logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

offshore
ಗುಣವಾಚಕ
  • ಕಡಲಕರೆಯಾಚೆಯ; ಕಡಲಕರೆಯಿಂದ ಸ್ವಲ್ಪದೂರ ಇರುವ ಸಮುದ್ರ ಪ್ರದೇಶದ: offshore fisheries (ಕಡಲ) ಕರೆಯಾಚೆಯ ಮೀನುಗಾರಿಕೆಯ ಕ್ಷೇತ್ರ, ವಲಯ.
  • (ಗಾಳಿಯ ವಿಷಯದಲ್ಲಿ) ಸಮುದ್ರದತ್ತ, ಸಮುದ್ರದ ಕಡೆ ಬೀಸುವ.
  • (ಸರಕುಗಳು, ಠೇವಣಿಗಳ ವಿಷಯದಲ್ಲಿ) ವಿದೇಶದಲ್ಲಿ ಮಾಡಿದ ಯಾ ನೋಂದಾಯಿಸಿದ: offshore purchases ಬೇರೊಂದು ದೇಶದಿಂದ ಕೊಂಡುಕೊಳ್ಳುವ ಸರಕುಗಳು.

  • offside
    ಗುಣವಾಚಕ
    (ಕ್ರೀಡೆ) (ಮೈದಾನದ ಆಟದಲ್ಲಿ ಆಡುವ ಆಟಗಾರನ ವಿಷಯದಲ್ಲಿ) ಸಾಮಾನ್ಯವಾಗಿ ಚೆಂಡು ಆ ಸ್ಥಾನವನ್ನು ತಲುಪುವುದಕ್ಕಿಂತ ಮುಂಚೆಯೇ ಅಲ್ಲಿರುವ (ಆಟದ ಮೇಲೆ ಪರಿಣಾಮ ಬೀರಿದರೆ ಇದಕ್ಕೆ ಅನುಮತಿಯಿಲ್ಲ).

    offside
    ನಾಮವಾಚಕ
    (ಕೆಲವೊಮ್ಮೆ ವಿಶೇಷಣವಾಗಿ) (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) (ವಾಹನ, ಪ್ರಾಣಿ, ಮೊದಲಾದವುಗಳ) ಬಲಭಾಗ; ಬಲಪಕ್ಕ; ಬಲಪಾರ್ಶ್ವ.

    offsider
    ನಾಮವಾಚಕ
    (ಆಸ್ಟ್ರೇಲಿಯ) (ಆಡುಮಾತು) ಪಾಲುದಾರ, ಸಹಾಯಕ ಯಾ ಬದಲಿ.

    offspring
    ನಾಮವಾಚಕ
    (ಬಹುವಚನ ಅದೇ)
  • (ವ್ಯಕ್ತಿಯೊಬ್ಬನ)
    1. ಮಗು ಯಾ ಮಕ್ಕಳು.
    2. ಪೀಳಿಗೆ; ಸಂತತಿ; ಸಂತಾನ.
  • (ಪ್ರಾಣಿಯೊಂದರ)
    1. ಮರಿ ಯಾ ಮರಿಗಳು.
    2. ಸಂತತಿ; ಸಂತಾನ.
  • (ರೂಪಕವಾಗಿ) ಫಲ; ಪರಿಣಾಮ: the offspring of an inventive brain ಆವಿಷ್ಕರಣಶೀಲ ಬುದ್ಧಿಯ ಫಲ.

  • Oflag
    ನಾಮವಾಚಕ
    (ಅಧಿಕಾರಿಗಳನ್ನು ಬಂಧಿಸಿಡುವ) ಜರ್ಮನ್‍–ಸೆರೆಮನೆ, ಬಂದಿಖಾನೆ.

    oft
    ಕ್ರಿಯಾವಿಶೇಷಣ ಪದಗುಚ್ಛ
    (ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ) = often (ಭೂತಕೃದಂತ ಮತ್ತು ವರ್ತಮಾನ ಕೃದ್ವಾಚಿಯೊಡನೆ ಸಮಾಸಗಳಲ್ಲಿ ಹೊರತು ಉಳಿದ ಕಡೆ ಪ್ರಾಚೀನ ಪ್ರಯೋಗ): oft-told ಹವು ಬಾರಿ ಹೇಳಿದ; ಬಾರಿ ಬಾರಿ ಹೇಳಿದ. many a time & oft ಅನೇಕವೇಳೆ ಮತ್ತು ಹಲವು ಸಲ.

    oft-times
    ಕ್ರಿಯಾವಿಶೇಷಣ
    = 1often.

    often
    ಕ್ರಿಯಾವಿಶೇಷಣ ಪದಗುಚ್ಛ
    1. ಮತ್ತೆ ಮತ್ತೆ; ಪದೇಪದೇ.
    2. ಅನೇಕವೇಳೆ; ಆಗಿಂದಾಗ್ಗೆ.
    3. ಕಡಮೆ ಅವಧಿಗಳಲ್ಲಿ, ಅಂತರಗಳಲ್ಲಿ.
  • ಹಲವು ಬಾರಿ; ಅನೇಕ–ಸಲ, ಸಾರಿ, ಸರ್ತಿ; ಹಲವು ಸಂದರ್ಭಗಳಲ್ಲಿ: the patient often dies of it ಹಲವು ಸಂದರ್ಭಗಳಲ್ಲಿ ರೋಗಿ ಅದರಿಂದ ಸಾವಿಗೀಡಾಗುತ್ತಾನೆ.

  • often
    ಗುಣವಾಚಕ
    (ಪ್ರಾಚೀನ ಪ್ರಯೋಗ) ಪದೇಪದೇ, ಮತ್ತೆಮತ್ತೆ–ಮಾಡುವ; ನಿರಂತರ; ಅನೇಕ ಬಾರಿಯ: by often study of it ಪದೇಪದೇ ಮಾಡಿದ ಅದರ ಅಧ್ಯಯನದಿಂದ.


    logo