logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bangtail muster
ನಾಮವಾಚಕ
(ಆಸ್ಟ್ರೇಲಿಯ) ರಾಸುಲೆಕ್ಕ; ಗೋಗಣನೆ; ಬಾಲದ ತುದಿಯ ಕೂದಲನ್ನು ಅಡ್ಡಡ್ಡವಾಗಿ ಸ್ವಲ್ಪ ಕತ್ತರಿಸಿ ದನಗಳ ಸಂಖ್ಯೆಯನ್ನು ಎಣಿಸುವ ವಿಧಾನ.

bania
ನಾಮವಾಚಕ
= banian(1,3).

banian
ನಾಮವಾಚಕ
  • ಬನಿಯ; ಹಿಂದೂ – ವ್ಯಾಪಾರಿ; ಬಜಿಗ; ವರ್ತಕ.
  • (ಬಂಗಾಳದಲ್ಲಿ) (ಯೂರೋಪಿಯನ್ನರ ಮನೆಗಳಿಗೆ ಸರಬರಾಜು ಮಾಡುತ್ತಿದ್ದ) ಸ್ಥಳೀಯ – ವ್ಯಾಪಾರಿ, ವರ್ತಕ, ಬನಿಯ.
  • ಬನೀನು; ಜುಬ್ಬ; ಅರೆತೋಳು ಅಂಗಿ.
  • (ಇಂಡಿಯದ) ಆಲದ ಮರ; ವಟವೃಕ್ಷ. Figure: banian

  • banian-day
    ನಾಮವಾಚಕ
    (ನೌಕಾಯಾನ) ಮಾಂಸ ಬಡಿಸದ ದಿನ; ಮಾಂಸರಹಿತ ದಿನ.

    banian-hospital
    ನಾಮವಾಚಕ
    (ಇಂಡಿಯ) ದನದ ಆಸ್ಪತ್ರೆ; ಪಶುವೈದ್ಯಶಾಲೆ.

    banian-tree
    ನಾಮವಾಚಕ
    = banian(4).

    banish
    ಸಕರ್ಮಕ ಕ್ರಿಯಾಪದ
  • (ಒಂದು ಸ್ಥಳದಿಂದ, ವ್ಯಕ್ತಿಯನ್ನು) ಹೊರ ಅಟ್ಟು; ಹೊರದೂಡು; ಬಹಿಷ್ಕರಿಸು; ಗಡೀಪಾರು ಮಾಡು; ದೇಶಭ್ರಷ್ಟಗೊಳಿಸು.
  • (ಎದುರಿನಿಂದಲೊ ಯಾ ಮನಸ್ಸಿನಿಂದಲೊ) ಆಚೆ ದೂಡು; ಹೊರಹಾಕು; ತೊಲಗಿಸು; ದೂರೀಕರಿಸು.

  • banishment
    ನಾಮವಾಚಕ
  • (ದೇಶದಿಂದ ಮಾಡುವ) ಗಡೀಪಾರು; ಬಹಿಷ್ಕಾರ.
  • ಬಹಿಷ್ಕರಣ; ಉಚ್ಚಾಟನೆ; ಹೊರದೂಡುವುದು: the banishment of textbooks from the classroom ತರಗತಿಯಲ್ಲಿ ಪಠ್ಯಪುಸ್ತಕಗಳ (ಬಳಕೆಯ) ಉಚ್ಚಾಟನೆ.

  • banister
    ನಾಮವಾಚಕ
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಮಹಡಿ ಮೆಟ್ಟಲಿನ) ಹೂಜಿಗಂಬ(ಗಳು); ಕಟಕಟೆ (ಕಂಬಗಳು).
  • (ಸಾಮಾನ್ಯವಾಗಿ ಬಹುವಚನದಲ್ಲಿ) ಕಟಕಟೆ; ಕಟಾಂಜನ; ಕಂಬ ಮತ್ತು ಅದರ ಮೇಲಿನ ಕಂಬಿಯೂ ಸೇರಿದ ಕಟಕಟೆ. Figure: banister

  • banjo
    ನಾಮವಾಚಕ
    ಬ್ಯಾಂಜೋ (ವಾದ್ಯ); ಕೈವೀಣೆ; ಗಿಟಾರಿನಂಥ ಕತ್ತು ಮತ್ತು ತಲೆಗಳಿರುವ, ತಂಬೂರಿಯಂಥ ದೇಹವಿರುವ, ಬೆರಳುಗಳಿಂದ, ಮರದ, ದಂತದ ತುಂಡಿನಿಂದ ಯಾ ಗರಿ ಮೊದಲಾದವುಗಳಿಂದ ನುಡಿಸಬಲ್ಲ ತಂತಿವಾದ್ಯ.


    logo