logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acescent
ಗುಣವಾಚಕ
  • ಹುಳಿಯುವ; ಹುಳಿಗೂಡುವ; ಹುಳಿ ತಿರುಗುವ.
  • ಹುಳಿ ಹುಳಿಯಾದ; ಹುಳ್ಳನೆಯ; ಸ್ವಲ್ಪ ಹುಳಿಯಾದ (ರೂಪಕವಾಗಿ ಸಹ).

  • acet-
    ಸಮಾಸ ಪೂರ್ವಪದ
    (= aceto- ಮುಖ್ಯವಾಗಿ ಸ್ವರದ ಹಿಂದೆ ಬಂದಾಗ): acetamide.

    acetabulum
    ನಾಮವಾಚಕ
  • (ಪ್ರಾಚೀನ ರೋಮನರು ಬಳಸುತ್ತಿದ್ದ) ಚುಕ್ರಪಾತ್ರೆ; ಸಿರ್ಕಪಾತ್ರೆ; ಊಟದ ಮೇಜಿನ ಮೇಲೆ ಬಳಸುವ ವಿನಿಗರ್‍ ಮೊದಲಾದ ಪಾನೀಯಗಳ ಪುಟ್ಟ ಬಟ್ಟಲು.
  • (ಕಟಲ್‍ ಮೀನು ಮೊದಲಾದವುಗಳ) ಆಸಿಟ್ಯಾಬ್ಯುಲಮ್‍; ಬಟ್ಟಲಿನಾಕಾರದ, ಆಹಾರ ಹೀರುವ ಅಂಗ.
  • (ಅಂಗರಚನಾಶಾಸ್ತ್ರ) ಕುದುರು; ತೊಡೆಯ ಕೀಲು ಆಡುವ ಎಲುಬಿನ ಕುಳಿ.
  • (ಅಂಗರಚನಾಶಾಸ್ತ್ರ) ಕೀಟಗಳ ಕಾಲಿನ ಸಂದುಕುಳಿ.

  • acetaldehyde
    ನಾಮವಾಚಕ
    (ರಸಾಯನವಿಜ್ಞಾನ) ಆಸಿಟ್ಯಾಲ್ಡಿಹೈಡು; ತೆರೆದ ಸರಣಿ ಆಲ್ಡಿಹೈಡುಗಳಲ್ಲಿ ಎರಡನೆಯದು; ಈಥೈಲ್‍ ಆಲ್ಕಹಾಲಿನ ಉತ್ಕರ್ಷಣದಿಂದ ಉತ್ಪತ್ತಿಯಾಗುವ, ಬಣ್ಣವಿಲ್ಲದ, ನೀರಿನಲ್ಲಿ ಕರಗುವ, ಕಟುವಾದ ಹಣ್ಣಿನಂಥ ವಾಸನೆಯುಳ್ಳ ಸುಲಭವಾಗಿ ಬಾಷ್ಪವಾಗುವ, ಕನ್ನಡಿಗಳಿಗೆ ಲೇಪ ಹಾಕುವಲ್ಲಿ ಹಾಗೂ ಕಾರ್ಬನಿಕ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಬಳಸುವ ಆಲ್ಡಿಹೈಡು, ${\rm CH}_3{\rm CHO}$.

    acetate
    ನಾಮವಾಚಕ
    (ರಸಾಯನವಿಜ್ಞಾನ) ಆಸಿಟೇಟ್‍; ಅಸಿಟಿಕಾಮ್ಲದ ಲವಣ ಯಾ ಎಸ್ಟರು, ಮುಖ್ಯವಾಗಿ ಬಟ್ಟೆಗಳು, ಗ್ರಾಮಹೋನ್‍ ರೆಕಾರ್ಡು, ಮೊದಲಾದವುಗಳನ್ನು ತಯಾರಿಸಲು ಬಳಸುವ ಸೆಲ್ಯುಲೋಸ್‍ ಎಸ್ಟರು.

    acetate fibre
    ನಾಮವಾಚಕ
    ಆಸಿಟೇಟ್‍ ನೂಲು; ಸೆಲ್ಯುಲೋಸ್‍ ಆಸಿಟೇಟ್‍ನಿಂದ ಕೃತಕವಾಗಿ ತಯಾರಿಸುವ ದಾರ, ನೂಲು.

    acetate silk
    ನಾಮವಾಚಕ
    (ಆಸಿಟೇಟ್‍) ರೇಷ್ಮೆ; ಸೆಲ್ಯುಲೋಸ್‍ ಆಸಿಟೇಟ್‍ನಿಂದ ಕೃತಕವಾಗಿ ತಯಾರಿಸುವ ರೇಷ್ಮೆ ಬಟ್ಟೆ.

    acetic
    ಗುಣವಾಚಕ
    (ರಸಾಯನವಿಜ್ಞಾನ) ಅಸೀಟಿಕ್‍; ಅಸೀಟಿಕಾಮ್ಲ ಯಾ ಹುಳಿರಸಕ್ಕೆ ಸಂಬಂಧಿಸಿದ; ಸಿರ್ಕಕ್ಕೆ ಯಾ ವಿನಿಗರ್‍ಗೆ ಸಂಬಂಧಿಸಿದ.

    acetic acid
    ನಾಮವಾಚಕ
    (ರಸಾಯನವಿಜ್ಞಾನ) ಅಸೀಟಿಕಾಮ್ಲ; ವಿನಿಗರ್‍ಗೆ ಘಾಟಿನ ರುಚಿಯನ್ನು ಕೊಡುವ, ನೀರಿನಲ್ಲಿ ಮಿಶ್ರವಾಗಲ್ಲ ಆಮ್ಲ, ತೆರೆದ ಸರಣಿ ಆಮ್ಲಗಳಲ್ಲಿ ಎರಡನೆಯದು, ${\rm CH}_3{\rm COOH}$.

    acetification
    ನಾಮವಾಚಕ
    ಅಸೆಟೀಕರಣ:
  • ಹುಳಿಯಿಸುವಿಕೆ; ಬ್ಯಾಕ್ಟೀರಿಯಾಗಳ ಕ್ರಿಯೆಯಿಂದ ಹುಳಿ ಯಾ ವಿನಿಗರ್‍ ಆಗಿ ಮಾರ್ಪಡಿಸುವುದು.
  • (ರಸಾಯನವಿಜ್ಞಾನ) ಅಸೀಟಿಕ್‍ ಕಿಣ್ವದಿಂದ ಅಸೀಟಿಕ್‍ ಆಮ್ಲ ಉತ್ಪತ್ತಿ ಮಾಡುವಿಕೆ.


  • logo