logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

banded
ಗುಣವಾಚಕ
(ಭೂತಕೃದಂತ) (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಬಣ್ಣಬಣ್ಣದ – ಪಟ್ಟಿ ಯಾ ಪಟ್ಟೆಗಳುಳ್ಳ, ಪಟ್ಟೆಗಳ ಗುರುತುಗಳಿರುವ.

banderilla
ನಾಮವಾಚಕ
(ಗೂಳಿಕಾಳಗದಲ್ಲಿ ಗೂಳಿಯ ಕತ್ತು ಹಾಗೂ ಭುಜಗಳಿಗೆ ತಿವಿಯುವ) ಅಲಂಕಾರ ಮಾಡಿದ ಈಟಿ.

banderillero
ನಾಮವಾಚಕ
ಗೂಳಿ – ಕಾದಾಳು, ಮಲ್ಲ; ಅಲಂಕಾರ ಮಾಡಿದ ಹಗುರ ಈಟಿಗಳನ್ನು ಹಿಡಿದು ಗೂಳಿ ಕಾಳಗದಲ್ಲಿ ಭಾಗವಹಿಸುವವನು.

banderol(e)
ನಾಮವಾಚಕ
  • ಸೀಳು, ಈಟಿ – ಬಾವುಟ; ಚುಂಗುಳ್ಳ ಪತಾಕೆ; ಕಿರಿದಾಗಿಯೂ, ಉದ್ದವಾಗಿಯೂ ಇದ್ದು, ಹಾರುವ ಕೊನೆ ಎರಡು ಸೀಳಾಗಿರುವ ಬಾವುಟ.
  • (ನೈಟ್‍ ಯೋಧನ ಭಲ್ಲೆಗೆ ಸಿಕ್ಕಿಸಿರುವ) ಅಲಂಕಾರ ಧ್ವಜ.
  • (ವಾಸ್ತುಶಿಲ್ಪ) ಅಕ್ಷರಪಟ್ಟಿಕೆ; ಲಿಪಿಫಲಕ; ಕೊರೆದ ಬರಹ ಯಾ ಸಂಕೇತ ಉಳ್ಳ ಪಟ್ಟಿಯಂಥ ಸುರುಳಿ ಯಾ ಕಲ್ಲಿನ ಪಟ್ಟಿ.
  • ಗೋರಿ ಬಾವುಟ; ಸಮಾಧಿಪತಾಕೆ.

  • bandersnatch
    ನಾಮವಾಚಕ
  • (ಲೂಯಿಕ್ಯಾರಲ್‍ನ ಕೃತಿಯಲ್ಲಿ ಬರುವ) ಕಾಲ್ಪನಿಕ ಕ್ರೂರಮೃಗ.
  • ವಿಲಕ್ಷಣ ಮನುಷ್ಯ; ವಿಕೃತ ವ್ಯಕ್ತಿ; ವಿಚಿತ್ರಸ್ವಭಾವದ, ವಿಕಾರರೂಪದ – ವ್ಯಕ್ತಿ.

  • bandicoot
    ನಾಮವಾಚಕ
    (ಪ್ರಾಣಿವಿಜ್ಞಾನ)
  • (ಇಂಡಿಯದ) ಹೆಗ್ಗಣ; ಹಂದಿ ಇಲಿ.
  • (ಆಸ್ಟ್ರೇಲಿಯ, ಹೊಟ್ಟೆಯಲ್ಲಿ ಚೀಲವುಳ್ಳ) ಹುಳುದಿನಿ; ಕ್ರಿಮಿಭಕ್ಷಕ.

  • bandicoot rat
    ನಾಮವಾಚಕ
    = bandicoot.

    banding
    ನಾಮವಾಚಕ
  • ಗುಂಪಾಗುವುದು; ತಂಡವಾಗುವುದು; ಒಟ್ಟಿಗೆ ಸೇರುವುದು.
  • (ರಿಬ್ಬನ್‍, ಟೇಪು ಮೊದಲಾದ) ಪಟ್ಟಿ; ಕಟ್ಟು.
  • (ಖನಿಜ, ದಾರು, ಮೊದಲಾದವುಗಳ ಮೇಲಿರುವ) ಪಟ್ಟೆ.
  • ಹದಿ, ನಾಟು, ಖಚಿತ – ಪಟ್ಟೆ. ಮರದ ಪೀಠೋಪಕರಣ ಮೊದಲಾದವುಗಳ ಮೇಲೆ ಕೊರೆದು ಹದ್ದಿಸಿದ ಪಟ್ಟೆ (ಅಲಂಕಾರ).

  • bandit
    ನಾಮವಾಚಕ
  • (ಸಾಮಾನ್ಯವಾಗಿ ವ್ಯವಸ್ಥಿತ ಗುಂಪುಗಳ) ಡಾಕು; ದರೋಡೆಗಾರ; ಡಕಾಯತ; ದಾರಿಗಳ್ಳ.
  • ನ್ಯಾಯಭ್ರಷ್ಟ; ನ್ಯಾಯರಕ್ಷಣೆಯಿಂದ ಬಹಿಷ್ಕೃತನಾದವನು.

  • banditry
    ನಾಮವಾಚಕ
  • ದರೋಡೆ ತಂಡ; ಡಕಾಯತ ಗುಂಪು.
  • ದರೋಡೆ; ಡಕಾಯತಿ.


  • logo