logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impassivity
ನಾಮವಾಚಕ
  • ಭಾವಶೂನ್ಯತೆ; ನಿರ್ಭಾವುಕತೆ.
  • ನಿರ್ವಿಕಾರತೆ; ಅನುದ್ವಿಗ್ನತೆ.
  • ಯಾತನಾಶೂನ್ಯತೆ; ಯಾತನಾರಾಹಿತ್ಯ.
  • ಜಡತೆ; ಸಂವೇದನಶೂನ್ಯತೆ; ಅಸಂವೇದಕತೆ.

  • impaste
    ಸಕರ್ಮಕ ಕ್ರಿಯಾಪದ
  • ಹೊರಪೊರೆ ಕಟ್ಟು; ಸರಿಯಿಂದ, ಪೇಸ್ಟ್‍ನಿಂದ – ಮುಚ್ಚು, ಆವರಿಸು.
  • (ಹಿಟ್ಟು, ಪುಡಿ, ಮೊದಲಾದವನ್ನು) ಸರಿಯನ್ನಾಗಿ ಮಾಡು.
  • (ಚಿತ್ರಗಳಿಗೆ) ದಪ್ಪವಾಗಿ – ಬಣ್ಣಹಾಕು, ಬಣ್ಣ ಲೇಪಿಸು.

  • impasto
    ನಾಮವಾಚಕ
    (ಚಿತ್ರಕಲೆ)
  • ದಪ್ಪ ಬಳಿತ; ಸಾಂದ್ರ, ಘನ ಲೇಪನ; ದಪ್ಪವಾಗಿ ಬಣ್ಣ ಬಳಿಯುವುದು.
  • ಸಾಂದ್ರಲೇಪಿತ ವರ್ಣ; ದಪ್ಪವಾಗಿ ಬಳಿದ ಬಣ್ಣ.

  • impatience
    ನಾಮವಾಚಕ
  • ಅಸಹನೆ; ತಾಳ್ಮೆಗೇಡು; ತಾಳ್ಮೆ ಇಲ್ಲದಿರುವುದು.
  • ಆತುರ; ತವಕ; ಕಾತುರ; ಹಾತೊರೆತ.

  • impatient
    ಗುಣವಾಚಕ
  • (ನೋವು ಮೊದಲಾದವನ್ನು ಶಾಂತವಾಗಿ) ಸಹಿಸದ; ತಾಳಲಾರದ; ತಡೆದುಕೊಳ್ಳಲಾರದ.
  • (ಕ್ರಿಯೆಯ ವಿಷಯದಲ್ಲಿ) ಅಸಹನೆ – ತೋರಿಸುವ, ಸೂಚಿಸುವ; ಕಿರಿಕಿರಿಗೊಳ್ಳುವ; ಸಿಡುಕಿನ.
  • ಅಸಹನೆಯ; ಅಸಹಿಷ್ಣು; ತಾಳ್ಮೆಯಿಲ್ಲದ; ಸಹನೆಯಿಲ್ಲದ.
  • (ಒಂದು ವಸ್ತುವಿಗಾಗಿ, ಒಂದು ಕೆಲಸಕ್ಕಾಗಿ) ಆತುರಪಡುವ; ತವಕಿಸುವ; ಉತ್ಸುಕ; ಉತ್ಕಂಠಿತ; ಹಾತೊರೆಯುವ: impatient for the day ಆ ದಿನಕ್ಕಾಗಿ ಹಾತೊರೆಯುವ.

  • impatiently
    ಕ್ರಿಯಾವಿಶೇಷಣ
  • ಸಹನೆಯಿಲ್ಲದೆ; ಅಸಹನೆಯಿಂದ.
  • ಕಿರಿಕಿರಿಯಿಂದ; ಸಿಡುಕಿನಿಂದ.
  • ಆತುರದಿಂದ; ತವಕದಿಂದ.

  • impawn
    ಸಕರ್ಮಕ ಕ್ರಿಯಾಪದ
  • (ಪ್ರಾಚೀನ ಪ್ರಯೋಗ) ಒತ್ತೆಯಿಡು; ಅಡವುಹಾಕು.
  • (ರೂಪಕವಾಗಿ) (ನಿಷ್ಠೆ, ಆಶ್ವಾಸನೆ, ಮೊದಲಾದವನ್ನು) ಒತ್ತೆಯಾಗಿ ಯಾ ಹೊಣೆಯಾಗಿ ಇಡು.

  • impeach
    ಸಕರ್ಮಕ ಕ್ರಿಯಾಪದ
  • (ನಡತೆ, ಶೀಲ, ಮೊದಲಾದವನ್ನು) ಸಂದೇಹಿಸು; ಶಂಕಿಸು; ಅನುಮಾನಿಸು.
  • (ನಡತೆ, ಶೀಲ, ಮೊದಲಾದವನ್ನು) ಹೀನಯಿಸು; ಅಲ್ಲಗಳೆ; ಹಳಿ; ಜರೆ.
  • (ಒಬ್ಬನ ಮೇಲೆ) ತಪ್ಪುಹೊರಿಸು; ಆಪಾದನೆ ಮಾಡು; ದೋಷಾರೋಪಣೆ ಮಾಡು.
  • (ವಸ್ತು, ಭಾವ, ಮೊದಲಾದವುಗಳಲ್ಲಿ) ತಪ್ಪು ಕಂಡುಹಿಡಿ; ಖಂಡಿಸು; ದೂಷಿಸು: impeach the falsehood of (ಒಂದನ್ನು) ಸುಳ್ಳು ಎಂದು ಖಂಡಿಸು.
  • (ವ್ಯಕ್ತಿಯನ್ನು ಖಂಡಿಸಿ) ವಿಚಾರಣೆಗೆ ಗುರಿಪಡಿಸು; ತಕ್ಕ ನ್ಯಾಯಸ್ಥಾನದ ಮುಂದೆ ರಾಜದ್ರೋಹ ಯಾ ಇತರ ಪ್ರಬಲ ದೋಷದ ಆಪಾದನೆ ಮಾಡು.

  • impeachable
    ಗುಣವಾಚಕ
  • ಸಂದೇಹಾಸ್ಪದ; ಶಂಕಿಸಬಲ್ಲ; ಶಂಕನೀಯ; ಸಂದೇಹಕ್ಕೊಳಗಾಗುವ.
  • ಅಲ್ಲಗಳೆಯಬಹುದಾದ; ಹಳಿಯಬಹುದಾದ.
  • (ನ್ಯಾಯಾಲಯದ ಮುಂದೆ) ಆಪಾದನೀಯ; ಆರೋಪಣೀಯ.
  • ಖಂಡನೀಯ; ದೂಷ್ಯ.

  • impeachment
    ನಾಮವಾಚಕ
  • (ನಡತೆ ಮೊದಲಾದವನ್ನು) ಸಂದೇಹಿಸುವುದು; ಶಂಕಿಸುವುದು; ಅನುಮಾನಿಸುವುದು.
  • ಅಲ್ಲಗಳೆತ; ಜರೆತ; ಹೀನಯಿಸುವಿಕೆ.
  • ಆಪಾದನೆ; ದೋಷಾರೋಪಣೆ.
  • ಖಂಡನೆ ದೂಷಣೆ.


  • logo