(ವರ್ತಮಾನ ಕೃದಂತ cancelling, ಭೂತರೂಪ ಮತ್ತು ಭೂತಕೃದಂತ cancelled).cancel out = 1cancel ಅಕರ್ಮಕ ಕ್ರಿಯಾಪದ \(2\).
ಹೊಡೆದು ಹಾಕು; ಅಳಿಸು; ಅಡ್ಡಗೆರೆ ಎಳೆ.
ರದ್ದುಪಡಿಸು; ರದ್ದುಮಾಡು; ತೊಡೆದುಹಾಕು.
ಅನುಪಯೋಗಗೊಳಿಸು; ನಿರುಪಯುಕ್ತವಾಗಿಸು.
ಪ್ರತ್ಯಾಜ್ಞೆ ಮಾಡು; ಹಿಂದಿನ ಅಪ್ಪಣೆಗೆ ಪ್ರತಿಯಾಗಿ ಅಪ್ಪಣೆ ಮಾಡು.
(ಒಂದರಿಂದ ಇನ್ನೊಂದನ್ನು) ಹೊಡೆದು ಹಾಕು; ನಿಷ್ಪರಿಣಾಮಗೊಳಿಸು; ನಿಷ್ಫಲಗೊಳಿಸು; ತಟಸ್ಥಗೊಳಿಸು: his apology cancelled his sarcastic remark ಅವನ ಕ್ಷಮಾಯಾಚನೆ ಅವನ ವ್ಯಂಗ್ಯದ ಮಾತನ್ನು ಹೊಡೆದು ಹಾಕಿತು.
ಸರಿದೂಗಿಸು; ಸಮನಾಗಿಸು; ಸರಿಪಡಿಸು.
(ಅಂಚೆ ಸ್ಟಾಂಪಿನ ವಿಷಯದಲ್ಲಿ) ಮತ್ತೆ ಬಳಸಲಾಗದಂತೆ ಹೊಡೆದು ಹಾಕು.
(ಗಣಿತ) ಅಂಶಛೇದಗಳಲ್ಲಿನ ಸಾಮಾನ್ಯ ಅಪವರ್ತನಗಳನ್ನು, ಸಮೀಕರಣದ ಎರಡೂ ಕಡೆಯ ಸಮಾನಪದಗಳನ್ನು–ಹೊಡೆ, ಹೊಡೆದು ಹಾಕು.
(ಅಮೆರಿಕನ್ ಪ್ರಯೋಗ) (ಸಂಗೀತ) ತಾರ ಯಾ ಮಂದ್ರಸ್ಥಾಯಿಯ ನಂತರ ಮಧ್ಯಮಸ್ಥಾಯಿಗೆ ತರು.
cancel
ನಾಮವಾಚಕ
ನುಡಿಗಟ್ಟು
pair of cancels ಟಿಕೆಟ್ಟುಗಳನ್ನು ನಿರುಪಯುಕ್ತಗೊಳಿಸಲು ತೂತು ಮಾಡುವ ಇಕ್ಕಳ; ರದ್ದಿಯಾತಿ ಯಾ ರದ್ದಿಕೆ–ಇಕ್ಕಳ.
ಪ್ರತ್ಯಪ್ಪಣೆ; ಪ್ರತ್ಯಾಜ್ಞೆ.
ರದ್ದಿಯಾತಿ; ರದ್ದಿಕೆ; ರದ್ದು; ವಜಾ ಮಾಡುವಿಕೆ.
(ಮುದ್ರಣದ ವಿಷಯದಲ್ಲಿ) ಬದಲಿಮುದ್ರಣ; ಮುದ್ರಿಸಿದ್ದನ್ನು ರದ್ದು ಮಾಡಿ ಯಾ ತೆಗೆದು ಹಾಕಿ ಪುನರ್ಮುದ್ರಣ ಮಾಡುವುದು.
ಮುದ್ರಣ ರದ್ದಾದ ಹಾಳೆ; ರದ್ದುಹಾಳೆ.
(ಮುದ್ರಣ) ಪುನರ್ಮುದ್ರಿತ ಹಾಳೆ.
(ಅಂಚೆ ಸ್ಟಾಂಪಿನ ವಿಷಯದಲ್ಲಿ) ವಿಲೋಪನ; ಪುನಃ ಉಪಯೋಗಿಸದಂತೆ–ಹೊಡೆದು ಹಾಕುವಿಕೆ, ಅಳಿಸಿ ಹಾಕುವಿಕೆ.
(ಅಮೆರಿಕನ್ ಪ್ರಯೋಗ) (ಸಂಗೀತ) ತಾರ ಯಾ ಮಂದ್ರ ಸ್ಥಾಯಿಯಿಂದ ಮಧ್ಯಮ ಸ್ಥಾಯಿಗೆ ಹಿಂದಿರುಗುವುದನ್ನು ಸೂಚಿಸುವ ಚಿಹ್ನೆ; ಮಧ್ಯಮಸ್ಥಾಯಿ ಚಿಹ್ನೆ.