logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ogam
ನಾಮವಾಚಕ
ogham ಪದದ ರೂಪಾಂತರ.

ogdoad
ನಾಮವಾಚಕ
ಅಷ್ಟಕ; ಎಂಟು; ಎಂಟರ ತಂಡ.

ogee
ನಾಮವಾಚಕ
(ವಾಸ್ತುಶಿಲ್ಪ) ಓಜೀ:
  • ಪಕ್ಕದಿಂದ ನೋಡಿದಾಗ S ಆಕ್ಷರದ ಆಕಾರವಿರುವ ದಿಂಡುಕಟ್ಟು.
  • S ಅಕ್ಷರದ ಆಕಾರದ ರೇಖೆ.

  • ogee
    ಗುಣವಾಚಕ
    ಓಜೀ:
  • ಪಕ್ಕದಿಂದ ನೋಡಿದರೆ S ಅಕ್ಷರದ ಆಕಾರವಿರುವ.
  • S ಅಕ್ಷರದ ಆಕಾರವಿರುವ ರೇಖೆಯ.

  • ogee arch
    ನಾಮವಾಚಕ
    ಓಜೀ ಕಮಾನು; S ಆಕಾರದ ತಿರುವುಗಳನ್ನು ಅಗ್ರದಲ್ಲಿ ಸೇರಿಸಿ ಮಾಡಿದ (ಚಾವಣಿಯ) ಕಮಾನು.

    ogeed
    ಗುಣವಾಚಕ
    ಓಜೀ ಮಾಡಿದ: S ಅಕ್ಷರದ ಆಕಾರವಿರುವ ಯಾ ಎರಡು ಅಂಥ ಆಕಾರಗಳನ್ನು ಸೇರಿಸಿದ.

    ogham
    ನಾಮವಾಚಕ
    ಆಗಮ್‍:
  • (ಒಂದು ಉದ್ದವಾದ ರೇಖೆಯ ಅಡ್ಡಲಾಗಿ ಯಾ ಅದರ ಎರಡೂ ಪಕ್ಕ ಸಮಾನಾಂತರ ಗೆರೆಗಳನ್ನು ಎಳೆದು ರಚಿಸಿರುವ, ಇಪ್ಪತ್ತು ಅಕ್ಷರಗಳಿದ್ದ ಪುರಾತನ ಬ್ರಿಟಿಷ್‍ ಮತ್ತು ಐರಿಷ್‍) ವರ್ಣಮಾಲೆ.
  • ಆಗಮ್‍ ಲಿಪಿ: ಈ ವರ್ಣಮಾಲೆಯ ಲಿಪಿ.
  • (ಈ ವರ್ಣಮಾಲೆಯಲ್ಲಿನ) ಒಂದು ಅಕ್ಷರ, ವರ್ಣ.

  • ogival
    ಗುಣವಾಚಕ
  • ಚೂಪು ಚಾವಣಿಯಂಥ; ಚೂಪಾದ ಯಾ ಗಾಥಿಕ್‍ ಶೈಲಿಯ ಚಾವಣಿಯಂಥ.
  • S ಅಕ್ಷರದ ಆಕಾರವಿರುವ, ಯಾ ಎರಡು S ಅಕ್ಷರಾಕೃತಿಗಳನ್ನು ಸೇರಿಸಿದ ಆಕಾರದ.

  • ogive
    ನಾಮವಾಚಕ
  • ಓಜೈವ್‍; ಚೂಪು ಚಾಚಣಿ; ಚೂಪಾದ ಯಾ ಗಾಥಿಕ್‍ ಶೈಲಿಯ ಕಮಾನು ಚಾವಣಿ.
  • ಕಮಾನು ಚಾವಣಿಗೆ ಆಧಾರವಾಗಿರುವ ಚೌಕಟ್ಟಿನಲ್ಲಿ ಮೂಲೆಯಿಂದ ಮೂಲೆಗೆ ರಚಿಸಿರುವ ರೀಪು ಯಾ ರಿಪೀಸು.
  • S ಆಕಾರದ ರೇಖೆ.
  • ಓಜೈವ್‍; ವಕ್ರದ ಪ್ರತಿಯೊಂದು ಆರ್ಡಿನೇಟೂ ಅಲ್ಲಿಯವರೆಗಿನ ಎಲ್ಲ ಆವರ್ತನಗಳ ಮೊತ್ತವನ್ನು ಸೂಚಿಸುವಂಥ ಆವರ್ತನ ಹಂಚಿಕೆಯ ವಕ್ರ.

  • ogle
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಪ್ರಣಯದಿಂದ ಯಾ ಕಾಮುಕತೆಯಿಂದ–ನೋಡು, ದೃಷ್ಟಿಸು, ಕಣ್ಣು ಹಾಕು. ಪ್ರಣಯದೃಷ್ಟಿ ಬೀರು.


    logo