ಸರಿಯಿಲ್ಲದ; ತೀರಾ ಅನ್ಯಾಯದ; ನ್ಯಾಯವಲ್ಲದ; ತರ್ಕಸಮ್ಮತವಲ್ಲದ.
(ಯಾರೂ ಒಪ್ಪದಷ್ಟು) ಅತಿಯಾದ; ವಿಪರೀತವಾದ; ಮಿತಿಮೀರಿದ: you take an unconscionable time for dressing ಬಟ್ಟೆ ಹಾಕಿಕೊಳ್ಳಲು ನೀನು ಮಿತಿಮೀರಿದ ಕಾಲ ತೆಗೆದುಕೊಳ್ಳುವೆ.
unconscionableness
ನಾಮವಾಚಕ
ಆತ್ಮಸಾಕ್ಷಿಯ ಅಭಾವ.
ಆತ್ಮಸಾಕ್ಷಿಗೆ ವಿರುದ್ಧವಾಗಿರುವುದು.
ತೀರಾ ಅನ್ಯಾಯವಾಗಿ ನಡೆದುಕೊಳ್ಳುವುದು.
ವೈಪರೀತ್ಯ; ಮಿತಿಮೀರಿರುವುದು.
unconscionably
ಕ್ರಿಯಾವಿಶೇಷಣ
ಆತ್ಮಸಾಕ್ಷಿಯಿಲ್ಲದಂತೆ.
ಆತ್ಮಸಾಕ್ಷಿಗೆ ವಿರುದ್ಧವಾಗಿ.
ತೀರಾ ಅನ್ಯಾಯವಾಗಿ.
(ಯಾರೂ ಒಪ್ಪದಷ್ಟು) ಅತಿಯಾಗಿ; ವಿಪರೀತವಾಗಿ; ಮಿತಿಮೀರಿ.
unconscious
ಗುಣವಾಚಕ
ಪದಗುಚ್ಛ
unconscious humour ಅರಿವಿಲ್ಲದ ಹಾಸ್ಯ.
ಪ್ರಜ್ಞೆ ಯಿಲ್ಲದ; ಜ್ಞಾನತಪ್ಪಿದ; ಮೈಮೇಲೆ ಎಚ್ಚರವಿಲ್ಲದ: lay unconscious for hours ಅನೇಕ ಗಂಟೆಗಳ ಕಾಲ ಪ್ರಜ್ಞೆಯಿಲ್ಲದೆ ಬಿದ್ದಿದ್ದ.
ಅಪ್ರಜ್ಞಾತ; ಅರಿವಿಲ್ಲದ; ತಿಳಿಯದ: was unconscious of any change ಏನೊಂದು ಬದಲಾವಣೆಯನ್ನೂ ಅರಿಯದೆ ಇದ್ದ. unconscious prejudice ಅಪ್ರಜ್ಞಾತ ಪೂರ್ವಾಗ್ರಹ.
unconscious
ನಾಮವಾಚಕ
(ಮನೋವಿಜ್ಞಾಣ) (ಮನಸ್ಸಿನ) ಅಪ್ರಜ್ಞೆ; ಸುಪ್ತ, ಅಜಾಗೃತ – ಸ್ಥಿತಿ; ಜಾಗೃತ ಮನಸ್ಸಿಗೆ ನಿಲುಕದ, ಆದರೆ ನಡವಳಿಕೆ, ಭಾವಗಳು, ಮೊದಲಾದವುಗಳ ಮೇಲೆ ಪರಿಣಾಮ ಬೀರುವ ಮನಸ್ಸಿನ ವಿಭಾಗ: collective unconscious ಸಮಷ್ಟಿ ಸುಪ್ತಪ್ರಜ್ಞೆ.