logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tasteable
ಗುಣವಾಚಕ
= tastable.

tasteful
ಗುಣವಾಚಕ
(ವ್ಯಕ್ತಿ, ಕಲಾಕೃತಿ, ಮೊದಲಾದವುಗಳ ವಿಷಯದಲ್ಲಿ) ಸದಭಿರುಚಿಯ; ರಸಿಕತೆಯ; ಒಳ್ಳೆಯ ಅಭಿರುಚಿ ಸೂಚಿಸುವ ಯಾ ಅಭಿರುಚಿಯಿಂದ ಮಾಡಿದ.

tastefully
ಕ್ರಿಯಾವಿಶೇಷಣ
ಸದಭಿರುಚಿಯಿಂದ ಕೂಡಿ; ರಸಿಕತೆಯಿಂದ; ಒಳ್ಳೆಯ ಅಭಿರುಚಿ ತೋರಿಸುವಂತೆ.

tastefulness
ನಾಮವಾಚಕ
ಸದಭಿರುಚಿ; ಒಳ್ಳೆಯ ಅಭಿರುಚಿ ಇರುವಿಕೆ.

tasteless
ಗುಣವಾಚಕ
  • ಸಪ್ಪೆ; ನೀರಸ; ರುಚಿ ಇಲ್ಲದ.
  • ಸ್ವಾರಸ್ಯ ಇಲ್ಲದ; ನೀರಸವಾದ.
  • ಉತ್ತಮಾಭಿರುಚಿ ಇಲ್ಲದ.
  • (ಭಾಷೆ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅರಸಿಕ; ಸುಸಂಸ್ಕಾರಹೀನ; ಕೀಳು ಮಟ್ಟದ.

  • tastelessly
    ಕ್ರಿಯಾವಿಶೇಷಣ
  • ಸಪ್ಪೆಯಾಗಿ; ನೀರಸವಾಗಿ.
  • ಸ್ವಾರಸ್ಯವಿಲ್ಲದಂತೆ.
  • ಉತ್ತಮಾಭಿರುಚಿ ಇಲ್ಲದೆ.
  • ಅರಸಿಕ ರೀತಿಯಲ್ಲಿ; ಸಂಸ್ಕಾರಹೀನವಾಗಿ.

  • tastelessness
    ನಾಮವಾಚಕ
  • ಸಪ್ಪೆಯಾಗಿರುವಿಕೆ; ನೀರಸತೆ.
  • ಸ್ವಾರಸ್ಯಹೀನತೆ.
  • ಉತ್ತಮಾಭಿರುಚಿ ಇಲ್ಲದಿರುವುದು; ರುಚಿಹೀನತೆ.

  • taster
    ನಾಮವಾಚಕ
  • ಆಸ್ವಾದಕ; ರುಚಿಪರೀಕ್ಷಕ:
    1. (ಟೀ, ಮದ್ಯ, ಮೊದಲಾದವನ್ನು) ರುಚಿ ನೋಡಲು ನೇಮಿತನಾದವನು.
    2. ಆಹಾರ, ಪಾನೀಯಗಳನ್ನು ರುಚಿನೋಡಿ ಪರೀಕ್ಷಿಸಲು ನೇಮಕವಾದವನು.
  • ರುಚಿಬಟ್ಟಲು; ಮದ್ಯ ಪರೀಕ್ಷಕನ ಸಣ್ಣಬಟ್ಟಲು.
  • ಆಹಾರ ಪರೀಕ್ಷಕ; ವಿಷಪ್ರಾಶನ ಮೊದಲಾದ ಅಪಾಯ ನಿವಾರಿಸಲು, ರಾಜರು, ಸರ್ವಾಧಿಕಾರಿಗಳು, ಮೊದಲಾದವರು ತಮಗಾಗಿ ತಯಾರಾದ ಆಹಾರವನ್ನು ತಾವು ತಿನ್ನುವ ಮೊದಲೇ ರುಚಿನೋಡಿ ಪರೀಕ್ಷಿಸಲು ನೇಮಿಸಿದ ಆಹಾರ ಪರೀಕ್ಷಕರು.
  • ರುಚಿ ಚಮಚ; ಗಿಣ್ಣಿನಿಂದ ‘ಸ್ಯಾಂಪಲ್‍’ ತುಂಡನ್ನು ಕತ್ತರಿಸಿ ಪರೀಕ್ಷಿಸಲು ಬಳಸುವ ಸಲಕರಣೆ.

  • tastily
    ಕ್ರಿಯಾವಿಶೇಷಣ
  • ಸವಿಯಾಗಿ; ರುಚಿಕರವಾಗಿ; ಆಸ್ವಾದನೀಯವಾಗಿ.
  • = tastefully.

  • tastiness
    ನಾಮವಾಚಕ
    ಸವಿಯಾಗಿರುವಿಕೆ; ರುಚಿಯಾಗಿರುವುದು; ಆಸ್ವಾದನೀಯತೆ.


    logo