logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Mammonism
ನಾಮವಾಚಕ
ಧನಾನ್ವೇಷಣೆ ; ಧನದ ಬೆನ್ನಟ್ಟುವುದು; ಧನವನ್ನರಸುವುದು; ದುಡ್ಡಿನ ಪೂಜೆ; ಧನಾರಾಧನೆ; ಧನಪೂಜೆ; ಧನೋಪಾಸನೆ; ಧನವೇ ದೇವರೆಂಬ ಭಾವನೆ ಮತ್ತು ಅದರ ಅನ್ವೇಷಣೆಯಲ್ಲೇ ತೊಡಗಿರುವುದು.

Mammonist
ನಾಮವಾಚಕ
ಧನಾರಾಧಕ; ಧನೋಪಾಸಕ; ಸದಾ ಧನವನ್ನೇ ಅರಸುತ್ತಿರುವವನು; ಧನವೇ ದೇವರೆಂದು ನಂಬಿ ಧನಾರ್ಜನೆಯನ್ನೇ ಜೀವನದ ಗುರಿಯೆಂದು ಭಾವಿಸಿರುವವನು.

Mammonite
ನಾಮವಾಚಕ
= Mammonist.

mammoth
ನಾಮವಾಚಕ
ಮ್ಯಾಮತ್‍; (ಇಡೀ ಕುಲವೇ ನಷ್ಟವಾಗಿ ಹೋಗಿರುವ, ಅಗಾಧ ಗಾತ್ರದ) ರೋಮಯುಕ್ತ ಆನೆ; ಬೃಹದ್ಗಜ; ಮಹಾಗಜ.

mammoth
ಗುಣವಾಚಕ
ಭಾರಿ; ಬೃಹದ್ಗಾತ್ರದ; ಬೃಹದಾಕಾರದ; ಅತಿ ದೊಡ್ಡ.

mammy
ನಾಮವಾಚಕ
  • ಅಮ್ಮ (ಮಕ್ಕಳು ತಾಯಿಯನ್ನು) ಕರೆಯುವ ಪದ.
  • ನೀಗ್ರೋ ದಾದಿ; ಬಿಳಿಯ ಜನರ ಮಕ್ಕಳನ್ನು ನೋಡಿಕೊಳ್ಳುವ, ಕಪ್ಪು ಬುಡಕಟ್ಟಿನ, ಸಾಮಾನ್ಯವಾಗಿ ನೀಗ್ರೋ, ಹೆಂಗಸು.

  • Man
    ಸಂಕ್ಷಿಪ್ತ
    Manitoba.

    man
    ನಾಮವಾಚಕ ಪದಗುಚ್ಛ
  • ಮನುಷ್ಯ; ಮಾನವ; ಮನುಜ; ನರ: a man and a brother ನಮ್ಮಂತೆಯೇ ಮನುಷ್ಯ; ನಮ್ಮ ಅಣ್ಣತಮ್ಮ; ಸಹ ಮಾನವ.
  • (ಅನಿರ್ದಿಷ್ಟ ಯಾ ಸಾಮಾನ್ಯ ಪ್ರಯೋಗ) ಒಬ್ಬ ಮನುಷ್ಯ; ಒಬ್ಬಾನೊಬ್ಬ; ವ್ಯಕ್ತಿ; ಆಳು: any man ಯಾವನೋ ಒಬ್ಬ; ಯಾರಾದರೊಬ್ಬ (ಮನುಷ್ಯ): no man is perfect ಯಾವನೂ ಪರಿಪೂರ್ಣನಲ್ಲ.
  • ಮನುಷ್ಯಕುಲ; ಮನುಕುಲ; ಮನುಜ ಕುಲ; ಮಾನವ – ವರ್ಗ, ಕೋಟಿ; ಮಾನವತೆ: man is mortal ಮಾನವನು ಮರ್ತ್ಯ. man is born into trouble ಮನುಷ್ಯ ಹುಟ್ಟಿರುವುದೇ ಕಷ್ಟಕ್ಕಾಗಿ.
  • ವಯಸ್ಕ; ಪ್ರೌಢ; ಹುಡುಗ ಯಾ ಹೆಂಗಸಲ್ಲದ ಪ್ರಾಪ್ತವಯಸ್ಸಿನ ಗಂಡಸು; ಪ್ರಾಯದ ಗಂಡು.
  • ಪುರುಷ; ಗಂಡಸು.
  • (ತಾಳ್ಮೆಗೆಟ್ಟಾಗ ಯಾ ಭಾವೋದ್ವೇಗವಿದ್ದಾಗ ಸಂಬೋಧನೆಯಾಗಿ) ಲೋ; ಮಹಾರಾಯ; ಅಯ್ಯಾ; ಮಹಾತ್ಮ: hurry up man (alive); ಬೇಗ ಮಾಡೋ, ಮಹಾರಾಯ.
  • ಒಬ್ಬ; ಒಬ್ಬ ಮನುಷ್ಯ, ವ್ಯಕ್ತಿ: what can a man do in such a case? ಇಂಥ ಸಂದರ್ಭದಲ್ಲಿ ಒಬ್ಬನಿಂದೇನಾದೀತು?
  • ಆಳು; ಇಸಮು; ವ್ಯಕ್ತಿ; ಮನುಷ್ಯ: man for man ಆಳಿಗೆ ಆಳು. between man and man ಮನುಷ್ಯ ಮನುಷ್ಯರಲ್ಲಿ. Rs. 5/ – per man ತಲಾ 5 ರೂಪಾಯಿಗಳಂತೆ.
  • ವಿರೋಧಿ; ಶತ್ರು ಮೊದಲಾದವರು.
  • ಗಂಡು; ಪುರುಷ; ಗಂಡುತನವುಳ್ಳವನು; ಪೌರುಷವುಳ್ಳವನು; ಗಂಡಿಗೆ ಯೋಗ್ಯವಾದ ಗುಣಗಳನ್ನುಳ್ಳವನು; ಗಂಡುಗಲಿ: she is more of a man than he is ಅವಳು ಅವನಿಗಿಂತ ಗಂಡು, ಹೆಚ್ಚು ಪೌರುಷದಿಂದ ಕೂಡಿದವಳು. play the man ಗಂಡಸಿನಂತೆ ವರ್ತಿಸು, ನಡೆದುಕೊ; ಗಂಡುಗಲಿಯಾಗಿರು.
  • ಗಂಡ; ಪತಿ: man and wife ಗಂಡ ಹೆಂಡತಿ; ಪತಿ ಪತ್ನಿ.
  • (ಚರಿತ್ರೆ) ಆಶ್ರಿತ; ಅವಲಂಬಿ; ಅಧೀನನಾದವನು.
  • ಆಳು; ಸೇವಕ.
  • ಕೈಯಾಳು; ಪರಿಚಾರಕ; ಅನುಚರ; ಯಜಮಾನನ ಜತೆಯಲ್ಲೇ ಇರುವ ಸೇವಕ.
  • ಕೆಲಸಗಾರ; ಕೆಲಸದಾಳು; ಕಾರ್ಮಿಕ: the employers dismissed the men ಮಾಲಿಕರು ಕಾರ್ಮಿಕರನ್ನು ವಜಾ ಮಾಡಿದರು, ಕೆಲಸದಿಂದ ತೆಗೆದುಹಾಕಿದರು.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಅಧಿಕಾರಿಗಳಾಗಿರದ ಸಾಮಾನ್ಯ) ಸೈನಿಕರು, ನಾವಿಕರು, ಮೊದಲಾದವರು: was in command of 200 men ಅವನ ಕೈಕೆಳಗೆ 200 ಸೈನಿಕರು (ಯಾ ನಾವಿಕರು) ಇದ್ದರು.
  • (ಚದುರಂಗ ಮೊದಲಾದ ಆಟಗಳಲ್ಲಿ) ಯಾವುದೇ ಕಾಯಿ.
  • ಒಬ್ಬ ವ್ಯಕ್ತಿ, ಸಾಮಾನ್ಯವಾಗಿ ಗಂಡಸು: fought to the last man ಕೊನೆಯ ವ್ಯಕ್ತಿಯವರೆಗೆ ಹೋರಾಡಿದರು. the (very) man (ನಿರ್ದಿಷ್ಟ ಕೆಲಸಕ್ಕೆ) (ಬಹಳ) ಅರ್ಹನಾದ, ತಕ್ಕ, ಲಾಯಕ್ಕಾದ, ಸೂಕ್ತನಾದ, ಉಚಿತನಾದ, ಅನುರೂಪನಾದ – ವ್ಯಕ್ತಿ: the (very) man for the job ಆ ಕೆಲಸಕ್ಕೆ (ಬಹಳ) ಲಾಯಕ್ಕಾದ ವ್ಯಕ್ತಿ.
  • (ಆಡುಮಾತು) (ಹುಡುಗಿಯ ಯಾ ತರುಣಿಯ) ನಲ್ಲ; ಪ್ರಿಯ; ಗೆಳೆಯ.
  • ನಿರ್ದಿಷ್ಟ ಐತಿಹಾಸಿಕ ಕಾಲದ ಯಾ ಲಕ್ಷಣದ ಮನುಷ್ಯ, ಮಾನವ: Renaissance man ನವೋದಯ ಕಾಲದ ಮಾನವ.
  • ಅವಶೇಷಗಳು ದೊರೆತ ಸ್ಥಳದ ಹೆಸರಿನಿಂದ ಕರೆಯಲಾದ ಇತಿಹಾಸಪೂರ್ವ ಕಾಲದ ಮಾನವ: Peking man ಪೀಕಿಂಗ್‍ ಮಾನವ.
  • (ಆಡುಮಾತು) ಹಿಪ್ಪಿಗಳು ಮೊದಲಾದವರಲ್ಲಿ ಸಂಬೋಧನೆಯಾಗಿ ಪ್ರಯೋಗ: dig that, man; ಅದನ್ನು ಅರ್ಥಮಾಡಿಕೊಳ್ಳಯ್ಯಾ!
  • ಬೆನ್ನಟ್ಟಿದ ವ್ಯಕ್ತಿ; ಅನ್ವೇಷಿತ ವ್ಯಕ್ತಿ. the police have so far not caught their man ಪೊಲೀಸರು ಇದುವರೆಗೆ ತಮಗೆ ಬೇಕಾದ ವ್ಯಕ್ತಿಯನ್ನು ಹಿಡಿದಿಲ್ಲ.
  • (the Man) (ಅಮೆರಿಕನ್‍ ಪ್ರಯೋಗ) (ಅಶಿಷ್ಟ)
    1. ಪೊಲೀಸಿನವ.
    2. (ನೀಗ್ರೋಗಳ ಅಶಿಷ್ಟ) ಬಿಳಿಯರು; ಶ್ವೇತ ವರ್ಣೀಯರು.

  • man
    ಸಕರ್ಮಕ ಕ್ರಿಯಾಪದ
  • (ಕೋಟೆ, ಹಡಗು, ಮೊದಲಾದವುಗಳ ಕೆಲಸಕ್ಕಾಗಿ, ರಕ್ಷಣೆಗಾಗಿ) ಜನ ಒದಗಿಸು.
  • (ನೌಕಾಯಾನ) (ಹಡಗಿನ ಒಂದು ಭಾಗದಲ್ಲಿ) ಜನರನ್ನು ಇರಿಸು, ಸ್ಥಾಪಿಸು.
  • (ಹುದ್ದೆಗೆ, ಉದ್ಯೋಗಕ್ಕೆ, ಅಧಿಕಾರ ಸ್ಥಾನಕ್ಕೆ) ಜನರನ್ನು ನೇಮಿಸು.
  • (ಮುಖ್ಯವಾಗಿ ಆತ್ಮಾರ್ಥಕವಾಗಿ) ಧೈರ್ಯ, ಉತ್ಸಾಹ, ಹುಮ್ಮಸ್ಸು ತುಂಬು; ಹುರಿದುಂಬು: manned herself for the task ಆ ಕೆಲಸಕ್ಕೆ ಧೈರ್ಯ ತುಂಬಿಕೊಂಡಳು.

  • man-at-arms
    ನಾಮವಾಚಕ
    (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ಪೂರ್ಣ ಶಸ್ತ್ರಸಜ್ಜಿತ ಮತ್ತು ಅಶ್ವಾರೋಹಿ) ಸೈನಿಕ; ಯೋಧ.


    logo