logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

officer
ಸಕರ್ಮಕ ಕ್ರಿಯಾಪದ
  • ಅಧಿಕಾರಿಗಳನ್ನು ಒದಗಿಸು: officer a militia ಒಂದು ಸೈನ್ಯಕ್ಕೆ ಅಧಿಕಾರಿಗಳನ್ನು ನೇಮಿಸು.
  • (ಯಾವುದೋ ಒಂದರ) ಸೇನಾಧಿಪತಿಯಾಗಿರು: veterans officered the recruits ಹೊಸ ಸಿಪಾಯಿಗಳಿಗೆ ಹೆಚ್ಚು ಅನುಭವಿಗಳಾಗಿದ್ದವರು ಯಾ ಪರಿಣತರು ಸೈನ್ಯಾಧಿಕಾರಿಗಳಾಗಿದ್ದರು.

  • official
    ಗುಣವಾಚಕ
  • ಕಚೇರಿಯ; ಹುದ್ದೆಯ; ಅಧಿಕಾರದ; (ಕರ್ತವ್ಯವಾಗಿರುವ) ಅಧಿಕಾರಕ್ಕೆ ಸಂಬಂಧಿಸಿದ.
  • ಅಧಿಕಾರಾವಧಿಯ ಯಾ ಅದಕ್ಕೆ ಸಂಬಂಧಿಸಿದ.
  • ಅಧಿಕಾರದ; ಅಧಿಕಾರಿಗಳ ಯಾ ಅಧಿಕಾರಶಾಹಿಯ ಲಕ್ಷಣದ.
  • ಅಧಿಕೃತ; ಅಧಿಕಾರದಲ್ಲಿರುವ ವ್ಯಕ್ತಿಯಿಂದಾದ ಯಾ ಆ ಸಂಬಂಧದ.
  • ಅಧಿಕಾರದಲ್ಲಿರುವ; ಸಾರ್ವಜನಿಕ ಹುದ್ದೆಯಲ್ಲಿ ನೇಮಕಗೊಂಡ.
  • (ವೈದ್ಯಶಾಸ್ತ್ರ) ಅಧಿಕೃತ; ಅಧಿಕೃತ ಔಷಧಕ್ಕೆ ಮತ್ತು ಗ್ರಂಥಕ್ಕೆ ಅನುಸಾರವಾದ.
  • ಅಧಿಕಾರಿಗಳಿಗೆ ಕಚೇರಿಯವರಿಗೆ–ವಾಡಿಕೆಯಾದ, ಸಹಜವಾದ: offical solemnity ಅಧಿಕಾರ ಸಹಜ ಗಾಂಭೀರ್ಯ.

  • official
    ನಾಮವಾಚಕ ಪದಗುಚ್ಛ
    official principal = 2official(2).
  • ಅಧಿಕಾರಿ; ಹುದ್ದೆಗಾರ; ಉದ್ಯೋಗಸ್ಥ; ತನ್ನ ಹುದ್ದೆಗೆ ಸಂಬಂಧಿಸಿದ ಕರ್ತವ್ಯಗಳಲ್ಲಿ ನಿರತನಾದವನು.
  • (ಆರ್ಚ್‍ ಬಿಷಪ್‍, ಬಿಷಪ್‍ ಯಾ ಮುಖ್ಯವಾಗಿ ಆರ್ಚ್‍ ಡೀಕನ್‍ ಮೊದಲಾದ) ನ್ಯಾಯಸ್ಥಾನದ ಅಧ್ಯಕ್ಷ, ನ್ಯಾಯಾಧಿಪತಿ.

  • official birthday
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ರಾಜನ ಯಾ ರಾಣಿಯ ಜನ್ಮದಿನವನ್ನು ಆಚರಿಸಲು ಆರಿಸಿದ, ಜೂನ್‍ ತಿಂಗಳಲ್ಲಿನ ಒಂದು ದಿನ.

    official secrets
    ನಾಮವಾಚಕ
    ಅಧಿಕೃತ ರಹಸ್ಯಗಳು; ರಾಷ್ಟ್ರೀಯ ಸುರಕ್ಷತೆ ಯಾ ಭದ್ರತೆಗೆ ಸಂಬಂಧಿಸಿದ ಗೋಪ್ಯಮಾಹಿತಿ.

    officialdom
    ನಾಮವಾಚಕ
  • ಅಧಿಕಾರಿ ವರ್ಗ; ಅಧಿಕಾರಿಶಾಹಿ: all officialdom, legislators and judges ಎಲ್ಲ ಅಧಿಕಾರಿವರ್ಗ, ಶಾಸಕರು ಮತ್ತು ನ್ಯಾಯಮೂರ್ತಿಗಳು.
  • ಅಧಿಕಾರ–ಕ್ಷೇತ್ರ, ವ್ಯಾಪ್ತಿ.

  • officialese
    ನಾಮವಾಚಕ
    (ಹೀನಾರ್ಥಕ ಪ್ರಯೋಗ) ಅಧಿಕಾರಿ (ಪರಿ)ಭಾಷೆ; ಅಧಿಕಾರಿ ವರ್ಗದವರು ಯಾ ಅಧಿಕೃತ ದಾಖಲೆಗಳಲ್ಲಿ ಬಳಸುವ ವಿಶಿಷ್ಟ ಶಬ್ದಾವಳಿ, ವಿಚಿತ್ರಭಾಷೆ.

    officialism
    ನಾಮವಾಚಕ
    ಅಧಿಕಾರ–ಶಾಹಿ, ತಂತ್ರ, ಪದ್ಧತಿ; ಅಧಿಕಾರಿಗಳ ವ್ಯವಹಾರ ತಂತ್ರ, ರೀತಿನೀತಿಗಳು.

    officially
    ಕ್ರಿಯಾವಿಶೇಷಣ
  • ಅಧಿಕೃತವಾಗಿ; ವಿಧಿವತ್ತಾಗಿ; ವಿಧ್ಯುಕ್ತವಾಗಿ: the bridge will be officially opened today ಸೇತುವೆಯನ್ನು ಇಂದು ವಿಧ್ಯುಕ್ತವಾಗಿ ತೆರೆಯಲಾಗುತ್ತದೆ.
  • ಅಧಿಕಾರ ನಿಮಿತ್ತ: he is officially responsible for the accident ಅಧಿಕಾರ ನಿಮಿತ್ತ ಅವನೇ ಅಪಘಾತಕ್ಕೆ ಹೊಣೆಗಾರ.
  • ಅಧಿಕೃತವಾಗಿ; ಅಧಿಕಾರಿಯಿಂದ; ಅಧಿಕಾರಿಯ–ಮೂಲಕ, ಮುಖೇನ, ಸಮ್ಮುಖದಲ್ಲಿ.

  • officiant
    ನಾಮವಾಚಕ
    ಪುರೋಹಿತ; ಧಾರ್ಮಿಕ ಕಾರ್ಯಕಲಾಪಗಳನ್ನು ವಿಧಿವತ್ತಾಗಿ ನಡೆಸಿಕೊಡುವವ.


    logo