logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imperatival
ಗುಣವಾಚಕ
(ವ್ಯಾಕರಣ) (ಕ್ರಿಯಾರೂಪದ ವಿಷಯದಲ್ಲಿ) ವಿಧಿರೂಪದ; ಆಜ್ಞಾರ್ಥಕ.

imperative
ಗುಣವಾಚಕ
  • (ವ್ಯಾಕರಣ) (ಕ್ರಿಯಾರೂಪದ ವಿಷಯದಲ್ಲಿ) ವಿಧಿರೂಪದ; ಆಜ್ಞಾರ್ಥಕ, ಉದಾಹರಣೆಗೆ: come here! ಬಾ ಇಲ್ಲಿ!
  • ಆಜ್ಞಾಪಿಸುವ.
  • ಕಡ್ಡಾಯವಾದ; ಅವಶ್ಯ ಕರ್ತವ್ಯವಾದ; ಮಾಡಿಯೇ ತೀರಬೇಕಾದ.
  • ಅನಿವಾರ್ಯವಾದ; ಅತ್ಯಗತ್ಯವಾದ.

  • imperative
    ನಾಮವಾಚಕ
  • (ವ್ಯಾಕರಣ) ವಿಧಿರೂಪ; ಆಜ್ಞಾರ್ಥ(ಕ).
  • ಆಜ್ಞೆ; ಅನುಶಾಸನ.
  • ಅಗತ್ಯ: economic imperatives ಆರ್ಥಿಕ ಅಗತ್ಯಗಳು.
  • ನಿಯಮ; ವಿಧಿ: lived by certain simple imperatives ಕೆಲವು ಸರಳ ನಿಯಮಗಳಿಗೆ ಅನುಸಾರವಾಗಿ ನಡೆದುಕೊಂಡ.
  • ಕರ್ತವ್ಯ: the social imperatives of our time ನಮ್ಮ ಕಾಲದ ಸಾಮಾಜಿಕ ಕರ್ತವ್ಯಗಳು.

  • imperatively
    ಕ್ರಿಯಾವಿಶೇಷಣ
  • (ವ್ಯಾಕರಣ) ಆಜ್ಞಾರ್ಥಕವಾಗಿ.
  • ಆಜ್ಞಾಪಿಸುವಂತೆ.

  • imperativeness
    ನಾಮವಾಚಕ
  • ಆಜ್ಞಾಸ್ವರೂಪ; ಆಜ್ಞಾತ್ಮಕತೆ; ಆಜ್ಞೆಯ ಗುಣ ಹೊಂದಿರುವಿಕೆ.
  • ಕರ್ತವ್ಯತೆ; ಕರ್ತವ್ಯವಾಗಿರುವಿಕೆ.
  • ಅಗತ್ಯವಾಗಿರುವಿಕೆ.

  • imperator
    ನಾಮವಾಚಕ
  • (ರೋಮನ್‍ ಚರಿತ್ರೆ) (ಪ್ರಜಾಧಿಪತ್ಯದ ಕಾಲದಲ್ಲಿ ಜಯಶಾಲಿ ಸೇನಾಪತಿಯನ್ನು ಸೈನಿಕರು ಅಭಿವಂದಿಸಿ ಅವನಿಗೆ ಕೊಟ್ಟ ಬಿರುದು) ವಿಜೇತ; ವಿಜಯಿ.
  • ಚಕ್ರವರ್ತಿ; ಸಾರ್ವಭೌಮ.
  • ಸರ್ವಾಧಿಕಾರಿ ರಾಜ; ನಿರಂಕುಶ ದೊರೆ.

  • imperatorial
    ಗುಣವಾಚಕ
  • (ರೋಮನ್‍ ಚರಿತ್ರೆ) ವಿಜೇತನ.
  • ಚಕ್ರವರ್ತಿಯ.
  • ನಿರಂಕುಶ ದೊರೆಯ.

  • imperceptibility
    ನಾಮವಾಚಕ
  • ಅಗ್ರಾಹ್ಯತೆ; ಅಗೋಚರತೆ; ಕಾಣಲಾಗದಿರುವಿಕೆ.
  • ಅತಿಸೂಕ್ಷ್ಮತೆ.

  • imperceptible
    ಗುಣವಾಚಕ
  • ಅಗ್ರಾಹ್ಯ; ಕಾಣಲಾಗದ; ತಿಳಿಯಲಾಗದ; ಗ್ರಹಿಸಲಾಗದ; ಅಗೋಚರ.
  • ಅತಿಸೂಕ್ಷ್ಮ; ದುರ್ಗ್ರಾಹ್ಯ; ಕಾಣದೆ ಯಾ ತಿಳಿಯದೆ ಇರುವಷ್ಟು ಸಣ್ಣದಾದ ಯಾ ಅಸ್ಪಷ್ಟವಾದ ಯಾ ನಿಧಾನವಾಗಿ ಆಗುವ: saw him grow up by imperceptible degress ಅವನು ನಿಧಾನವಾಗಿ ಬೆಳೆಯುತ್ತಿದ್ದುದನ್ನು ಕಂಡೆ.

  • imperceptibly
    ಕ್ರಿಯಾವಿಶೇಷಣ
  • ಕಾಣಲಾಗದಂತೆ; ಅಗೋಚರವಾಗಿ.
  • ಕಾಣಿಸದಷ್ಟು ಸೂಕ್ಷ್ಮವಾಗಿ.


  • logo