logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

offishly
ಕ್ರಿಯಾವಿಶೇಷಣ
(ಆಡುಮಾತು) (ಬೇರೆಯವರೊಡನೆ) ಬೆರೆಯದಂತೆ; ದೂರವಾಗಿ; ಸಲಿಗೆ ಕೊಡದಂತೆ.

offishness
ನಾಮವಾಚಕ
ವಿವಿಕ್ತತೆ; ಬೇರೆಯವರೊಡನೆ ಬೆರೆಯದಿರುವಿಕೆ; ಸಲಿಗೆ ಕೊಡದಿರುವಿಕೆ.

offload
ಸಕರ್ಮಕ ಕ್ರಿಯಾಪದ
(ಹಡಗು, ವಾಹನ, ಮೊದಲಾದವುಗಳಿಂದ) ಸರಕು, ಸಾಮಾನು–ಇಳಿಸು.

offprint
ನಾಮವಾಚಕ
ಬಿಡಿಪ್ರತಿ; ಒಂದು ಪುಸ್ತಕದ ಯಾ ಸಂಕಲನದ ಭಾಗವಾದ ಲೇಖನ ಮೊದಲಾದವನ್ನು ಬಿಡಿಯಾಗಿ ಮುದ್ರಿಸಿದ ಪ್ರತಿ.

offscreen
ಗುಣವಾಚಕ
  • (ಸಿನಿಮಾ, ದೂರದರ್ಶನ, ಮೊದಲಾದವುಗಳ) ಪರದೆಯ ಮೇಲೆ ಬರದ, ಕಾಣಿಸದ; ತೆರೆಯಾಚೆಯ; ಪರದೆಯಾಚಿನ: an offscreen voice ತೆರೆಯಾಚೆಯ ಧ್ವನಿ.
  • ಸಿನಿಮಾ ಪರದೆಯ ಮೇಲಿನಂತಿರುವುದಕ್ಕೆ ಬದಲಾಗಿ ನಿಜಜೀವನದಲ್ಲಿನ: her offscreen personality was different from her movie image ಅವಳ ನಿಜ ವ್ಯಕ್ತಿತ್ವ ಅವಳ ಸಿನಿಮಾಕಲ್ಪಿತ ಬಿಂಬಕ್ಕಿಂತ ಭಿನ್ನವಾಗಿತ್ತು.

  • offscreen
    ಕ್ರಿಯಾವಿಶೇಷಣ
  • ತೆರೆರಹಿತವಾಗಿ; ಪರದೆ ಬಳಸದೆ.
  • ಸಿನಿಮಾ ದೃಶ್ಯದ ಹೊರಗೆ; ದೃಶ್ಯ ತೋರಿಸುವುದಕ್ಕಿಂತ ಹೊರ ಪ್ರದೇಶದಲ್ಲಿ.

  • offset
    ನಾಮವಾಚಕ
  • (ಕಾಂಡದಿಂದ ಯಾ ಬೇರಿನಿಂದ ಮೊಳೆತು ಬೇರೆ ಗಿಡವಾಗಿ ಬೆಳೆಸಲು ಬರುವ) ಸಣ್ಣಕುಡಿ; ಮೊಳಕೆ; ಅಂಕುರ; ಗಿಣ್ಣು.
  • (ರೂಪಕವಾಗಿ) (ಒಂದುವಂಶದ) ಶಾಖೆ.
  • ಉತ್ತಾರ; ಪರಿಹಾರ; ಈಡು; ಪ್ರತಿಭಾರ; ಸರಿತೂಕ; ಪ್ರತಿ ಯೋಜನೆ; ವ್ಯತಿರಿಕ್ತ ಪ್ರಭಾವ ತಗ್ಗಿಸುವ ಯಾ ನಿಷ್ಟ್ರಯೋಜನಗೊಳಿಸುವ–ಯೋಜನೆ ಯಾ ಹಣ.
  • (ವಾಸ್ತುಶಿಲ್ಪ) ವಾಟದಂಚು; ಬಾಗೋರೆ; (ಗೋಡೆ ಮೊದಲಾದವುಗಳಲ್ಲಿ ಮೇಲ್ಭಾಗದ ದಪ್ಪ ಕಡಿಮೆಯಾಗಲು ಆರಂಭವಾಗುವ ಸ್ಥಳದಲ್ಲಿ ಮಾಡಿದ) ಇಳಿಜಾರು ಅಂಚು.
  • (ಪರ್ವತ ಯಾ ಬೆಟ್ಟದ) ಚಾಚು (ಭಾಗ).
  • ನಾಳದ ಬಾಗು; ಒಂದು ನಾಳದ (ಕೊಳವೆಯ) ಮಾರ್ಗಕ್ಕೆ ಅಡ್ಡ ಬರುವ ತಡೆಯನ್ನು ದಾಟಿಹೋಗಲು ಅದರಲ್ಲಿ ಮಾಡಿದ ಬಾಗು.
  • (ಕೆಲವೊಮ್ಮೆ ವಿಶೇಷಣವಾಗಿ ಪ್ರಯೋಗ) (ಮುದ್ರಣ) ಆಹ್‍ಸೆಟ್‍ ಮುದ್ರಣ; ಒತ್ತಿದಚ್ಚು, (ಮುದ್ರಣ); ಮಸಿಮುದ್ರಣ; ಮಸಿಯೊತ್ತು ಮುದ್ರಣ; ಅಚ್ಚಿನ ಯಾ ಶಿಲಾಫಲಕದಿಂದ ಮಸಿಯನ್ನು ಸಮತಲವಾದ ರಬ್ಬರಿನ ಯಾ ಉರುಳೆಯ ಮೇಲ್ಮೈಗೆ ಒತ್ತುವ ಮೂಲಕ ವರ್ಗಾಯಿಸಿ, ಅನಂತರ ಅದನ್ನು ಕಾಗದ ಮೊದಲಾದವುಗಳ ಮೇಲೆ ಒತ್ತಿ ಅಚ್ಚುಮಾಡುವ ಯಾ ಪ್ರತಿತೆಗೆಯುವ ವಿಧಾನ.
  • (ಮೋಜಣಿ) ಲಂಬದೂರ; ಅಳತೆಯ ಮುಖ್ಯ ರೇಖೆಯನ್ನು ಅದಕ್ಕೆ ಲಂಬವಾಗಿ ಅಳೆದ ಸ್ವಲ್ಪ ದೂರ.
  • (ವಿರಳ ಪ್ರಯೋಗ) ಹೊರಡುವುದು; ಆರಂಭ (ದಶೆ).

  • offset
    ಸಕರ್ಮಕ ಕ್ರಿಯಾಪದ
  • ಪ್ರತಿತೋಲನ ಮಾಡು; ಸರಿದೂಗಿಸು; ಉತ್ತಾರ ಹಾಕು; ಪರಿಹಾರ ಕೊಡು; ಈಡುಮಾಡು; ತುಂಬಿ ಕೊಡು; ಭರ್ತಿ ಹಾಕಿಕೊಡು: the gains offset the losses ಲಾಭವು ನಷ್ಟವನ್ನು ತುಂಬಿ ಕೊಡುತ್ತದೆ; ಲಾಭನಷ್ಟಗಳು ಸರಿದೂಗುತ್ತವೆ.
  • (ಮುಖ್ಯವಾಗಿ ಭೂತಕೃದಂತದಲ್ಲಿ )ಗೆರೆ ಬಿಟ್ಟು ಇಡು.
  • ಆಹ್‍ಸೆಟ್‍ ವಿಧಾನದಲ್ಲಿ ಮುದ್ರಿಸು.

  • offset process
    ನಾಮವಾಚಕ
    = 1offset\((7)\).

    offshoot
    ನಾಮವಾಚಕ
  • ಮಗ್ಗುಲು ಮೊಳಕೆ; (ಪಕ್ಕದಲ್ಲಿ ಒಡೆದ) ಕವಲು, ಕೊಂಬೆ, ಉಪಶಾಖೆ.
  • (ರೂಪಕವಾಗಿ) ನಿಷ್ಪನ್ನ; ಜನ್ಯ; ಮತ್ತೊಂದರಿಂದ ಹುಟ್ಟಿದ್ದು.


  • logo