logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Achaean
ನಾಮವಾಚಕ
  • ಅಕೀಯ ನಿವಾಸಿ.
  • (ಸ್ಥೂಲವಾಗಿ) ಗ್ರೀಸ್‍ ನಿವಾಸಿ.

  • Achaemenid
    ಗುಣವಾಚಕ
    ಅಕೀಮನಿಡ್‍; ಅಕೀಮನೀಸ್‍ ರಾಜನ ವಂಶಕ್ಕೆ ಸೇರಿದವನ.

    Achaemenid
    ನಾಮವಾಚಕ
    ಅಕೀಮನಿಡ್‍; ಅಕೀಮನೀಸ್‍ ವಂಶಜ; ಕ್ರಿಸ್ತಪೂರ್ವ 553 ರಿಂದ 330ರವರೆಗೆ ಪರ್ಷಿಯವನ್ನು ಆಳಿದ ರಾಜರ ವಂಶಕ್ಕೆ ಸೇರಿದವನು.

    acharnement
    ನಾಮವಾಚಕ
  • ಕ್ರೌರ್ಯ; ರಕ್ತದಾಹ.
  • ಹುಮ್ಮಸ್ಸು; ಹುರುಪು.

  • Achates
    ನಾಮವಾಚಕ
  • ಅಕೇಟೀಸ್‍; ವರ್ಜಿಲ್‍ನ ಈನಿಯಡ್‍ ಕಾವ್ಯದ ನಾಯಕ ಈನಿಯಸ್‍ನ ಗೆಳೆಯನ ಹೆಸರು.
  • ಗೆಳೆಯ; ಸಂಗಾತಿ; ಆಪ್ತಮಿತ್ರ.

  • ache
    ಅಕರ್ಮಕ ಕ್ರಿಯಾಪದ
  • ನೋಯಿ; ನೋಯು.
  • ನೋವುಪಡು; ನರಳು; ಯಾತನೆಪಡು; ವೇದನೆಗೊಳ್ಳು.
  • ಕನಿಕರಪಡು; ಮರುಗು: her heart ached for the orphans ಆಕೆಯ ಹೃದಯ ತಬ್ಬಲಿ ಮಕ್ಕಳಿಗಾಗಿ ಮರುಗಿತು.
  • (ಆಡುಮಾತು) ಹಾತೊರೆ; ಹಂಬಲಿಸು: I am aching to see you ನಿನ್ನನ್ನು ನೋಡಲು ನಾನು ಹಂಬಲಿಸುತ್ತಿದ್ದೇನೆ.

  • ache
    ನಾಮವಾಚಕ
    (ಬಹುದಿನಗಳಿಂದ ಇರುವ, ತೀವ್ರವಲ್ಲದ) ನೋವು; ಬೇನೆ ಶೂಲೆ; ವೇದನೆ; ಯಾತನೆ.

    ache
    ನಾಮವಾಚಕ
    H ಎಂಬ ಅಕ್ಷರದ ಹೆಸರು.

    achene
    ನಾಮವಾಚಕ
    ಅಕೀನ್‍; ಬಿರಿಯದ, ಒಂದೇ ಬೀಜವಿರುವ, ಗಟ್ಟಿಯಾದ ಚಿಕ್ಕ ಒಣಹಣ್ಣು, ಉದಾಹರಣೆಗೆ ಸ್ಟ್ರಾಬರಿ ಬೀಜ.

    Acheulean
    ನಾಮವಾಚಕ
    = 1Acheulian.


    logo