logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impending
ಗುಣವಾಚಕ
  • ಆಸನ್ನ; ಸನ್ನಿಹಿತ; ಸದ್ಯಃಪಾತಿ; ಸದ್ಯದಲ್ಲೇ ಆಗಲಿರುವ.
  • (ಅಪಾಯ ಮೊದಲಾದವುಗಳ ವಿಷಯದಲ್ಲಿ) ಆಸನ್ನ; ತಲೆಯ ಮೇಲೆ ಕಾದಿರುವ, ಎರಗುವಂತಿರುವ.
  • ಮೇಲೆ ತೂಗಿರುವ, ಚಾಚಿರುವ.

  • impenetrability
    ನಾಮವಾಚಕ
  • ಅಪ್ರವೇಶ್ಯತೆ; ಅಭೇದ್ಯತೆ.
  • (ರೂಪಕವಾಗಿ) ದುರವಗಾಹತೆ; ದುಜ್ಞೇಯತೆ, ದುರ್ಭೇದ್ಯತೆ.
  • (ಭೌತವಿಜ್ಞಾನ) ಅನಾಕ್ರಮ್ಯತೆ; ನಿಷ್ಪ್ರವೇಶ್ಯತೆ; ಎರಡು ವಸ್ತುಗಳು ಏಕಕಾಲದಲ್ಲಿ ಒಂದೇ ಸ್ಥಳವನ್ನು ಆಕ್ರಮಿಸಿಕೊಳ್ಳಲಾಗದಿರುವಿಕೆ.

  • impenetrable
    ಗುಣವಾಚಕ
  • ಅಪ್ರವೇಶ್ಯ; ದುಷ್ಪ್ರವೇಶ್ಯ; ಅಭೇದ್ಯ; ತೂರಲಾಗದ; ಒಳ ಹೊಗಲಾಗದ.
  • (ರೂಪಕವಾಗಿ) ದುರ್ಭೇದ್ಯ; ದುರವಗಾಹ; ದುಜ್ಞೇಯ; ಅಜ್ಞೇಯ; ಮರ್ಮ, ಆಳ – ತಿಳಿಯಲಾಗದ.
  • (ಭಾವ ಮೊದಲಾದವುಗಳಿಗೆ ಯಾ ಅವುಗಳಿಂದ) ಅಪ್ರವೇಶ್ಯ; ಒಳಹೊಗಲು ಎಡೆಗೊಡದ; ಪ್ರವೇಶಿಸಲು ಆಸ್ಪದವೀಯದ.
  • (ಭೌತವಿಜ್ಞಾನ) ಅನಾಕ್ರಮ್ಯ; ನಿಷ್ಪ್ರವೇಶ್ಯ; ಎರಡು ವಸ್ತುಗಳು ಏಕಕಾಲದಲ್ಲಿ ಒಂದೇ ಸ್ಥಳವನ್ನು ಆಕ್ರಮಿಸಿಕೊಳ್ಳಲಾರದ ಗುಣ ಪಡೆದಿರುವ.

  • impenetrableness
    ನಾಮವಾಚಕ
    = impenetrability.

    impenetrably
    ಕ್ರಿಯಾವಿಶೇಷಣ
  • ಅಪ್ರವೇಶ್ಯವಾಗಿ; ಅಭೇದ್ಯವಾಗಿ; ಒಳಹೊಗಲು ಸಾಧ್ಯವಾಗದಂತೆ.
  • ದುರವಗಾಹವಾಗಿ; ದುಜ್ಞೇಯವಾಗಿ.
  • (ಭೌತವಿಜ್ಞಾನ) ನಿಷ್ಪ್ರವೇಶ್ಯವಾಗಿ; ಅನಾಕ್ರಮ್ಯವಾಗಿ.

  • impenetrate
    ಸಕರ್ಮಕ ಕ್ರಿಯಾಪದ
    ಆಳವಾಗಿ ಒಳಹೊಗು, ಪ್ರವೇಶಿಸು, ತೂರು.

    impenitence
    ನಾಮವಾಚಕ
    (ಮಾಡಿದ ಪಾಪಕ್ಕೆ, ದ್ರೋಹಕ್ಕೆ) ಮರುಗದಿರುವುದು; ಪಶ್ಚಾತ್ತಾಪ ಪಡದಿರುವುದು; ಪಶ್ಚಾತ್ತಾಪಹೀನತೆ.

    impenitency
    ನಾಮವಾಚಕ
    = impenitence.

    impenitent
    ಗುಣವಾಚಕ
    (ಮಾಡಿದ ಪಾಪಕ್ಕೆ, ದ್ರೋಹಕ್ಕೆ) ಮರುಗದ; ಪಶ್ಚಾತ್ತಾಪ ಹೀನ; ಪಶ್ಚಾತ್ತಾಪ ಪಡದ.

    impenitently
    ಕ್ರಿಯಾವಿಶೇಷಣ
    (ಮಾಡಿದ ಪಾಪಕ್ಕೆ) ಪಶ್ಚಾತ್ತಾಪ ಪಡದೆ; ಮರುಗದೆ.


    logo