logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lappet
ನಾಮವಾಚಕ
  • ಚಿಕ್ಕ ಮಡಿಕೆ.
  • (ಉಡುಪು ಮೊದಲಾದವುಗಳ) ಸಡಿಲವಾದ ಯಾ ಮೇಲ್ಪದರದ ತುಂಡು.
  • ಜೋಲಾಡುವ ಯಾ ಸಡಿಲವಾದ ಮಾಂಸ, ಪೊರೆ, ಮೊದಲಾದವುಗಳ ತುಂಡು, ಕಿವಿಯ ಹಾಲೆ, ಮೊದಲಾದವು.
  • = lapel.
  • ಹೆಂಗಸಿನ ತಲೆಯುಡಿಗೆಯ ಮೇಲಿನ ನೇತಾಡುವ ಚುಂಗು.
  • ಒಂದು ದೊಡ್ಡ ಪತಂಗಜಾತಿ.

  • lappet-moth
    ನಾಮವಾಚಕ
    = lappet(6).

    lappeted
    ಗುಣವಾಚಕ
    (ತಲೆಯುಡಿಗೆಯ ವಿಷಯದಲ್ಲಿ) ನೇತಾಡುವ ಚುಂಗುಳ್ಳ.

    Lappish
    ನಾಮವಾಚಕ
    = 1Lapp.

    Lappish
    ಗುಣವಾಚಕ
    = 2Lapp.

    lapse
    ನಾಮವಾಚಕ
  • (ಮರೆವು, ಮಾತು, ನಡೆನುಡಿ, ಮೊದಲಾದವುಗಳಿಂದ ಆದ) ತಪ್ಪು; ಕೈತಪ್ಪು; ಸಣ್ಣತಪ್ಪು; ಚಿಕ್ಕ ಪ್ರಮಾದ; ಅಚಾತುರ್ಯ; ಸ್ಖಾಲಿತ್ಯ; ಚ್ಯುತಿ; ನೆನಪು, ನಾಲಿಗೆ, ಯಾ ಲೇಖನಿ ಜಾರಿ ಹೋಗುವುದು.
  • ನೈತಿಕ ಚ್ಯುತಿ; ದೌರ್ಬಲ್ಯದಿಂದ ಯಾ ಅಜಾಗರೂಕತೆಯಿಂದ – ದಾರಿ ತಪ್ಪುವುದು, ನೀತಿ ತಪ್ಪುವುದು, ಸರಿಯಾದ ಮಾರ್ಗದಿಂದ ಸರಿಯುವುದು.
  • ಧರ್ಮಚ್ಯುತಿ; ಆಸ್ತಿಕತೆಯಿಂದ ದೂರ ಸರಿಯುವುದು ಯಾ ನಾಸ್ತಿಕತೆಗೆ ಬೀಳುವುದು.
  • ಕಾಲಾವಧಿ; ಕಾಲಾವಕಾಶ; ಎರಡು ಸ್ಥಿತಿಗಳ ನಡುವಣ ಕಾಲದ ಅಂತರ: after a lapse of five years ಐದು ವರ್ಷಗಳ ಅಂತರದ ತರುವಾಯ.
  • ಕಾಲಗತಿ; ಕಾಲದ – ಓಟ, ಹರಿವು, ಗತಿ.
  • (ನ್ಯಾಯಶಾಸ್ತ್ರ) ರದ್ದು; ರದ್ದಿಯಾತಿ; ಲುಪ್ತಿ; ಬಳಸದೆ, ಷರತ್ತುಗಳನ್ನು ಪಾಲಿಸದೆ ಯಾ ಉಚಿತ ಕ್ರಮಗಳನ್ನು ಅನುಸರಿಸದೆ ಹೋದ ಕಾರಣದಿಂದ ಹಕ್ಕು ಯಾ ಸವಲತ್ತು – ರದ್ದಾಗುವುದು, ಲುಪ್ತವಾಗುವುದು, ಕೊನೆಗಾಣುವುದು, ಅಂತ್ಯವಾಗುವುದು.
  • (ಇನ್ಷೂರನ್ಸ್‍) (ಕಾಲ ಕಾಲಕ್ಕೆ ಪ್ರೀಮಿಯಂ ಕಟ್ಟದಿರುವುದರಿಂದ) ಪಾಲಿಸಿ ರದ್ದಾಗುವುದು.
  • (ಪ್ರಾಚೀನ ಪ್ರಯೋಗ ನೀರಿನ ವಿಷಯದಲ್ಲಿ) ಮಂದ – ಹರಿವು, ಗತಿ; ಮೆಲುಗತಿ; ನಿಧಾನವಾಗಿ ಹರಿಯುವುದು.
  • ಅವನತಿ; ಅಧೋಗತಿಗೆ ಬೀಳುವುದು; ಹೀನಸ್ಥಿತಿಗೆ ಇಳಿಯುವುದು.

  • lapse
    ಅಕರ್ಮಕ ಕ್ರಿಯಾಪದ ಪದಗುಚ್ಛ
  • ಪ್ರಯತ್ನದ ಯಾ ಶಕ್ತಿಯ ಅಭಾವದಿಂದಲೋ, ಕೊರತೆಯಿಂದಲೋ ಸ್ಥಾನವನ್ನು, ಮಟ್ಟವನ್ನು ಯಾ ಸ್ಥಿತಿಯನ್ನು – ಉಳಿಸಿಕೊಳ್ಳದೆ ಹೋಗು.
  • ಹಿಮ್ಮರಳು; ಹಿಂದಿನ ಸ್ಥಿತಿಗೆ, ಪೂರ್ವಸ್ಥಿತಿಗೆ – ಮರಳು, ಹಿಂದಿರುಗು.
  • ಅವನತಿ ಹೊಂದು; ಅಧೋಗತಿಗೆ ಬೀಳು; ಅಧಮಸ್ಥಿತಿಗೆ, ಹೀನಸ್ಥಿತಿಗೆ – ಇಳಿ.
  • (ಷರತ್ತುಗಳನ್ನು ಪಾಲಿಸದ, ವಾರಸುದಾರರಿಲ್ಲದ, ಮೊದಲಾದ ಕಾರಣಗಳಿಂದ ಉಂಬಳಿ, ಆಸ್ತಿ, ಹಕ್ಕು, ಮೊದಲಾದವು) ತಪ್ಪಿಹೋಗು; ರದ್ದಾಗು; ಇಲ್ಲದಾಗು; ಕಳೆದುಹೋಗು; ಗತಿಸು; ಕೈಬಿಟ್ಟು ಹೋಗು ಯಾ ಬೇರಾರಿಗೋ ಸೇರಿ ಹೋಗು.
  • (ಇನ್ಷೂರನ್ಸ್‍) (ಪ್ರೀಮಿಯಂ ಕಟ್ಟದೆ, ಪುನರ್ನವೀಕರಿಸದೆ ಹೋದುದರಿಂದ ಪಾಲಿಸಿ) ರದ್ದಾಗು; ಕೊನೆಗೊಳ್ಳು; ಸೀದುಹೋಗು.
  • ಮೆಲ್ಲನೆ – ಸರಿ, ಜಾರು, ಹರಿ, ಬೀಳು, ಇಳಿ: lapse into silence ಮೌನಕ್ಕೆ ಇಳಿದ. lapse into sleep ನಿದ್ದೆಗೆ ಸರಿದ, ಬಿದ್ದ.
  • (ಕಾಲದಂತೆ) ಕಳೆದುಹೋಗು; ಗತಿಸು.

  • lapse rate
    ನಾಮವಾಚಕ
    (ಪವನಶಾಸ್ತ್ರ) ಅವನತಿ ದರ; ವಾಯುಮಂಡಲದಲ್ಲಿ ಎತ್ತರಕ್ಕೆ ಹೋದಂತೆ ತಾಪ ಕಡಿಮೆಯಾಗುವ ದರ.

    lapsed
    ಗುಣವಾಚಕ
  • ತಪ್ಪಿಹೋದ; ಚ್ಯುತ; ಕೈಬಿಟ್ಟುಹೋದ; ರದ್ದಾಗಿ ಹೋದ.
  • ಗತಿಸಿಹೋದ.
  • ಹಿಮ್ಮರಳಿದ.
  • ಚ್ಯುತ; ಪತಿತ.

  • lapser
    ನಾಮವಾಚಕ
    (ಯಾವುದನ್ನೇ, ಮುಖ್ಯವಾಗಿ ಕ್ರೈಸ್ತಧರ್ಮವನ್ನು) ಬಿಟ್ಟುಹೋಗುವವನು; ತ್ಯಜಿಸುವವನು.


    logo