logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lapstone
ನಾಮವಾಚಕ
ಉಡಿಕಲ್ಲು; ಅಂಕಶಿಲೆ; ಮಡಿಲುಕಲ್ಲು; ಮೋಚಿಯವನು ಚರ್ಮವನ್ನು ಕುಟ್ಟುವುದಕ್ಕಾಗಿ ಮಡಿಲ ಮೇಲಿಟ್ಟುಕೊಳ್ಳುವ ಕಲ್ಲು.

lapsus
ನಾಮವಾಚಕ
(ಬಹುವಚನ ಅದೇ) ಸಣ್ಣ ತಪ್ಪು; ಸ್ಖಾಲಿತ್ಯ; ಅಲ್ಪ ಪ್ರಮಾದ.

lapsus calami
ನಾಮವಾಚಕ
(ಬಹುವಚನ ಅದೇ). ಕೈತಪ್ಪು; ಲೇಖನದೋಷ; ಲೇಖನಿತಪ್ಪು; ಕೈತಪ್ಪಿ, ಲೇಖನಿ ತಪ್ಪಿ ಆದ ತಪ್ಪು.

lapsus linguae
ನಾಮವಾಚಕ
ಬಾಯಿತಪ್ಪು; ವಾಗ್ದೋಷ; ಬಾಯಿತಪ್ಪಿ, ನಾಲಿಗೆ ತಪ್ಪಿ ಆದ ದೋಷ.

laptop
ಗುಣವಾಚಕ
(ಮೈಕ್ರೋಕಂಪ್ಯೂಟರ್‍ ವಿಷಯದಲ್ಲಿ) ಲ್ಯಾಪ್‍ಟಾಪ್‍; ಎಲ್ಲೆಂದರಲ್ಲಿ ಒಯ್ಯಬಹುದಾದ ಮತ್ತು ಪ್ರಯಾಣದಲ್ಲಿ ಬಳಸಬಹುದಾದ.

Laputon
ಗುಣವಾಚಕ
  • ‘ಗಲಿವರ್ಸ್‍ ಟ್ರ್ಯಾವಲ್ಸ್‍’ ಎಂಬ (ಇಂಗ್ಲಿಷ್‍ ಕಾದಂಬರಿಯಲ್ಲಿ ಬರುವ) ಲಪ್ಯೂಟ ದ್ವೀಪದ.
  • ಮಿಥ್ಯಾಕಲ್ಪನೆಯ; ಭ್ರಾಂತಿಯ; ಕಾಲ್ಪನಿಕ; ಅಸಂಬದ್ಧ.

  • lapweld
    ಸಕರ್ಮಕ ಕ್ರಿಯಾಪದ
    ಅಂಚು ವೆಲ್ಡು ಮಾಡು; ಅಂಚುಗಳು ಒಂದರ ಮೇಲೊಂದಿರುವಂತೆ ಬೆಸೆ, ವೆಲ್ಡು ಮಾಡು.

    lapweld
    ನಾಮವಾಚಕ
    ಅಂಚು ವೆಲ್ಡಣೆ; ತುದಿಬೆಸುಗೆ; ಅಂಚುಗಳು, ತುದಿಗಳು ಒಂದರ ಮೇಲೊಂದಿರುವಂತೆ ಮಾಡಿದ ಬೆಸುಗೆ, ವೆಲ್ಡಣೆ.

    lapwing
    ನಾಮವಾಚಕ
    ದೇವನ ಹಕ್ಕಿ; ಕೋಯಷ್ಟಿಕ; ಟಿಟ್ಟಿಭ; ಪ್ಲೋವರ್‍ ಜಾತಿಯ ಹಕ್ಕಿ; ವನಲಸ್‍ ವನಲಸ್‍ ಕುಲಕ್ಕೆ ಸೇರಿದ, ಕಪ್ಪು ಬಿಳುಪು ಗರಿಗಳುಳ್ಳ, ತಲೆಯ ಮೇಲೆ ಜುಟ್ಟುಳ್ಳ, ಕೀಚು ದನಿಯಲ್ಲಿ ಕೂಗುವ ಹಕ್ಕಿ.

    lar
    ನಾಮವಾಚಕ
  • ಲಾರ್‍; ಪ್ರಾಚೀನ ರೋಮನರ ಮನೆದೇವರು, ಗೃಹದೇವತೆ, ಗೃಹಾಭಿಮಾನಿ ದೇವತೆ.
  • ಸ್ವಗೃಹ; ಸ್ವಂತಮನೆ.
  • (ಬಹುವಚನ lars ಉಚ್ಚಾರಣೆ ಲಾರ್ಸ್‍). (ಹೈಲಬೇಟಸ್‍ ಲಾರ್‍ ಕುಲದ, ಬರ್ಮ ದೇಶದ) ಬಿಳಿಗೈಯ ಗಿಬನ್‍ ವಾನರ; ಶ್ವೇತಹಸ್ತದ ಗಿಬನ್ನು.


  • logo