logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mammalogy
ನಾಮವಾಚಕ
ಸಸ್ತನಿ ವಿಜ್ಞಾನ; ಪ್ರಾಣಿವಿಜ್ಞಾನದಲ್ಲಿ ಸಸ್ತನಿಗಳನ್ನು ಕುರಿತು ವಿಭಾಗ.

mammary
ಗುಣವಾಚಕ
(ಹೆಂಗಸರ ಯಾ ಹೆಣ್ಣು ಪ್ರಾಣಿಗಳ) ಮೊಲೆಗಳ; ಸ್ತನಗಳ ಯಾ ಸ್ತನಗಳಿಗೆ ಸಂಬಂಧಿಸಿದ.

mammary gland
ನಾಮವಾಚಕ
ಸ್ತನಗ್ರಂಥಿ; ಸಸ್ತನಿಗಳ ಹಾಲನ್ನು ಉತ್ಪತ್ತಿಮಾಡುವ ಗ್ರಂಥಿ.

mammee
ನಾಮವಾಚಕ
ಮ್ಯಾಮೀ; ಮ್ಯಾಮಿಲಿ ಅಮೆರಿಕಾನ ಕುಲದ, ಕೆಂಪು ಸಿಪ್ಪೆಯ, ಹಳದಿ ತಿರುಳಿನ ಹಣ್ಣುಬಿಡುವ, ಉಷ್ಣವಲಯದ ಅಮೆರಿಕದ ಮರ.

mammiferous
ಗುಣವಾಚಕ
ಸ್ತನಿ; ಸ್ತನಗಳುಳ್ಳ; ಮೊಲೆಗಳುಳ್ಳ.

mammiform
ಗುಣವಾಚಕ
ಮೊಲೆಯಾಕಾರದ; ಸ್ತನಾಕಾರದ; ಚೂಚುಕಾಕಾರದ.

mammilla
ನಾಮವಾಚಕ
(ಅಮೆರಿಕನ್‍ ಪ್ರಯೋಗ) = mamilla.

mammography
ನಾಮವಾಚಕ
(ವೈದ್ಯಶಾಸ್ತ್ರ) ಸ್ತನರೇಖನ; ಮೊಲೆಗಳ ಅಪಸಾಮಾನ್ಯತೆಗಳನ್ನು (ಮುಖ್ಯವಾಗಿ ಗಂತಿಗಳನ್ನು) ಕ್ಷ – ಕಿರಣಗಳಿಂದ ಪತ್ತೆ ಹಚ್ಚುವ ವಿಧಾನ, ತಂತ್ರ.

Mammon
ನಾಮವಾಚಕ ಪದಗುಚ್ಛ
the Mammon of unrighteousness ಕೆಟ್ಟ ಹಣ; ದುರ್ಧನ; ದುರ್ವ್ಯಯ ಮಾಡುವ ಯಾ ಅನ್ಯಾಯದಿಂದ ಗಳಿಸಿದ ಧನ.
    1. (ಪೂಜಾ ವಸ್ತುವೆಂದು ಯಾ ಪಾಪಪ್ರೇರಕವೆಂದು ಭಾವಿಸಿದ) ಧನ.
    2. (ದೈವ ವೈರಿಯಾದ ಸೈತಾನನ ಅನುಯಾಯಿಯಾದ ‘ಮ್ಯಾಮನ್‍’ ಎಂಬ) ಧನ ದೇವತೆ; ಧನಾಧಿಪತಿ; ಧನಕ್ಕೆ ಅಧಿಪತಿಯಾದ ದುರ್ದೇವತೆ.
  • (ಇಹಲೋಕದ ಸಂಪತ್ತನ್ನೇ ಪುರುಷಾರ್ಥವೆಂದು ಪೂಜಿಸುವ) ಧನಾರಾಧಕ; ಧನಲೋಭಿ; ಧನಪಿಶಾಚಿ.

  • Mammonish
    ಗುಣವಾಚಕ
    ಧನಲೋಭದ; ಧನಲೋಭವುಳ್ಳ; ಧನಲೋಭಪ್ರೇರಿತ; ಧನದಾಹದ; ಧನಪಿಶಾಚಿ ಹಿಡಿದ.


    logo