logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

officiate
ಅಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ವಿಶೇಷ ಸಂದರ್ಭದಲ್ಲಿ) ಅಧಿಕೃತವಾಗಿ — ಕಾರ್ಯ ನೆರವೇರಿಸು, ಕೆಲಸ ನಡೆಸು: officiate as host ಆತಿಥೇಯನಾಗಿ — ನಡೆದುಕೊ, ಕಾರ್ಯ ನಿರ್ವಹಿಸು.
  • (ಚರ್ಚು) ದೇವಾರಾಧನೆಯನ್ನು, ದೇವಪೂಜೆಯನ್ನು — ನಡೆಸು, ನೆರವೇರಿಸು.

  • officiation
    ನಾಮವಾಚಕ
  • (ಮುಖ್ಯವಾಗಿ ವಿಶೇಷ ಸಂದರ್ಭದಲ್ಲಿ) ಅಧಿಕೃತವಾಗಿ—ಕಾರ್ಯ ನೆರವೇರಿಸುವುದು.
  • (ಚರ್ಚು) ದೇವಾರಾಧನೆ ನೆರವೇರಿಸುವುದು.

  • officiator
    ನಾಮವಾಚಕ
  • (ಮುಖ್ಯವಾಗಿ ವಿಶೇಷ ಸಂದರ್ಭದಲ್ಲಿ) ಅಧಿಕೃತವಾಗಿ ಕಾರ್ಯ ನೆರವೇರಿಸುವವ.
  • (ಚರ್ಚು) ದೇವಾರಾಧನೆ ನೆರವೇರಿಸುವವ.

  • officinal
    ಗುಣವಾಚಕ
  • (ತಯಾರಿಸುವ ಔಷಧಗಳ ವಿಷಯದಲ್ಲಿ)
    1. (ಔಷಧದ ವಿಷಯದಲ್ಲಿ) ಕೂಡಲೇ ಬಳಸಲು–ತಯಾರಿಸಿಟ್ಟಿರುವ, ಸಿದ್ಧಮಾಡಿಟ್ಟಿರುವ.
    2. ಅಧಿಕೃತ ಔಷಧಗ್ರಂಥಕ್ಕನುಸಾರವಾಗಿ ತಯಾರಿಸಿದ.
    3. (ಔಷಧದ ಹೆಸರಿನ ವಿಷಯದಲ್ಲಿ) ಅಧಿಕೃತ ಔಷಧಗ್ರಂಥದಲ್ಲಿ ಬಳಸುವ.
  • (ಮೂಲಿಕೆ, ಔಷಧವಸ್ತು, ಮೊದಲಾದವುಗಳ ವಿಷಯದಲ್ಲಿ) ಔಷಧದಲ್ಲುಪಯೋಗಿಸುವ.

  • officinally
    ಕ್ರಿಯಾವಿಶೇಷಣ
  • ಅಧಿಕೃತ ಔಷಧಗ್ರಂಥದ ಪ್ರಕಾರ.
  • ಅಧಿಕೃತ ಔಷಧ ಗ್ರಂಥದಲ್ಲಿನ ಬಳಕೆಗನುಸಾರವಾಗಿ.

  • officious
    ಗುಣವಾಚಕ
  • ಅಧಿಕಾರಬಲದ; ಅಧಿಕಾರದರ್ಪದ; ಅಧಿಕಾರಶಾಹಿಯ; ತನ್ನ ಅಧಿಕಾರವನ್ನು ದಬಾವಣೆಯಿಂದ ಚಲಾಯಿಸುವ; ದಬ್ಬಾಳಿಕೆಯ.
  • ಅಧಿಕಪ್ರಸಂಗಿಯಾದ; ಅಧಿಕಪ್ರಸಂಗಿತನದ; ಎಷ್ಟು ಬೇಕೋ ಅಷ್ಟಕ್ಕಿಂತ ಹೆಚ್ಚಾಗಿ ಮಾಡುವ ಯಾ ಕೈಗೊಳ್ಳುವ; ಬೇಡವಾದ, ಕೇಳದ ಸಹಾಯ ನೀಡಲು ಹೋಗುವ.
  • (ರಾಯಭಾರ, ರಾಜನೀತಿ) ಅನಧಿಕೃತ; ಅನೌಪಚಾರಿಕ; ವಿಧಿವತ್ತಲ್ಲದ; ವಿಧಿಯನ್ನನುಸರಿಸದೆ ಮಾಡುವ; ಬಂಧಕವಲ್ಲದ.

  • officiously
    ಕ್ರಿಯಾವಿಶೇಷಣ
  • ಅಧಿಕಾರ–ಬಲದಿಂದ , ದರ್ಪದಿಂದ.
  • ಅಧಿಕಪ್ರಸಂಗವಾಗಿ; ಅಧಿಕಪ್ರಸಂಗಿತನದಿಂದ.
  • (ರಾಜನೀತಿ) ಅನೌಪಚಾರಿಕವಾಗಿ; ಅನಧಿಕೃತವಾಗಿ.

  • officiousness
    ನಾಮವಾಚಕ
  • ಅಧಿಕಾರ ದರ್ಪ.
  • ಅಧಿಕಪ್ರಸಂಗಿತನ.
  • (ರಾಜನೀತಿ) ಅನೌಪಚಾರಿಕತೆ; ಅನಧಿಕೃತತೆ.

  • offing
    ನಾಮವಾಚಕ ಪದಗುಚ್ಛ
  • ದೂರಗೋಚರ ಸಮುದ್ರ ಭಾಗ; ದಡದಿಂದ ದೂರದಲ್ಲಿ ಯಾ ಲಂಗರು ಹಾಕುವ ಸ್ಥಳಕ್ಕೆ ಆಚೆ, ಕಣ್ಣಿಗೆ ಕಾಣುವ ಕಡಲ ಭಾಗ: was seen in the offing ದೂರದಲ್ಲಿ ಕಾಣಿಸುವ ಸಮುದ್ರಭಾಗದಲ್ಲಿ ಕಾಣಿಸಿಕೊಂಡಿತು.
  • ತೀರದಿಂದ ದೂರವಿರುವ (ಸಮುದ್ರ) ಸ್ಥಾನ.

  • offish
    ಗುಣವಾಚಕ
    (ಆಡುಮಾತು) (ಬೇರೆಯವರೊಡನೆ) ಬೆರೆಯದ (ಸ್ವಭಾವದ): ನಡತೆಯಲ್ಲಿ ದೂರ ದೂರವಾಗಿರುವ; ಸಲಿಗೆ ಕೊಡದ; ವಿವಿಕ್ತ ಸ್ವಭಾವದ.


    logo