logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

large
ನಾಮವಾಚಕ ಪದಗುಚ್ಛ
( ಪದಗುಚ್ಛಗಳಲ್ಲಿ ಮಾತ್ರ ಪ್ರಯೋಗ).
  • at large
    1. ಬಿಡುಗಡೆ ಹೊಂದಿ; ಮುಕ್ತನಾಗಿ; ನಿರ್ಬಂಧವಿಲ್ಲದೆ; ಸ್ವತಂತ್ರನಾಗಿ.
    2. ಇಡಿಯಾಗಿ; ಸಂಪೂರ್ಣವಾಗಿ.
    3. (ಕಥನ ಮೊದಲಾದವುಗಳಲ್ಲಿ) ಸವಿಸ್ತಾರವಾಗಿ; ವಿವರಗಳೊಡನೆ.
    4. ಸಮುದಾಯವಾಗಿ; ಸಾಮುದಾಯಿಕವಾಗಿ; ಒಟ್ಟಿನಲ್ಲಿ: popular with the people at large ಒಟ್ಟು ಜನಸಮುದಾಯದ ಅನುರಾಗಕ್ಕೆ ಪಾತ್ರನಾಗಿ.
    5. ಸ್ಥೂಲವಾಗಿ; ಒಟ್ಟಾರೆ; ನಿಷ್ಕೃಷ್ಟವಾಗಿರದೆ; ನಿರ್ದಿಷ್ಟಪಡಿಸದೆ; ನಿರ್ದಿಷ್ಟ ಗುರಿಯಿಲ್ಲದೆ: scatters imputations at large ದೋಷಾರೋಪಣೆಗಳನ್ನು ಒಟ್ಟಾರೆ ಎರಚುತ್ತ ಹೋಗುತ್ತಾನೆ.
  • gentleman at large
    1. ನಿರ್ದಿಷ್ಟ ಕರ್ತವ್ಯಗಳಿಲ್ಲದ ಆಸ್ಥಾನಿಕ.
    2. ಯಾವ ಒಂದು ಉದ್ಯೋಗವೂ ಇಲ್ಲದವನು; ಕೆಲಸವಿಲ್ಲದವನು; ನಿರುದ್ಯೋಗಿ ಮಹಾಶಯ.
  • in large ದೊಡ್ಡ, ಭಾರಿ – ಪ್ರಮಾಣದಲ್ಲಿ; ಬೃಹತ್ಪ್ರಮಾಣದಲ್ಲಿ.

  • large
    ಕ್ರಿಯಾವಿಶೇಷಣ ನುಡಿಗಟ್ಟು
    ( ಪದಗುಚ್ಛಗಳಲ್ಲಿ ಮಾತ್ರ ಪ್ರಯೋಗ).
  • $^2$by and large ಒಟ್ಟಿನಲ್ಲಿ; ಒಟ್ಟಾರೆ; ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ; ಗುಣದೋಷಗಳನ್ನೆಲ್ಲ ಪರ್ಯಾಲೋಚಿಸಿದರೆ: by and large, the proposed scheme is worthy of acceptance (ಗುಣದೋಷಗಳನ್ನೆಲ್ಲ ಪರಿಶೀಲಿಸಿದ ಮೇಲೆ) ಒಟ್ಟಿನಲ್ಲಿ ಈಗ ಮಂಡಿಸಿರುವ ಯೋಜನೆಯು ಸಭೆಯ ಅಂಗೀಕಾರಕ್ಕೆ ಯೋಗ್ಯವಾಗಿದೆ.
  • bulk large ದೊಡ್ಡದಾಗಿ, ಬೃಹತ್ತಾಗಿ – ಕಾಣು.
  • 2loom large.
  • $^2$writ large ಎದ್ದುಕಾಣುವಂತೆ; ಸ್ಪಷ್ಟಗೋಚರ ವಾಗಿ; ಕಣ್ಣಿಗೆ ಹೊಡೆಯುವಂತೆ; ಸುಸ್ಪಷ್ಟವಾಗಿ.

  • large calorie
    ನಾಮವಾಚಕ
    ದೊಡ್ಡ ಕ್ಯಾಲರಿ; 1000 ಕ್ಯಾಲರಿ.

    large intestine
    ನಾಮವಾಚಕ
    ಹೆಗ್ಗರುಳು; ದೊಡ್ಡ ಕರುಳು; ಮನುಷ್ಯ ಮತ್ತಿತರ ಕೆಲವು ಪ್ರಾಣಿಗಳಲ್ಲಿ ಕರುಳಿನ ಮೊದಲ ಭಾಗವಾದ ಸಣ್ಣ ಕರುಳನ್ನು ಹೊರತುಪಡಿಸಿ ಉಳಿದ ಕರುಳು ಮತ್ತು ಗುದದ್ವಾರಗಳನ್ನು ಒಳಗೊಂಡ ಕೆಳಭಾಗ.

    large-hearted
    ಗುಣವಾಚಕ
    ಉದಾರ ಹೃದಯದ; ಧಾರಾಳ ಹೃದಯವುಳ್ಳ.

    large-heartedness
    ನಾಮವಾಚಕ
    ಉದಾರಹೃದಯತೆ.

    large-minded
    ಗುಣವಾಚಕ
    ದೊಡ್ಡ ಮನಸ್ಸಿನ; ಉದಾರ ಮನಸ್ಕ; ಉದಾರ ಮನಸ್ಸುಳ್ಳ.

    large-mindedness
    ನಾಮವಾಚಕ
    ದೊಡ್ಡಮನಸ್ಸು; ಉದಾರ ಮನಸ್ಸು.

    large-scale
    ಗುಣವಾಚಕ
    ಭಾರಿ ಪ್ರಮಾಣದ; ಬೃಹತ್ಪ್ರಮಾಣದ; ಭಾರಿ ಗಾತ್ರದ; ಬೃಹದ್ಗಾತ್ರದ; ಭಾರಿ ಪ್ರಮಾಣದಲ್ಲಿ ಸಿಕ್ಕುವ ಯಾ ತಯಾರುಮಾಡುವ.

    largely
    ಕ್ರಿಯಾವಿಶೇಷಣ
  • ಉದಾರವಾಗಿ; ಧಾರಾಳವಾಗಿ; ಕೊಡುಗೈಯಿಂದ.
  • ಹೇರಳವಾಗಿ; ಪುಷ್ಕಲವಾಗಿ; ಸಮೃದ್ಧವಾಗಿ; ದೊಡ್ಡ ಪ್ರಮಾಣದಲ್ಲಿ; ಬೃಹತ್ಪ್ರಮಾಣದಲ್ಲಿ.
  • ಬಹುವಾಗಿ; ಬಹುಮಟ್ಟಿಗೆ; ಹೆಚ್ಚು ಮಟ್ಟಿಗೆ: is largely due to him ಬಹುಮಟ್ಟಿಗೆ ಅವನೇ ಕಾರಣ.
  • ಒಟ್ಟಾರೆ; ಸ್ಥೂಲವಾಗಿ.
  • ವ್ಯಾಪಕ ದೃಷ್ಟಿಯಲ್ಲಿ; ಸಮಗ್ರ ನೋಟದಲ್ಲಿ.


  • logo