logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accused
ನಾಮವಾಚಕ
ಆಪಾದಿತ; ಆರೋಪಿ.

accused
ಗುಣವಾಚಕ
  • (ಮುಖ್ಯವಾಗಿ ಕ್ರಿವಿನಲ್‍) ಆರೋಪಿ(ಯಾದ); ಆಪಾದಿತ.
  • ತಪ್ಪು ಹೊರಿಸಲ್ಪಟ್ಟ; ಆರೋಪಕ್ಕೊಳಗಾದ; ದೂಷಣೆಗೆ ಗುರಿಯಾದ.

  • accuser
    ನಾಮವಾಚಕ
    ಹಿರ್ಯಾದಿ; ಆಪಾದಕ; ಅಭಿಯೋಕ್ತ; ತಪ್ಪು ಹೊರಿಸುವವನು; ಆಪಾದನೆ ಮಾಡುವವನು.

    accusingly
    ಕ್ರಿಯಾವಿಶೇಷಣ
    ಆಪಾದಿಸುವಂತೆ; ಆರೋಪಿಸುವಂತೆ; ತಪ್ಪನ್ನು ಹೊರಿಸುತ್ತ, ದೂಷಿಸುತ್ತ.

    accustom
    ಸಕರ್ಮಕ ಕ್ರಿಯಾಪದ
  • ರೂಢಿ ಮಾಡಿಕೊ; ಅಭ್ಯಾಸ ಮಾಡಿಕೊ; ಒಗ್ಗಿಸಿಕೊ; ಒಗ್ಗಿಕೊ: accustom yourself to the food available ದೊರೆಯುವ ಆಹಾರಕ್ಕೆ ಒಗ್ಗಿಕೊ.
  • (ವ್ಯಕ್ತಿಯನ್ನು ಯಾ ವಸ್ತುವನ್ನು) ರೂಢಿಮಾಡಿಸು; ಒಗ್ಗಿಸು: accustom him to high altitudes ಅವನನ್ನು ಉನ್ನತ ಪ್ರದೇಶಗಳಿಗೆ ಒಗ್ಗಿಸು.

  • accustomed
    ಗುಣವಾಚಕ
  • ಒಗ್ಗಿದ; ಪಳಗಿದ; ರೂಢಿಯಾದ; ಅಭ್ಯಾಸವಾದ: eyes accustomed to darkness ಕತ್ತಲೆಗೆ ಒಗ್ಗಿದ ಕಣ್ಣುಗಳು.
  • ವಾಡಿಕೆಯ; ಬಳಕೆಯ; ಪದ್ಧತಿಯ.

  • ace
    ನಾಮವಾಚಕ ನುಡಿಗಟ್ಟು
  • ಪಗಡೆ; (ಪಗಡೆ ದಾಳದ) ಒಂದು.
  • (ಇಸ್ಟೀಟಾಟಗಳಲ್ಲಿ) ಹಾಸು; ಎಕ್ಕ; ಒಂದಂಕದ ಎಲೆ. Figure: ace
  • ಏಸ್‍:
    1. ಟೆನಿಸ್‍ ಮೊದಲಾದ ಆಟಗಳಲ್ಲಿ ಒಂದು ಪಾಯಿಂಟು.
    2. (ಟೆನಿಸ್‍ನಲ್ಲಿ) ಎದುರಾಳಿಯು ತೆಗೆದುಕೊಳ್ಳಲಾಗದ ಸರ್ವಿಸ್‍.
    3. ಗಾಲ್‍ನಲ್ಲಿ ಒಂದೇ ಏಟಿಗೆ ಪಡೆದ ಅಂಕ.
  • ನಿಪುಣ ವೈಮಾನಿಕ; ಯುದ್ಧದಲ್ಲಿ ಅನೇಕ ವಿಮಾನಗಳನ್ನು ಉರುಳಿಸಿದ ವಿಮಾನಚಾಲಕ.
  • (ಯಾವುದೇ ಕ್ಷೇತ್ರದಲ್ಲಿ) ನಿಪುಣ; ಪ್ರವೀಣ; ಶ್ರೇಷ್ಠ: a hockey ace ಹಾಕಿ ನಿಪುಣ.
  • ಕೂದಲೆಳೆಯಷ್ಟು; ಅಣು; ಲವ; ಅತ್ಯಂತ ಸ್ವಲ್ಪ; ಅಲ್ಪ: it was withing an ace of collapse ಅದು ಸ್ವಲ್ಪದರಲ್ಲಿ, ಕೂದಲೆಳೆಯಷ್ಟರಲ್ಲಿ ಕುಸಿಯುವುದರಲ್ಲಿತ್ತು.

  • ace
    ಗುಣವಾಚಕ
    ಉತ್ಕೃಷ್ಟ; ಉನ್ನತ ಮಟ್ಟದ; ಅತ್ಯುತ್ತಮ; ಶ್ರೇಷ್ಠ: an ace player ಅತ್ಯುತ್ತಮ ಆಟಗಾರ.

    acedia
    ನಾಮವಾಚಕ
    ಅಸೀಡಿಯ; ವೆಸ್ಟ್‍ ಇಂಡೀಸ್‍ ಮತ್ತು ದಕ್ಷಿಣ ಅಟ್ಲಾಂಟಿಕ್‍ ತೀರದಲ್ಲಿ ದೊರೆಯುವ ಒಂದು ಬಗೆಯ ಚಪ್ಪಟೆ ಮೀನು, ಚಟ್ಟೆಮೀನು.

    acedia
    ನಾಮವಾಚಕ
    = accidie.


    logo