logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Canarese
ನಾಮವಾಚಕ
Kanarese ನ ರೂಪಾಂತರ.

canary
ನಾಮವಾಚಕ
  • ಕನೇರಿ (ಹಕ್ಕಿ); ಮೂಲತಃ ಕನೇರಿ ದ್ವೀಪಗಳ, ಸೆರಿನಸ್‍ ಕನೇರಿಯಸ್‍ ಕುಲಕ್ಕೆ ಸೇರಿದ, ಹಳದಿ ಗರಿಗಳುಳ್ಳ, ಹಾಡುವ ಹಿಂಚ್‍ ಹಕ್ಕಿ.
  • (ಚರಿತ್ರೆ) ಕನೇರಿ ಮದ್ಯ; ಕನೇರಿ ದ್ವೀಪಗಳ, ಷೆರಿಯನ್ನು ಹೋಲುವ, ಬಿಳಿಯ ಸಿಹಿ ವೈನು.
  • ಕನೇರಿ ಹಳದಿ; ತಿಳಿಯಾದ ಹಸುರು ಹಳದಿ ಬಣ್ಣ.
  • ಉಜ್ಜ್ವಲ ಹಳದಿ ಬಣ್ಣ; ಹಚ್ಚ ಹಳದಿ.

  • canary bird
    ನಾಮವಾಚಕ
    =canary(1).

    canary creeper
    ನಾಮವಾಚಕ
    ಕನೇರಿಹಂಬು; ಹಳದಿ ಹೂ ಬಿಡುವ, ಟ್ರೋಪೀಯಲಮ್‍ ಪೆರಗ್ರಿನಮ್‍ ಕುಲಕ್ಕೆ ಸೇರಿದ ಬಳ್ಳಿ.

    canary-coloured
    ಗುಣವಾಚಕ
    ಹಚ್ಚ ಹಳದಿಯ; ಹೊಳೆವ, ಉಜ್ಜ್ವಲವಾದ–ಹಳದಿ ಬಣ್ಣದ.

    canary-seed
    ನಾಮವಾಚಕ
    ಕನೇರಿಕಾಳು; ಕನೇರಿ ಹಕ್ಕಿ ಮತ್ತು ಪಂಜರದ ಪಕ್ಷಿಗಳಿಗೆ ತಿನ್ನಿಸುವ ಕಾಳು.

    canary-yellow
    ನಾಮವಾಚಕ
    =canary(4).

    canasta
    ನಾಮವಾಚಕ
    ಕನ್ಯಾಸ್ಟ:
  • (ಉರುಗ್ವೆ ದೇಶದಲ್ಲಿ ಹುಟ್ಟಿದ) ರಮ್ಮಿ ತೆರನ ಒಂದು ಇಸ್ಪೀಟ್‍ ಆಟ.
  • ಈ ಆಟದಲ್ಲಿ ಏಳು ಎಲೆಗಳ ಗುಂಪು.

  • canaster
    ನಾಮವಾಚಕ
    ಹೊಗೆಸೊಪ್ಪಿನ ಪುಡಿ; ಹೊಗೆಸೊಪ್ಪಿನ ತರಗಿನಿಂದ ಮಾಡಿದ ಪುಡಿ.

    cancan
    ನಾಮವಾಚಕ
    (ಹಿಂದೆ ಹ್ರಾನ್ಸಿನ) ಕಾಲುಚಪ್ಪಾಳೆ ಕುಣಿತ; ಪಾದತಾಡನ ನೃತ್ಯ; ಕಾಲು ಮತ್ತು ಒಳಲಂಗಗಳನ್ನು ಪ್ರದರ್ಶಿಸುವ, ಮೇಲಕ್ಕೆ ನೆಗೆದು ಪಾದಗಳನ್ನು ಪರಸ್ಪರ ಬಡಿಯುವ ಒಂದು ನರ್ತನ.


    logo