logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bandleader
ನಾಮವಾಚಕ
ಮೇಳನಾಯಕ; ವಾದ್ಯಮೇಳದ ಮುಖಂಡ.

bandmaster
ನಾಮವಾಚಕ
ವಾದ್ಯಗೋಷ್ಠಿ ನಿರ್ದೇಶಕ; ವಾದ್ಯಮೇಳ ನಾಯಕ; ಮೇಳವನ್ನು ನಡೆಸುವವನು.

bandog
ನಾಮವಾಚಕ
  • (ಚರಿತ್ರೆ) ಸರಪಣಿ ಕಟ್ಟಿದ ನಾಯಿ.
  • ಮಾಸ್ಟಿಹ್‍ ನಾಯಿ; ಜೋಲು ಕಿವಿಗಳೂ, ತೊಂಗು ತುಟಿಗಳೂ ಉಳ್ಳ ಬಲಶಾಲಿಯಾದ ದೊಡ್ಡನಾಯಿ.
  • ನೆತ್ತರು, ಬೇಟೆ – ನಾಯಿ; ಮನುಷ್ಯನನ್ನಾಗಲೀ, ದನ, ಮೊದಲಾದವುಗಳನ್ನಾಗಲೀ ವಾಸನೆಯಿಂದ ಕಂಡುಹಿಡಿಯುವ ನಾಯಿ.

  • bandoleer
    ನಾಮವಾಚಕ
    ತೋಟಾದವಾಲಿ; ಗುಂಡುಗಳನ್ನು ಇಟ್ಟುಕೊಳ್ಳಬಲ್ಲ ಅಡ್ಡಬಗಲು ಪಟ್ಟಿ.

    bandolier
    ನಾಮವಾಚಕ
    = bandoleer.

    bandoline
    ನಾಮವಾಚಕ
    ಕೂದಲಂಟು; ಈಸೆಗೋಂದು; ಕೂದಲನ್ನೂ ಈಸೆಯನ್ನೂ ಮೃದುಗೊಳಿಸಲು, ಹೊಳಪು ಮಾಡಲು, ಮೊದಲಾದವುಗಳಿಗಾಗಿ ಬಳಸುವ ಆಂಟು, ಗೋಂದು.

    bandsman
    ನಾಮವಾಚಕ
    ಮೇಳದವನು; ವಾದ್ಯಗೋಷ್ಠಿಯವನು.

    bandstand
    ನಾಮವಾಚಕ
    ವಾದ್ಯ – ವೇದಿಕೆ, ರಂಗ; ಮೇಳದಟ್ಟ:
  • ವಾದ್ಯಗಾರರಿಗಾಗಿ ಬಯಲಿನಲ್ಲಿ ನಿರ್ಮಿಸಿದ, ಚಾವಣಿ ಇರುವ ವೇದಿಕೆ.
  • ನರ್ತನಶಾಲೆಯಲ್ಲಿರುವಂತೆ, ವಾದ್ಯಗಾರರಿಗಾಗಿ ನಿರ್ಮಿಸಿದ ಯಾವುದೇ ವೇದಿಕೆ.

  • bandwagon
    ನಾಮವಾಚಕ ನುಡಿಗಟ್ಟು
    (ಅಮೆರಿಕನ್‍ ಪ್ರಯೋಗ) climb or jump on the bandwagon ಗೆದ್ದೆತ್ತಿನ ಬಾಲ ಹಿಡಿ; ಗೆಲ್ಲಬಹುದೆಂದು ಕಾಣುವ ಪಕ್ಷ ಮೊದಲಾದವುಗಳ ಕಡೆ ಸೇರಿಕೊ ಯಾ ಸೇರಲು ಪ್ರಯತ್ನಿಸು.
  • (ಮುಖ್ಯವಾಗಿ ಸರ್ಕಸ್‍ ಪ್ರದರ್ಶನದಲ್ಲಿ) ಬ್ಯಾಂಡುಗಾಡಿ; ವಾದ್ಯ ತಂಡದ ಗಾಡಿ.
  • (ರೂಪಕವಾಗಿ) ಗೆಲ್ಲಾಳು ಗಾಡಿ; ವಿಜಯರಥ; ಗೆಲ್ಲುವರೆಂದು ನಂಬಿರುವ ರಾಜಕೀಯ ಮುಂದಾಳುಗಳಿರುವರೆಂದು ಭಾವಿಸಲಾದ ಗಾಡಿ.

  • bandwidth
    ನಾಮವಾಚಕ
  • ಪಟ್ಟೆಯಗಲ; ಬ್ಯಾಂಡ್‍ ಅಗಲ; ರೇಡಿಯೋ ಪ್ರಸಾರದಲ್ಲಿ ಬಳಸುವ ಯಾವುದೇ ಆವರ್ತನ ಶ್ರೇಣಿಯಲ್ಲಿನ ಒಂದು ನಿರ್ದಿಷ್ಟ ಅವಧಿ.
  • (ವಿದ್ಯುಚ್ಛಕ್ತಿ ಮೊದಲಾದವುಗಳ) ಆವರ್ತನ ಶ್ರೇಣಿ.


  • logo