logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Canaan
ನಾಮವಾಚಕ
  • ಪಶ್ಚಿಮ ಪ್ಯಾಲಿಸ್ಟೈನಿನ ಹಳೆಯ ಹೆಸರು; ಜೋರ್ಡಾನ್‍ ನದಿ, ಮೃತ ಸಮುದ್ರ ಮತ್ತು ಮೆಡಿಟರೇನಿಯನ್‍ ಸಮುದ್ರ ಇವುಗಳ ಮಧ್ಯದಲ್ಲಿಯ ಪ್ರದೇಶ.
  • ಸ್ವರ್ಗ.

  • Canada
    ಗುಣವಾಚಕ
    (ಸಸ್ಯಗಳು, ಪ್ರಾಣಿಗಳು ಮೊದಲಾದವುಗಳ ಹೆಸರುಗಳ ಹಿಂದೆ) ಕೆನಡಾದ; ಕೆನಡಾದಲ್ಲಿ ದೊರೆಯುವ.

    Canada balsam
    ನಾಮವಾಚಕ
    = balsam ಪದಗುಚ್ಛ (2).

    Canada goose
    ನಾಮವಾಚಕ
    ಕ್ಯಾನಡ ಬಾತು(ಕೋಳಿ); ಬ್ರಾಂಟಾ ಕ್ಯಾನಡನ್‍ಸಿಸ್‍ ಕುಲದ, ಉತ್ತರ ಅಮೆರಿಕದ ಕಾಡುಬಾತು.

    Canadian
    ನಾಮವಾಚಕ
    ಕೆನಡಾದವನು; ಕೆನಡಾದ ನಿವಾಸಿ.

    Canadian
    ಗುಣವಾಚಕ
    ಕೆನಡಾದ ಯಾ ಅದರ ಜನರ.

    canaille
    ನಾಮವಾಚಕ
    ಸಣ್ಣಜನ; ಅಲ್ಪರು; ಕೀಳುಮಂದಿ; ಕಾಕಪೋಕರಿಗಳು; ದೊಂಬಿ; ಜನಜಂಗುಳಿ; ಬೀದಿ ಹೋಕರು; ಬೀದಿಯ ಜನ.

    canakin
    ನಾಮವಾಚಕ
    cannikin ಎಂಬುದರ ರೂಪಾಂತರ.

    canal
    ನಾಮವಾಚಕ
  • (ಜೀವವಿಜ್ಞಾನ) (ಆಹಾರ, ದ್ರವ, ಗಾಳಿ ಮೊದಲಾದವುಗಳ ಸಂಚಾರದ) ನಾಳ.
  • ಕಾಲುವೆ; ನಾಲೆ; ತೋಡುನಾಲೆ.
  • (ಪ್ರಾಣಿವಿಜ್ಞಾನ) ನಾಲೆ; ಚಿಪ್ಪಿನ ಪ್ರಾಣಿಗಳಲ್ಲಿ ಶ್ವಾಸನಾಳ ಹೊರಚಾಚಲು ಅನುಕೂಲಿಸುವಂತೆ ಚಿಪ್ಪಿನಲ್ಲಿರುವ–ಗಾಡಿ, ತೋಡು, ಕಾಲುವೆ.
  • ಕುಜನಾಲೆಗಳು; ಭೂಮಿಯಿಂದ ನೋಡಿದಾಗ ಮಂಗಳ ಗ್ರಹದ ಮೇಲೆ ಕಾಲುವೆಗಳಂತೆ ಕಾಣುವ ಗುರುತುಗಳು.

  • canal
    ಸಕರ್ಮಕ ಕ್ರಿಯಾಪದ
    (ವಿರಳ ಪ್ರಯೋಗ)
  • ಕಾಲುವೆ ತೋಡು.
  • ನಾಲೆ ಒದಗಿಸು.


  • logo