logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Aceldama
ನಾಮವಾಚಕ
  • ಏಸುವನ್ನು ಹಿಡಿದು ಕೊಡಲು ಜೂಡಸ್‍ಗೆ ಕೊಟ್ಟ ಹಣದಿಂದ ಜೆರುಸಲೆಂ ಬಳಿ ಕೊಂಡ ಜಾಗ.
  • (ರೂಪಕವಾಗಿ) ನೆತ್ತರಕಣ; ಕೊಲೆ ಜಾಗ; ಹತ್ಯೆ ಸ್ಥಳ; ವಧಸ್ಥಾನ.

  • acentric
    ಗುಣವಾಚಕ
    ಅಕೇಂದ್ರಿಯ; ಕೇಂದ್ರರಹಿತ; ಕೇಂದ್ರವಿಲ್ಲದ.

    acephalous
    ಗುಣವಾಚಕ
  • ತಲೆಯಿಲ್ಲದ; ಅಶಿರ; ಶಿರೋರಹಿತ.
  • ಮುಖಂಡನಿಲ್ಲದ; ನಾಯಕರಹಿತ; ನಾಯಕನನ್ನು ಅಂಗೀಕರಿಸದ.
  • (ಪ್ರಾಣಿವಿಜ್ಞಾನ) ಅಶಿರ; ಶಿರೋರಹಿತ; ತಲೆಯು ಎದೆಯೊಡನೆ ಸೇರಿಕೊಂಡಿರುವ; ದೇಹದಲ್ಲಿ ತಲೆಯ ಭಾಗವಿಲ್ಲದ.
  • (ಸಸ್ಯವಿಜ್ಞಾನ) ಛಿನ್ನಾಗ್ರ; ತಲೆ ಕತ್ತರಿಸಿದ; ತಲೆ ಮೊಟಕಾದ.
  • (ಹಸ್ತಪ್ರತಿ, ಪದ್ಯ, ಮೊದಲಾದವುಗಳ ವಿಷಯದಲ್ಲಿ) ಛಿನ್ನಾದಿ; ಪ್ರತಿಯ ಮೊದಲ ಭಾಗ ಯಾ ಪಂಕ್ತಿಯ ಮೊದಲ ಗಣ ಇಲ್ಲದ.

  • acerb
    ಗುಣವಾಚಕ
  • (ನಾಲಗೆಗೆ) ಹುಳಿಯೊಗಚಿನ; ಹುಳಿಯೊಗರಿನ.
  • (ಮಾತು, ಮನೋಧರ್ಮ, ವರ್ತನೆ, ಮೊದಲಾದವುಗಳ ವಿಷಯದಲ್ಲಿ) ಕಹಿಯಾದ; ಕಟುವಾದ; ಚುಚ್ಚುವ; ನಿಷ್ಠುರವಾದ.

  • acerbate
    ಸಕರ್ಮಕ ಕ್ರಿಯಾಪದ
  • ಕಹಿಗೊಳಿಸು; ಹುಳಿಯಾಗಿಸು.
  • ರೇಗಿಸು; ಕೆರಳಿಸು.

  • acerbic
    ಗುಣವಾಚಕ
    = acerb.

    acerbity
    ನಾಮವಾಚಕ
  • (ರುಚಿಯಲ್ಲಿ) ಹುಳಿಯೊಗಚು; ಹುಳಿಯೊಗರು; ಹುಳುಚೊಗರು.
  • (ನಡೆ ನುಡಿ, ಮಾತು, ಮನೋಧರ್ಮ, ಮೊದಲಾದವುಗಳಲ್ಲಿ) ಕಟುತ್ವ; ಕಹಿ; ನಿಷ್ಠುರತೆ.

  • acervate
    ಗುಣವಾಚಕ
    (ಸಸ್ಯವಿಜ್ಞಾನ) ರಾಶಿಗೂಡಿದ; ಗೊಂಚಲುಗೊಂಚಲಾಗಿ ಯಾ ಗುಂಪುಗುಂಪಾಗಿ ಬೆಳೆಯುವ.

    acervation
    ನಾಮವಾಚಕ
    (ಸಸ್ಯವಿಜ್ಞಾನ) ರಾಶಿಗೂಡಿಕೆ; ಗುಂಪುಗೂಡಿಕೆ; ಗೊಂಚಲು ಗೊಂಚಲಾಗಿ ಯಾ ಗುಂಪುಗುಂಪಾಗಿ ಬೆಳೆಯುವಿಕೆ.

    acescence
    ನಾಮವಾಚಕ
    ಹುಳಿತ; ಹುಳಿಯುವಿಕೆ; ಹುಳಿ ತಿರುಗುವಿಕೆ.


    logo