logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Tass
ನಾಮವಾಚಕ
ಟ್ಯಾಸ್‍; ಸೋವಿಯತ್‍ ಒಕ್ಕೂಟದ ಅಧಿಕೃತ ವಾರ್ತಾ ಏಜನ್ಸಿ (ರಷ್ಯನ್‍ಭಾಷೆಯ Telegrafnoe agentsvo Sovetskogo Soyuza ಎಂಬಉದರ ಪ್ರಥಮಾಕ್ಷರಿ).

tass
ನಾಮವಾಚಕ
(ಸ್ಕಾಟ್ಲಂಡ್‍ ಪ್ರಯೋಗ).
  • ಸಣ್ಣ ಕಪ್ಪು, ಬಟ್ಟಲು.
  • (ಮದ್ಯ ಮೊದಲಾದವುಗಳ) ಸಣ್ಣ ಗುಟುಕು.

  • tassel
    ನಾಮವಾಚಕ
  • (ಮೆತ್ತೆ, ಟೋಪಿ, ಮೊದಲಾದವುಗಳಿಗೆ ಅಲಂಕಾರಕ್ಕಾಗಿ ಕಟ್ಟಿದ) ಕುಚ್ಚು; ಗೊಂಡೆ.
  • (ಮುಸುಕಿನ ಜೋಳ ಮೊದಲಾದವುಗಳ ಕುಚ್ಚಿನಂಥ) ತೆನೆ.

  • tassel
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಅಲಂಕಾರಕ್ಕಾಗಿ) ಕುಚ್ಚು ಕಟ್ಟು; ಗೊಂಡೆ ಕಟ್ಟು. (ಮುಸುಕಿನ ಜೋಳ ಮೊದಲಾದವುಗಳ ವಿಷಯದಲ್ಲಿ) ತೆನೆ– ಕಟ್ಟು, ಬಿಡು, ಹೊಡೆ.

    tassel
    ನಾಮವಾಚಕ
    ಆಸರೆ ಕಲ್ಲು ಯಾ ಮರ; ಗೋಡೆಯಲ್ಲಿನ ತೊಲೆಯ ಯಾ ದೂಲದ ಕೊನೆಗೆ ಆಸರೆಯಾಗುವಂತೆ ಇಡುವ, ಸಣ್ಣ ಕಲ್ಲು ಯಾ ಮರದ ತುಂಡು.

    tassie
    ನಾಮವಾಚಕ
    (ಸ್ಕಾಟ್ಲೆಂಡ್‍) ಸಣ್ಣ ಬಟ್ಟಲು.

    tastable
    ಗುಣವಾಚಕ
    ಆಸ್ವಾದನೀಯ; ರುಚಿ ನೋಡಬಹುದಾದ; ರುಚಿ ನೋಡಲು ಸಾಧ್ಯವಿರುವ.

    taste
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    taste $^1$blood.
  • ತಿಂದು ನೋಡು; ರುಚಿ ನೋಡು; ಸವಿದು ನೋಡು; ಆಸ್ವಾದಿಸು: do taste this cheese ಈ ಗಿಣ್ಣನ್ನು ತಿಂದಾದರೂ ನೋಡು.
  • (ಚಹ, ದ್ರಾಕ್ಷಾಮದ್ಯ, ಮೊದಲಾದವುಗಳ) ರುಚಿ ಪರೀಕ್ಷೇಮಾಡು; ರುಚಿ ನಿರ್ಧರಿಸು.
  • ಕೊಂಚ ತಿನ್ನು, ಕುಡಿ (ಮುಖ್ಯವಾಗಿ ನಿಷೇಧಾರ್ಥಗಳಲ್ಲಿ): has not tasted food for days ದಿನಗಟ್ಟಲೆ ಅವಳು(ನು) ಆಹಾರ ಮುಟ್ಟಿಲ್ಲ (ಸ್ವಲ್ಪವೂ ತಿಂದಿಲ್ಲ).
  • ರುಚಿ–ಹಿಡಿ, ಗ್ರಹಿಸು; (ಬಾಯಿಗೆ) ರುಚಿ ತೋರು; ರುಚಿಸು ( ಅಕರ್ಮಕ ಕ್ರಿಯಾಪದ ಸಹ): could taste the lemon ನಿಂಬೆಹಣ್ಣಿನ ರುಚಿ ಗ್ರಹಿಸಬಲ್ಲವನಾಗಿದ್ದ. ನಿಂಬೆಹಣ್ಣನ್ನು ಸವಿಯಬಲ್ಲವನಾಗಿದ್ದ. cannot taste with a cold ನೆಗಡಿಯಾದಾಗ ರುಚಿ ಗೊತ್ತಾಗುವುದಿಲ್ಲ.
  • (ಪ್ರಾಚೀನ ಪ್ರಯೋಗ) ಇಷ್ಟಪಡು; ಇಷ್ಟವಾಗು; ರುಚಿಸು: cannot taste a joke against himself ತನ್ನ ಬಗ್ಗೆ ಹಾಸ್ಯೋಕ್ತಿ ಅವನಿಗೆ ಇಷ್ಟವಾಗದು (ತನ್ನನ್ನು ಕುರಿತ ಹಾಸ್ಯ ಅವನಿಗೆ ರುಚಿಸುವುದಿಲ್ಲ).
  • ಅನುಭವಿಸು; ಅನುಭವವಿರು: shall not taste death ಸಾಯುವುದಿಲ್ಲ; ಸಾವನ್ನು ಅನುಭವಿಸುವುದಿಲ್ಲ. has not tasted success ಗೆದ್ದಿಲ್ಲ: ಗೆಲವನ್ನು ಅನುಭವಿಸಿಲ್ಲ.

  • taste
    ನಾಮವಾಚಕ ಪದಗುಚ್ಛ
  • ರುಚಿ; ಸ್ವಾದ; ಸವಿ: I cannot endure the taste of onions ನನಗೆ ಈರುಳ್ಳಿ ರುಚಿ ಆಗದು. white of egg has no taste ಮೊಟ್ಟೆಯ ಲೋಳೆಯಲ್ಲಿ ಯಾವ ರುಚಿಯೂ ಇರುವುದಿಲ್ಲ.
  • ರಸಗ್ರಹಣ; ರಸನಶಕ್ತಿ.
  • (ಆಹಾರ, ಪಾನೀಯ, ಮೊದಲಾದವುಗಳ) (ನಮೂನೆ ಪರೀಕ್ಷಿಸಲು) ತೆಗೆದುಕೊಂಡ ಸ್ವಲ್ಪ ಭಾಗ, ಮಾದರಿ ಪ್ರಮಾಣ.
  • (ರೂಪಕವಾಗಿ) (ಯಾವುದಾದರೂ ಅನುಭವದ) ರುಚಿ; ಸವಿ; ಕೊಂಚ ಅನುಭವ: a taste of the whip ಚಾವಟಿ (ಏಟಿನ) ರುಚಿ, ಸವಿ.
  • ಇಷ್ಟ; ಒಲವು; ಪಕ್ಷಪಾತ: has no taste for sweet things ಸಿಹಿ ಪದಾರ್ಥಗಳು ಇಷ್ಟವಿಲ್ಲ. a taste for drawing ಚಿತ್ರಲೇಖನದಲ್ಲಿ ಒಲವು. it is not to my taste ನನಗೆ ಅದು ಹಿಡಿಸದು, ಇಷ್ಟವಾಗುವುದಿಲ್ಲ. tastes differ ಒಬ್ಬೊಬ್ಬರ ರುಚಿ ಒಂದೊಂದು ತರಹವಾಗಿರುತ್ತದೆ (ಲೋಕೋ ಭಿನ್ನರುಚಿಃ). there is no accounting for tastes ಒಬ್ಬರ ರುಚಿ ಯಾಕೆ ಹೀಗೆ ಎಂದು ಹೇಳುವುದು ಕಷ್ಟ.
  • (ಕಲೆ, ಸಾಹಿತ್ಯ, ವರ್ತನೆ, ಮೊದಲಾದವುಗಳಲ್ಲಿ ಮುಖ್ಯವಾಗಿ ವಿಶಿಷ್ಟವಾದ) ಅಭಿಜ್ಞತೆ; ಅಭಿರುಚಿ; ರಸಜ್ಞತೆ: a man of good taste ಒಳ್ಳೆಯ ರಸಜ್ಞ; (ಕಲೆ ಮೊದಲಾದವುಗಳಲ್ಲಿ) ಸದಭಿರುಚಿಯುಳ್ಳವನು. a man of bad taste ಕೆಟ್ಟ ಅಭಿರುಚಿಯುಳ್ಳವನು; ಅಷ್ಟೇನೂ ಒಳ್ಳೆಯದಲ್ಲದುದನ್ನು ಆಶಿಸುವವನು, ಇಷ್ಟಪಡುವವನು.
  • ರುಚಿವಿವೇಕ; ಔಚಿತ್ಯ ವಿವೇಕ; ರಸವಿವೇಚನೆ: composed in admirable taste ಶ್ಲಾಘನೀಯ ರಸೌಚಿತ್ಯದಿಂದ ರಚಿಸಲಾಗಿದೆ. the remark was in bad taste (ಅವನು ಹೇಳಿದ) ಮಾತಿನಲ್ಲಿ ರಸವಿವೇಚನೆ ಇಲ್ಲ (ಸಂಸ್ಕೃತಿ ಸಾಲದು); ಅವನ ಮಾತು ಕೆಟ್ಟ ಅಭಿರುಚಿಯದಾಗಿತ್ತು.

  • taste-bud
    ನಾಮವಾಚಕ
    ರಸನ ಗ್ರಂಥಿಗಳು; ನಾಲಿಗೆಯ ಲಾಲಾಚರ್ಮದ ಹೊರಪೊರೆಯೊಳಗಿನ ರುಚಿಗ್ರಾಹಕ ಗ್ರಂಥಿಗಳು.


    logo