logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Manchester school
ನಾಮವಾಚಕ
ಮ್ಯಾಂಚೆಸ್ಟರ್‍ ಪಂಥ; ಮುಕ್ತ ಮಾರುಕಟ್ಟೆ ಮತ್ತು ಅನಿರ್ಬಂಧ ವಾಣಿಜ್ಯ ಸಿದ್ಧಾಂತದ ಪ್ರತಿಪಾದಕರು ಯಾ ಅನುಯಾಯಿಗಳು.

manchineel
ನಾಮವಾಚಕ
ಮ್ಯಾಂಚಿನೀಲ್‍ (ಮರ); ವೆಸ್ಟ್‍ ಇಂಡೀಸ್‍ ದ್ವೀಪಗಳಲ್ಲಿ ಬೆಳೆಯುವ, ವಿಷಮಯ ಹಾಲು ಮತ್ತು ಒಗರುಕಾಯಿ ಉಳ್ಳ, ಹಿಪ್ಟೊಮೇನ್‍ ಮ್ಯಾನ್ಸಿನೆಲ ಕುಲದ, ಒಂದು ಬಗೆಯ ಮರ.

Manchu
ನಾಮವಾಚಕ
ಮ್ಯಾಂಚೂ:
  • ಟಾರ್ಟರ್‍ ಜನಾಂಗದ ಸಂತತಿಗೆ ಸೇರಿದ, ಚೀನಾ ದೇಶದ ಒಂದು ಜನಾಂಗದವನು.
  • ಈಗ ಚೀನಾ ದೇಶದ ವಾಯವ್ಯ ಭಾಗದಲ್ಲಿ ಪ್ರಚಾರದಲ್ಲಿರುವ ಈ ಜನಾಂಗದವರ ಭಾಷೆ.

  • Manchu
    ಗುಣವಾಚಕ
    ಮ್ಯಾಂಚೂ ಜನಾಂಗದವರ ಯಾ ಅವರ ಭಾಷೆಯ.

    manciple
    ನಾಮವಾಚಕ
    ಮ್ಯಾನ್ಸಿಪಲ್‍; ಕಾಲೇಜುಗಳು, ಇನ್ಸ್‍ ಆಹ್‍ ಕೋರ್ಟ್‍, ಮೊದಲಾದವುಗಳಿಗಾಗಿ ಆಹಾರ ಸಾಮಗ್ರಿಗಳನ್ನು ಕೊಳ್ಳುವ ಅಧಿಕಾರಿ.

    Mancunian
    ಗುಣವಾಚಕ
    (ಇಂಗ್ಲೆಂಡಿನ ವಾಯವ್ಯ ಭಾಗದಲ್ಲಿರುವ) ಮ್ಯಾಂಚೆಸ್ಟರ್‍ ನಗರದ.

    Mancunian
    ನಾಮವಾಚಕ
    (ಇಂಗ್ಲೆಂಡಿನ ವಾಯವ್ಯ ಭಾಗದಲ್ಲಿರುವ) ಮ್ಯಾಂಚೆಸ್ಟರ್‍ ನಗರದವನು.

    Mandaean
    ಗುಣವಾಚಕ
    ಮ್ಯಾನ್ಡೀಯನ್‍:
  • ಇರಾಕಿನಲ್ಲಿ ಈಗಲೂ ಉಳಿದುಕೊಂಡಿರುವ ಮ್ಯಾನ್ಡೀಯನ್‍ ಎಂಬ ಹೆಸರಿನ ಅನುಭಾವೀ ಪಂಥದ.
  • ಮ್ಯಾನ್ಡೀಯನ್ನರ ಭಾಷೆಯ.

  • Mandaean
    ನಾಮವಾಚಕ
    ಮ್ಯಾನ್ಡೀಯನ್‍:
  • ಇರಾಕಿನಲ್ಲಿ ಈಗಲೂ ಉಳಿದುಕೊಂಡಿರುವ, ‘ಜಾನ್‍ ದ ಬ್ಯಾಪ್ಟಿಸ್ಟ್‍’ ಸಂತತಿಗೆ ಸೇರಿದವರಿಂದು ಹೇಳಿಕೊಳ್ಳುವ, ಮ್ಯಾನ್ಡೀಯನ್‍ ಎಂಬ ಹೆಸರಿನ ಅನುಭಾವೀ ಪಂಥದವನು.
  • ಮ್ಯಾನ್ಡೀಯನ್ನರ ಭಾಷೆ.

  • mandala
    ನಾಮವಾಚಕ
    ಮಂಡಲ:
  • ಬೇರೆ ಬೇರೆ ಧರ್ಮಗಳಲ್ಲಿ ವಿಶ್ವವನ್ನು ಸಂಕೇತಿಸುವ ವರ್ತುಲ.
  • (ಮನಶ್ಶಾಸ್ತ್ರ) ಪರಿಪೂರ್ಣತೆಯನ್ನೂ ಆತ್ಮೈಕ್ಯವನ್ನೂ ಅರಸುವ ಕನಸಿಗನ ಅನ್ವೇಷಣೆಯನ್ನು ಸೂಚಿಸುವ ಅಂಥದೇ ಸಂಕೇತ.


  • logo