logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ogle
ನಾಮವಾಚಕ
ಕಾಮುಕ ಯಾ ಪ್ರಣಯ ದೃಷ್ಟಿ; ಪ್ರೇಮದ ಯಾ ಕಾಮದ ನೋಟ.

ogler
ನಾಮವಾಚಕ
ಪ್ರಣಯದೃಷ್ಟಿ ಬೀರುವವನು.

ogre
ನಾಮವಾಚಕ
(ಸ್ತ್ರೀ ogress ಉಚ್ಚಾರಣೆ ಓಗ್ರಿಸ್‍)
  • (ಜಾನಪದ ಮೊದಲಾದವುಗಳಲ್ಲಿ) (ನರ ಭಕ್ಷಕ) ರಾಕ್ಷಸ; ಮನುಷ್ಯನನ್ನು ತಿನ್ನುವ ರಾಕ್ಷಸ.
  • ಕರಾಳ (ಸ್ವರೂಪಿ); ಭಯಂಕರ, ಭಯಾನಕ–ವ್ಯಕ್ತಿ.

  • ogreish
    ಗುಣವಾಚಕ
    ಕ್ರೂರ; ರಾಕ್ಷಸೀಯ; ಕರಾಳ; ಭಯಂಕರ; ಘೋರ; ಮನುಷ್ಯನನ್ನು ತಿನ್ನುವ ರಾಕ್ಷಸನಂಥ.

    ogress
    ನಾಮವಾಚಕ
  • (ನರಭಕ್ಷಕ) ರಾಕ್ಷಸಿ.
  • ಕರಾಳಾ, ಘೋರ, ಭಯಂಕರ–ಹೆಂಗಸು.

  • ogrish
    ಗುಣವಾಚಕ
    = ogreish.

    Ogygian
    ಗುಣವಾಚಕ
  • (ಅಜ್ಞಾತ) ಪ್ರಾಚೀನ ಕಾಲದ; ಓಬಿರಾಯನ ಕಾಲದ; ನಂದೂರಾಯನ ಕಾಲದ.
  • ಪ್ರಾಗೈತಿಹಾಸಿಕ; ಬಹು ಪುರಾತನ ಕಾಲದ.

  • OH
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ) Ohio (ಅಧಿಕೃತ ಅಂಚೆ ಬಳಕೆಯಲ್ಲಿ).

    oh
    ಭಾವಸೂಚಕ ಅವ್ಯಯ ಪದಗುಚ್ಛ
    ಓ; ಆಶ್ಚರ್ಯ, ನೋವು, ಮೊರೆ, ಕೋರಿಕೆ, ಮೊದಲಾದವನ್ನು ಸೂಚಿಸುವ ಉದ್ಗಾರ: oh, what a mess! ಓಹ್‍, ಎಂಥ ಅವ್ಯವಸ್ಥೆ!
  • oh boy ಆಶ್ಚರ್ಯ, ಸಂಭ್ರಮ, ಮೊದಲಾದವನ್ನು ಸೂಚಿಸಲು ಬಳಸುವ ಉದ್ಗಾರ.
  • oh well! ಸರಿ! (ದುಃಖವನ್ನು ಹೇಳಿಕೊಳ್ಳದೆ ಸಹಿಸಿಕೊಳ್ಳುವಾಗ ಮಾಡುವ ಉದ್ಗಾರ).

  • oh
    ನಾಮವಾಚಕ
    = 1O\((2)\).


    logo