bandy words with ಪಟ್ಟು ಹಿಡಿದು ಯಾ ಬಿಡದೆ ವಾದಿಸು; ಮಾತಿಗೆ ಮಾತಾಡು; ಮುಖ್ಯವಾಗಿ ಜಗಳದಲ್ಲಿ ಬೇಗ ಎದುರಾಡು, ಜವಾಬು ಕೊಡು, ಉತ್ತರ ಕೊಡು.
(ಚೆಂಡನ್ನು) ಎಸೆದಾಡು; ಅತ್ತಿಂದಿತ್ತ, ಅಲ್ಲಿಂದಿಲ್ಲಿಗೆ, ಅತ್ತಿತ್ತ – ಎಸೆ ಯಾ ಹೊಡೆ.
(ರೂಪಕವಾಗಿ) (ಕಥೆ, ಸುದ್ದಿ, ವದಂತಿ, ಮೊದಲಾದವನ್ನು) ಒಬ್ಬರಿಂದೊಬ್ಬರಿಗೆ ಹರಡು ಯಾ ಹೇಳುತ್ತ ಹೋಗು.
ಬೈದಾಡು; ಬಯ್ಗಳಿಗೆ ಪ್ರತಿಯಾಗಿ ಬಯ್ಯು.
(ಹೆಸರು ಮೊದಲಾದವುಗಳ ವಿಷಯದಲ್ಲಿ) ಹಗುರವಾಗಿ, ಅಗೌರವದಿಂದ ಯಾ ಹೀನಾಯವಾಗಿ – ಮಾತನಾಡು, ಚರ್ಚಿಸು: his name was bandied about ಅವನ ವಿಷಯವಾಗಿ ಅಗೌರವದಿಂದ ಮಾತನಾಡುತ್ತಿದ್ದರು.
(ಏಟು, ಹೊಡೆತ, ಮೊದಲಾದವುಗಳ ವಿಷಯದಲ್ಲಿ) ಕೊಟ್ಟು ತೆಗೆದುಕೊ; ಹೊಡೆತ ತಿನ್ನು; ಹೊಡೆದಾಡು; ಬಡಿದಾಡು.
(ವ್ಯಕ್ತಿಯೊಡನೆ ಶುಭಾಶಯ, ಅಭಿನಂದನೆ, ಮೊದಲಾದವುಗಳನ್ನು) ಕೊಟ್ಟು ತೆಗೆದುಕೊ; ವಿನಿಮಯ ಮಾಡಿಕೊ.
bandy
ನಾಮವಾಚಕ
ಹಳೆಯ ರೀತಿಯ ಟೆನಿಸ್ ಆಟ.
ಹಾಕಿ ಆಟ.
ಹಾಕಿ ದಾಂಡು; ಸೊಟ್ಟ ದಾಂಡು; ಕೊಕ್ಕೆತುದಿದಾಂಡು.
bandy
ನಾಮವಾಚಕ
(ಇಂಡಿಯದ) ಬಂಡಿ; ಗಾಡಿ; ಚಕ್ಕಡಿ.
bandy
ಗುಣವಾಚಕ
(ಕಾಲುಗಳ ವಿಷಯದಲ್ಲಿ) ಕಿಸಿದಿರುವ; ಮಂಡಿಗಳ ಹತ್ತಿರ ಅಗಲವಾಗಿರುವಂತೆ ಹೊರಗಡೆಗೆ ಬಗ್ಗಿದ; ಹೊರಬಾಗಿನ.
bandy-ball
ನಾಮವಾಚಕ
= 2bandy(2).
bandy-legged
ಗುಣವಾಚಕ
(ಮನುಷ್ಯರ ಯಾ ಪ್ರಾಣಿಗಳ ವಿಷಯದಲ್ಲಿ) ಕಿಸುಗಾಲುಗಳುಳ್ಳ.
bane
ನಾಮವಾಚಕ
(ಪ್ರಾಚೀನ ಪ್ರಯೋಗ ಯಾ ರೂಪಕವಾಗಿ ಯಾ ಸಮಸ್ತಪದಗಳಲ್ಲಿ) ವಿಷ; ಪಾಷಾಣ; ನಂಜು; ಸಿಂಗಿ: rats bane ಇಲಿಪಾಷಾಣ. hen bane ಕೋಳಿ ವಿಷ.
ನಾಶಕ; ಹಾನಿಕಾರಿ; ಅನರ್ಥಕಾರಿ; ನಾಶಕ್ಕೆ ಯಾ ತೊಂದರೆಗೆ ಕಾರಣ: drink will be the bane of him ಕುಡಿತವೇ ಅವನ ನಾಶಕ್ಕೆ ಕಾರಣ. he is the bane of my life ಅವನೇ ನನ್ನ ಜೀವನದ ಅನರ್ಥಕ್ಕೆ ಕಾರಣ.
(ಕಾವ್ಯಪ್ರಯೋಗ) ಹಾನಿ; ಕೇಡು; ನಾಶ; ವಿನಾಶ; ಅನರ್ಥ.
(ಕುರಿಗಳ) ಯಕೃತ್ತಿನ ರೋಗ.
baneberry
ನಾಮವಾಚಕ
(ಸಸ್ಯವಿಜ್ಞಾನ) ವಿಷಫಲ; ಪಾಷಾಣಬೆರಿ:
ಕೆಂಪು ಯಾ ಬಿಳಿ ಬಣ್ಣದ ವಿಷಭರಿತ ಹಣ್ಣುಗಳನ್ನು ಬಿಡುವ ಒಂದು ಗಿಡ.