(ರಸಾಯನವಿಜ್ಞಾನ) acetic, acetyl ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: acetonitrile.
acetone
ನಾಮವಾಚಕ
(ರಸಾಯನವಿಜ್ಞಾನ) ಆಸಿಟೋನ್; ತೆರೆದ ಸರಣಿ ಕೀಟೋನುಗಳಲ್ಲಿ ಮೊದಲನೆಯದು; ಸೆಲ್ಯುಲೋಸ್ ಆಸಿಟೇಟ್ ಮೊದಲಾದ ಜೀವಸಂಯುಕ್ತಗಳನ್ನು ಕರಗಿಸಲು ಬಳಸುವ ಬಣ್ಣವಿಲ್ಲದ, ಬೇಗನೆ ಬಾಷ್ಪವಾಗುವ, ನೀರಿನಲ್ಲಿ ಕರಗುವ, ದ್ರವರೂಪದ ಡೈಮೀಥೈಲ್ ಕೀಟೋನು, ${\rm CH}_3{\rm COCH}_3$.
acetous
ಗುಣವಾಚಕ
ಚುಕ್ರೀಯ; ಸಿರ್ಕದ ಗುಣಗಳುಳ್ಳ; ವಿನಿಗರ್‍ನಂಥ.
ಸಿರ್ಕಕಾರಕ; ಚುಕ್ರದ ತಯಾರಿಕೆಗೆ ಬರುವ; ವಿನಿಗರನ್ನು ತಯಾರಿಸುವ.