ಅದ್ದಿದ: candied ginger ಸಕ್ಕರೆಶುಂಠಿ.
  • (ರೂಪಕವಾಗಿ) ಉಬ್ಬಿಸುವ; ಹೊಗಳಿಕೆಯ; ಸಕ್ಕರೆಯಂಥ; ಸವಿಯಾದ; ಜೇನಿನಂಥ: candied words ಸಕ್ಕರೆಯಂಥ ಮಾತುಗಳು.
  • ಸಕ್ಕರೆಪಾಕದಲ್ಲಿ ಬೇಯಿಸಿದ.

  • candle
    ನಾಮವಾಚಕ ಪದಗುಚ್ಛ ನುಡಿಗಟ್ಟು
    Roman candle ಬಣ್ಣದ ಚೆಂಡುಗಳನ್ನು ಹಾರಿಸುವ ಮದ್ದು ತುಂಬಿದ ಕೊಳವೆ; ಬಣ್ಣದ ಬಾಣಬಿರುಸು.
  • ಮೋಂಬತ್ತಿ; ಮೇಣದ ಬತ್ತಿ.
  • ಕ್ಯಾಂಡಲು; ಪ್ರಕಾಶದ ತೀವ್ರತೆಯನ್ನು ಅಳೆಯುವ ಮಾನ.

  • candle
    ಸಕರ್ಮಕ ಕ್ರಿಯಾಪದ
    (ಮೊಟ್ಟೆಯನ್ನು) ಬೆಳಕಿಗೆ ಹಿಡಿದು (ಅದರ) ತಾಜಾತನವನ್ನು ಪರೀಕ್ಷಿಸು.


    logo