logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cancerous
ಗುಣವಾಚಕ
  • ಅರ್ಬುದ ರೋಗದ; ಕ್ಯಾನ್ಸರಿನ; ಕ್ಯಾನ್ಸರಿನಂಥ.
  • ಕ್ಯಾನ್ಸರ್‍ ತಗುಲಿರುವ; ಅರ್ಬುದಪೀಡಿತ.

  • cancroid
    ಗುಣವಾಚಕ
  • ಏಡಿಯಂಥ; ನಳ್ಳಿಯಂಥ.
  • (ರೋಗಶಾಸ್ತ್ರ, ಕೆಲವು ಗಂತಿಗಳ ವಿಷಯದಲ್ಲಿ) ಅರ್ಬುದ ರೋಗದಂಥ; ಕ್ಯಾನ್ಸರಿನಂಥ.

  • cancroid
    ನಾಮವಾಚಕ
  • ಏಡಿಕುಲದ ಚಿಪ್ಪುಜೀವಿ.
  • ಕ್ಯಾಂಕ್ರಾಯ್ಡ್‍; ಅರ್ಬುದಾಭ; ಹೆಚ್ಚು ಹಾನಿಕರವಲ್ಲದ ಕ್ಯಾನ್ಸರ್‍.

  • candela
    ನಾಮವಾಚಕ
    (ಭೌತವಿಜ್ಞಾನ) ಕ್ಯಾಂಡಿಲ; (ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿ) ಪ್ರಕಾಶ ತೀವ್ರತೆಯ ಏಕಮಾನ (ಪ್ಲ್ಯಾಟಿನಂ ಘನೀಕರಿಸುವ ತಾಪದಲ್ಲಿ ಕಪ್ಪುಕಾಯದ ಪ್ರಕಾಶವನ್ನು ಚ.ಸೆಂ.ಮೀ. ಗೆ 60 ಕ್ಯಾಂಡಿಲ ಎಂದು 1946 ರಿಂದೀಚೆಗೆ ಪರಿಗಣಿಸಲಾಗಿದೆ).

    candelabrum
    ನಾಮವಾಚಕ
    ಕವಲು ಸಮೆ; ಕವಲು ದೀವಟಿಗೆ; ಕವಲುದೀಪಸ್ತಂಭ; ಕವಲುಗಳುಳ್ಳ, ಆಲಂಕಾರಿಕವಾದ, ದೊಡ್ಡ ದೀಪದ ಕಂಬ ಯಾ ಮೋಂಬತ್ತಿ ಸ್ಟ್ಯಾಂಡು.

    candelabrum tree
    ನಾಮವಾಚಕ
    (ಸಸ್ಯವಿಜ್ಞಾನ) ಕವಲುದೀವಟಿಗೆ ಮರ; ಕವಲುದೀಪಸ್ತಂಭದಾಕಾರದಲ್ಲಿ ಎಲೆಗಳನ್ನು ಬಿಡುವ, ಉಷ್ಣವಲಯದ ಆಹ್ರಿಕದ ಮರ.

    candescence
    ನಾಮವಾಚಕ
    ಬಿಳಿಗಾವು; ಉಷ್ಣದೀಪ್ತಿ; ಬಿಳಿಕನಲು; ಜ್ವಲನಪ್ರಕಾಶ; ಬೆಳ್ಳಗೆ ಕಾಯ್ದ ಶಾಖದಿಂದ ಉಂಟಾದ ಹೊಳಪು.

    candescent
    ಗುಣವಾಚಕ
    ಬಿಳಿಗಾವಿನಿಂದ (ಯಾ ಶಾಖದಿಂದಲೋ ಎಂಬಂತೆ) ಹೊಳೆಯುವ, ಪ್ರಕಾಶಿಸುವ, ಕನಲುವ.

    candid
    ಗುಣವಾಚಕ
  • ಸೀದಾ; ಸಾಚಾ; ಪ್ರಕಟ; ಬಿಚ್ಚುಮನದ; ಅಕುಟಿಲ; ನಿಷ್ಕಪಟ; ಮುಚ್ಚುಮರೆಯಿಲ್ಲದ; ನೇರ (ಸ್ವಭಾವದ); ಖಡಾಖಡಿಯ; ಇದ್ದದ್ದನ್ನು ಇದ್ದಂತೆ ಹೇಳುವ: a candid reply ಸೀದಾಸಾದಾ ಉತ್ತರ. a candid opinion ಬಿಚ್ಚುಮನದ ಅಭಿಪ್ರಾಯ.
  • (ಪ್ರಾಚೀನ ಪ್ರಯೋಗ) ನಿಷ್ಪಕ್ಷಪಾತದ; ಪಕ್ಷಪಾತವಿಲ್ಲದ; ಪೂರ್ವಗ್ರಹವಿಲ್ಲದ.

  • candid camera
    ನಾಮವಾಚಕ
    ನೇರ ಕ್ಯಾಮರ; ಸಾಚಾ ಕ್ಯಾಮರ; ಪೂರ್ವಸೂಚನೆಯಿಲ್ಲದೆ, ವ್ಯಕ್ತಿಗಳು ಸಹಜವಾಗಿ ಇರುವಂತೆಯೇ, ಸಾಮಾನ್ಯವಾಗಿ ಅವರಿಗೆ ಗೊತ್ತಾಗದಂತೆ, ಚಿತ್ರಗಳನ್ನು ತೆಗೆಯುವ ಚಿಕ್ಕ ಕ್ಯಾಮರ.


    logo