logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manageress
ನಾಮವಾಚಕ
(ಮುಖ್ಯವಾಗಿ ಅಂಗಡಿ, ಹೋಟೆಲು, ಚಿತ್ರಮಂದಿರ, ಮೊದಲಾದವುಗಳ) ವ್ಯವಸ್ಥಾಪಿಕೆ; ನಿರ್ವಾಹಿಕೆ; ನಿರ್ವಾಹಕಿ.

managerial
ಗುಣವಾಚಕ
ಮ್ಯಾನೇಜರೀಯ: (ಮ್ಯಾನೇಜರನಿಗೆ, ವ್ಯವಸ್ಥಾಪಕನಿಗೆ ಯಾ ನಿರ್ವಾಹಕನಿಗೆ)
  • ಸಂಬಂಧಿಸಿದ.
  • ಉಚಿತವಾದ; ತಕ್ಕುದಾದ; ಹೊಂದುವ; ಅರ್ಹ; ಯೋಗ್ಯವಾದ: managerial problems ವ್ಯವಸ್ಥಾಪಕ(ನಿಗೆ ಸಂಬಂಧಿಸಿದ) ಸಮಸ್ಯೆಗಳು. managerial qualities ವ್ಯವಸ್ಥಾಪಕ(ರಿಗೆ ತಕ್ಕ) ಗುಣಗಳು.
  • ನಿರ್ವಹಣೆಗೆ, ವ್ಯವಸ್ಥಾಪನೆಗೆ ಸಂಬಂಧಿಸಿದ: managerial skills ನಿರ್ವಹಣಾ ಕೌಶಲಗಳು; ಮ್ಯಾನೇಜರೀಯ ಕೌಶಲಗಳು.

  • managerially
    ಕ್ರಿಯಾವಿಶೇಷಣ
  • ಮ್ಯಾನೇಜರನಿಗೆ ಸಂಬಂಧಿಸಿದಂತೆ.
  • ಮ್ಯಾನೇಜರನಂತೆ.

  • managership
    ನಾಮವಾಚಕ
    ಮ್ಯಾನೇಜರಿಕೆ; ವ್ಯವಸ್ಥಾಪಕತ್ವ; ನಿರ್ವಾಹಕತ್ವ; ಪಾರುಪತ್ಯ.

    managing
    ಗುಣವಾಚಕ
  • (ಒಬ್ಬನನ್ನು ಮುಖಸ್ತುತಿ, ಜಬರ್ದಸ್ತು, ಮೊದಲಾದವುಗಳಿಂದ ವಶಪಡಿಸಿಕೊಂಡು) ಸ್ವಾರ್ಥ ಸಾಧಿಸಿಕೊಳ್ಳುವ; ಸ್ವಪ್ರಯೋಜನ ಪಡೆದುಕೊಳ್ಳುವ; ಉದ್ದೇಶ ನೆರವೇರಿಸಿಕೊಳ್ಳುವ.
  • ( ಸಮಾಸ ಪೂರ್ವಪದವಾಗಿ) ನಿರ್ವಾಹಕ; ನಿರ್ವಹಣೆಯ ಅಧಿಕಾರವುಳ್ಳ: managing director ನಿರ್ವಾಹಕ ನಿರ್ದೇಶಕ.
  • ನಿಯಂತ್ರಣ ಪ್ರಿಯ; ಹತೋಟಿಯೊಲವಿನ; ವ್ಯವಹಾರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಒಲವುಳ್ಳ, ಇಷ್ಟವುಳ್ಳ.
  • (ಪ್ರಾಚೀನ ಪ್ರಯೋಗ) ಮಿತವ್ಯಯದ.

  • manakin
    ನಾಮವಾಚಕ
    ಮ್ಯಾನಕಿನ್‍ (ಪಕ್ಷಿ); ಅಮೆರಿಕದ ಉಷ್ಣವಲಯ ಪ್ರದೇಶದ, ಉಜ್ಜ್ವಲ ಬಣ್ಣಗಳುಳ್ಳ, ಪಿಪ್ರೆಡೇ ವಂಶದ ಒಂದು ಚಿಕ್ಕ ಹಕ್ಕಿ ಜಾತಿ.

    manana
    ಕ್ರಿಯಾವಿಶೇಷಣ
    (ಮುಖ್ಯವಾಗಿ ವಿಳಂಬವನ್ನು ಸೂಚಿಸುವಲ್ಲಿ) ಮುಂದೆ ಯಾವಾಗಲೋ; ಮುಂದೊಮ್ಮೆ; ಅನಿರ್ದಿಷ್ಟ ಭವಿಷ್ಯತ್ಕಾಲದಲ್ಲಿ.

    manana
    ಕ್ರಿಯಾವಿಶೇಷಣ
    ಅನಿರ್ದಿಷ್ಟ ಭವಿಷ್ಯತ್ಕಾಲ.

    manatee
    ನಾಮವಾಚಕ
    ಮ್ಯಾನಟೀ; ಕಡಲ ಹಸು; ಕಡಲಾಕಳು; ಸಮುದ್ರಧೇನು; ಅಮೆರಿಕ ಖಂಡದ ತೀರಗಳಲ್ಲಿ ಕಂಡು ಬರುವ, ಟ್ರಿಕೆಕಸ್‍ ಕುಲದ, ಒಂದು ಸಸ್ಯಾಹಾರಿ ಜಲಚರ ಸಸ್ತನಿ.

    Manchester goods
    ನಾಮವಾಚಕ ಪದಗುಚ್ಛ
    (ಬ್ರಿಟಿಷ್‍ ಪ್ರಯೋಗ) ಹತ್ತಿ ಬಟ್ಟೆಗಳು; ಮ್ಯಾಂಚೆಸ್ಟರ್‍ ಜವಳಿ. Manchester department ಡಿಪಾರ್ಟ್‍ಮೆಂಟ್‍ ಸ್ಟೋರಿನಲ್ಲಿ ಮ್ಯಾಂಚೆಸ್ಟರ್‍ ಜವಳಿ ಮಾರುವ ವಿಭಾಗ.


    logo