logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

banefulness
ನಾಮವಾಚಕ
  • ವಿಷಮಯವಾಗಿರುವಿಕೆ; ನಂಜು ತುಂಬಿರುವಿಕೆ.
  • ಪ್ರಾಣಾಪಾಯವಾಗಿರುವಿಕೆ.
  • ಹಾನಿಕರತೆ.

  • bang
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ( ಅಕರ್ಮಕ ಕ್ರಿಯಾಪದ ಸಹ) ಅಪ್ಪಳಿಸು; ಜಡಿ; ಥಳಿಸು; ರಪರಪನೆ ಹೊಡೆ; ಫಟೀರೆಂದು ಹೊಡೆ; ಚಚ್ಚು.
  • (ಬಾಗಿಲಿನ ವಿಷಯದಲ್ಲಿ) ಧಡೀರನೆ ಮುಚ್ಚು; ದಡಾರನೆ ಹಾಕು.
  • (ಏಟು ಯಾ ಸಿಡಿತದ) ಶಬ್ದ – ಬರಿಸು, ಉಂಟುಮಾಡು.
  • ಬಲವಾಗಿ – ತಟ್ಟು, ಬಡಿ; ಚಚ್ಚು.
  • (ಅಶಿಷ್ಟ) (ಯಾರನ್ನೇ, ಯಾವುದನ್ನೇ) ತಲೆ ಮೆಟ್ಟು; ಈರಿಸು.
  • (ಅಶಿಷ್ಟ) ಸಂಭೋಗಿಸು.

  • bang
    ನಾಮವಾಚಕ ನುಡಿಗಟ್ಟು
    with a bang
  • ಫಟೀರೇಟು; ರಪರಪ ಬಡಿಯುವುದು.
  • ಏಟಿನ ಸದ್ದು.
  • ಕೋವಿ ಸದ್ದು; ಬಂದೂಕಿನ ಶಬ್ದ.
  • (ಸ್ಫೋಟ ಮೊದಲಾದವುಗಳ) ದಡಾರನೆ ಆದ – ಶಬ್ದ, ಸದ್ದು.
  • (ಅಶಿಷ್ಟ) ಮಾದಕ ವಸ್ತುವಿನ ಚುಚ್ಚುಮದ್ದು.
  • (ಅಶಿಷ್ಟ) ಸಂಭೋಗ; ಮೈಥುನ.

  • bang
    ಕ್ರಿಯಾವಿಶೇಷಣ ನುಡಿಗಟ್ಟು
  • ರಪ್ಪನೆ; ಧಡೀರನೆ; ಇದ್ದಕ್ಕಿದ್ದಂತೆ ಆದ ಡಿಕ್ಕಿ, ಘರ್ಷಣೆಗಳಿಂದ ಕೂಡಿ.
  • ಇದ್ದಕ್ಕಿದ್ದಂತೆ; ಥಟ್ಟನೆ; ಥಟಕ್ಕನೆ; ಏಕಾಏಕಿ; ಹಠಾತ್ತಾಗಿ; ಅಚಾನಕ್ಕಾಗಿ.
  • (ಆಡುಮಾತು) ಸರಿಯಾಗಿ; ನೇರವಾಗಿ; ನಿಷ್ಕೃಷ್ಟವಾಗಿ: bang in the middle ಸರಿಯಾಗಿ ಮಧ್ಯದಲ್ಲಿ.
  • (ರೂಪಕವಾಗಿ ಸಹ) (ಸ್ಫೋಟ ಯಾ ಬಂದೂಕಿನ ಗುಂಡನ್ನು ಅನುಕರಿಸುವಂತೆ) ಸಿಡಿದು; ಢಮಾರೆಂದು: bang went my hopes of success ಜಯದ ನನ್ನ ಆಶೆಗಳೆಲ್ಲ ಢಮಾರೆಂದವು.
  • (ಆಡುಮಾತು) ಪೂರ್ತಿಯಾಗಿ.

  • bang
    ನಾಮವಾಚಕ
    (ಹಣೆಯ ಮೇಲೆ ಇಳಿಬಿಟ್ಟ) ಮೋಟು ಮುಂಗುರುಳು; ಜುಲಿಪೆ.

    bang
    ಸಕರ್ಮಕ ಕ್ರಿಯಾಪದ
    (ಹಣೆಯ ಮೇಲೆ ಬೀಳುವಂತೆ) ಮುಂಗುರುಳನ್ನು ಮೊಟಕಿಸು ಯಾ ಕತ್ತರಿಸು.

    bang-up
    ಗುಣವಾಚಕ
    (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಉತ್ತಮ; ಶ್ರೇಷ್ಠದರ್ಜೆಯ.

    banger
    ನಾಮವಾಚಕ
    (ಮುಖ್ಯವಾಗಿ ಅಶಿಷ್ಟ)
  • ಸಾಸೆಜ್‍ ಮಾಂಸಭಕ್ಷ್ಯ.
  • ಪಟಾಕಿ.
  • ಸದ್ದುಮಾಡುವ ಹಳೆಯ ಕಾರು.

  • bangle
    ನಾಮವಾಚಕ
  • ಬಳೆ; ಕಂಕಣ; ಕಡಗ.
  • ಅಂದುಗೆ; ಕಾಲುಬಳೆ; ಕಾಲಂದುಗೆ; ರುಳಿ.

  • bangtail
    ನಾಮವಾಚಕ
  • (ಕುದುರೆಯ) ಮೊಂಡುಬಾಲ.
  • (ಮುಖ್ಯವಾಗಿ ಮೊಂಡುಬಾಲದ) ಕುದುರೆ.
  • (ಅಶಿಷ್ಟ) ಪಂದ್ಯದ ಕುದುರೆ.


  • logo