logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eldest hand
ನಾಮವಾಚಕ
= elder hand.

eldorado
ನಾಮವಾಚಕ
  • ಹೊನ್ನಾಡು; ಚಿನ್ನದ ನಾಡು; ಸುವರ್ಣ ಭೂಮಿ; ಹೊನ್ನೂರು; ಸ್ವರ್ಣನಗರಿ; ಸುವರ್ಣಪಟ್ಟಣ, ಸ್ವರ್ಣದೇಶ; ಚಿನ್ನ ಹೇರಳವಾಗಿರುವುದೆನ್ನಲಾದ (ಕಾಲ್ಪನಿಕ) ದೇಶ, ಊರು.
  • ಹೇರಳನಾಡು; ಸಮೃದ್ಧ ಕ್ಷೇತ್ರ; ಹೇರಳವಾಗಿ ಸಂಪತ್ತಿರುವ ಯಾ ಅವಕಾಶವಿರುವ — ಸ್ಥಳ.

  • eldritch
    ಗುಣವಾಚಕ
  • (ಸ್ಕಾಟ್ಲಂಡ್‍) ವಿಚಿತ್ರ; ವಿಕಟ; ವಿಲಕ್ಷಣ.
  • ಘೋರ; ಕರಾಳ; ಭೀಕರ; ಭಯಂಕರವಾದ.

  • Eleatic
    ಗುಣವಾಚಕ
    ಈಲಿಯದ; ಎಲಿಆಟಿಕ್‍:
  • ನೈಋತ್ಯ ಇಟಲಿಯ ಪುರಾತನ ಗ್ರೀಕ್‍ ಪಟ್ಟಣವಾದ ಈಲಿಯಾಕ್ಕೆ ಸಂಬಂಧಿಸಿದ.
  • ಸುಮಾರು ಕ್ರಿಸ್ತಪೂರ್ವ. 6ನೇ ಶತಮಾನದಲ್ಲಿ ಈಲಿಯಾದಲ್ಲಿ ಹುಟ್ಟಿದ್ದ ಯಾ ಜೀವಿಸಿದ್ದ (ಮುಖ್ಯವಾಗಿ ಜಿಸೊಹೆನಿಸ್‍, ಪಾರ್ಮಿನೈಡಿಸ್‍, ಸೀನೋ, ಮುಂತಾದ) ದಾರ್ಶನಿಕರ ಪಂಥಕ್ಕೆ ಸಂಬಂಧಿಸಿದ, ಸೇರಿದ.

  • Eleatic
    ನಾಮವಾಚಕ
    ಈಲಿಯ ಪಂಥದ ದಾರ್ಶನಿಕ.

    elecampane
    ನಾಮವಾಚಕ
    ಎಲಿಕ್ಯಾಂಪೇನ್‍:
  • ಕಹಿ ಮತ್ತು ಸುವಾಸನೆಯ ಎಲೆ ಮತ್ತು ಬೇರುಗಳಿರುವ, ಇನೂಲ ಹೆಲಿನಿಯಂ ಕುಲದ, ಯೂರೋಪಿನ ಬಹುವಾರ್ಷಿಕ ಸಸ್ಯ.
  • ಈ ಗಿಡದ ಬೆವರಿನಿಂದ ತಯಾರಿಸಿದ ಒಂದು ಪದಾರ್ಥವನ್ನು ಬಳಸಿ, ಇದರ ರುಚಿ, ವಾಸನೆಗಳು ಬರುವಂತೆ ಮಾಡಿದ ಮಿಠಾಯಿ, ಸಿಹಿ ತಿಂಡಿ.

  • elect
    ಗುಣವಾಚಕ ಪದಗುಚ್ಛ
    bride elect (ಮದುವೆಗೆ) ಗೊತ್ತಾದ ಹೆಣ್ಣು; ನಿಶ್ಚಿತ ವಧು.
  • ಆಯ್ದ; ಆರಿಸಿಕೊಂಡ; ಆಯ್ದುಕೊಂಡ; ಹೆಕ್ಕಿತೆಗೆದ.
  • ಆಯ್ದ; ಶ್ರೇಷ್ಠವೆಂದು ಆಯ್ದು ತೆಗೆದ: an elect group ಆಯ್ದು ತೆಗೆದ ಮಂಡಲಿ, ಕೂಟ.
  • (ದೇವತಾಶಾಸ್ತ್ರ) ಮೋಕ್ಷ ಪ್ರಧಾನ ಮಾಡಲು ದೇವರು ಆರಿಸಿ ತೆಗೆದ: the elect ಮುಕ್ತಿಯೋಗ್ಯರು; ಮೋಕ್ಷಪ್ರದಾನ ಮಾಡಲು ದೇವರು ಆರಿಸಿ ತೆಗೆದ ಆತ್ಮಗಳು.
  • (ಪದವಿ, ಹುದ್ದೆ, ಮೊದಲಾದವಕ್ಕೆ) ನೇಮಿಸಲು ಆರಿಸಿದ, ಚುನಾಯಿಸಿದ: president elect ಅಧ್ಯಕ್ಷ ಪದವಿಗೆ ಚುನಾಯಿಸಿದ, ಆದರೆ ಇನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲದ, ಅಧ್ಯಕ್ಷ.

  • elect
    ಸಕರ್ಮಕ ಕ್ರಿಯಾಪದ
  • ವಸ್ತುವನ್ನು ಯಾ ವಿಷಯವನ್ನು ಆರಿಸು, ಆರಿಸಿಕೊ.
  • (ಮಾಡಲು ಯಾವುದೇ ಕೆಲಸ) ಆರಿಸಿಕೊ; ಆಯ್ದುಕೊ.
  • ವ್ಯಕ್ತಿಯನ್ನು ಮತದಾನದ ಮೂಲಕ ಆರಿಸು, ಚುನಾಯಿಸು: elect a magistrate ದಂಡಾಧಿಕಾರಿಯನ್ನು ಚುನಾಯಿಸು.
  • (ದೇವತಾಶಾಸ್ತ್ರ) (ದೇವರ ವಿಷಯದಲ್ಲಿ) ಮೋಕ್ಷಕ್ಕಾಗಿ, ಅನುಗ್ರಹಕ್ಕಾಗಿ ಯಾ ಉದ್ಧಾರ ಮಾಡುವುದಕ್ಕಾಗಿ (ಉಳಿದವರನ್ನು ಬಿಟ್ಟು ಕೆಲವು ವ್ಯಕ್ತಿಗಳನ್ನು) ಆರಿಸು.

  • election
    ನಾಮವಾಚಕ
  • ಚುನಾವಣೆ; ಆಯ್ಕೆ; ಆರಿಸುವುದು; ಮುಖ್ಯವಾಗಿ ಓಟಿನ ಮೂಲಕ ಚುನಾಯಿಸುವುದು.
  • (ದೇವತಾಶಾಸ್ತ್ರ) (ದೇವರ ವಿಷಯದಲ್ಲಿ) ಜೀವರುಗಳಲ್ಲಿ ಉಳಿದವರೆಲ್ಲರಿಗಿಂತ ಕೆಲವರು ಮೇಲೆಂದು ಅವರನ್ನು ಉದ್ಧರಿಸಿ ಮೋಕ್ಷ ನೀಡಲು ಆರಿಸುವುದು.

  • electioneer
    ಅಕರ್ಮಕ ಕ್ರಿಯಾಪದ
    ಚುನಾವಣಾ ಕಾರ್ಯದಲ್ಲಿ ತೊಡಗಿರು; ರಾಜಕೀಯ ಚುನಾವಣೆಯ ಪ್ರಚಾರ ನಡೆಸು; ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತನಾಗಿರು; ಚುನಾವಣೆಯಲ್ಲಿ ತೊಡಗಿರು.


    logo