logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lapidate
ಸಕರ್ಮಕ ಕ್ರಿಯಾಪದ
(ಸಾಹಿತ್ಯಕ)
  • ಕಲ್ಲು – ಹೊಡೆ, ಬೀರು.
  • ಕಲ್ಲು ಹೊಡೆದು, ಬೀರಿ – ಕೊಲ್ಲು.

  • lapidation
    ನಾಮವಾಚಕ
    (ಸಾಹಿತ್ಯಕ)
  • ಶಿಲಾವರ್ಷ; ಕಲ್ಲು – ಹೊಡೆಯುವುದು, ಬೀರುವುದು.
  • ಕಲ್ಲು ಹೊಡೆದು, ಬೀರಿ – ಕೊಲ್ಲುವುದು.

  • lapidification
    ನಾಮವಾಚಕ
    ಶಿಲೀಕರಣ; ಕಲ್ಲಾಗಿಸುವಿಕೆ; ಕಲ್ಲಾಗಿ ಮಾಡುವಿಕೆ.

    lapidify
    ಸಕರ್ಮಕ ಕ್ರಿಯಾಪದ
    ಶಿಲೆಯಾಗಿಸು; ಶಿಲೀಕರಿಸು; ಕಲ್ಲಾಗಿಸು; ಕಲ್ಲಾಗಿ ಮಾಡು.

    lapilli
    ನಾಮವಾಚಕ
    (ಭೂವಿಜ್ಞಾನ) (ಬಹುವಚನ) ಅಗ್ನಿ ಪರ್ವತಗಳಿಂದ ಹೊರಚಿಮ್ಮಿದ ಕಲ್ಲುಚೂರುಗಳು, ಶಿಲಾಶಕಲಗಳು.

    lapillus
    ನಾಮವಾಚಕ
    (ಭೂವಿಜ್ಞಾನ) (ಏಕವಚನ) ಜ್ವಾಲಾಮುಖಿಗಳಿಂದ ಹೊರಬರುವ ಚಿಕ್ಕಚಿಕ್ಕ ಕಲ್ಲಿನಂಥ ಚೂರು ಯಾ ಗಾಜಿನಂಥ ತುಂಡು.

    lapis lazuli
    ನಾಮವಾಚಕ
  • ವೈಡೂರ್ಯ; ದಟ್ಟ ನೀಲಿಬಣ್ಣದ, ಪಾರದರ್ಶಕವಲ್ಲದ, ಗಂಧಕಯುಕ್ತ ಸಿಲಿಕೇಟ್‍ಗಳಿಂದಾದ ಒಂದು ಪ್ರಶಸ್ತ ಶಿಲೆ.
  • ವೈಡೂರ್ಯದಿಂದ ತಯಾರಿಸಿದ ವರ್ಣದ್ರವ್ಯ.
  • ವೈಡೂರ್ಯ ನೀಲಿ; ವೈಡೂರ್ಯದ ಬಣ್ಣ.

  • Laplander
    ನಾಮವಾಚಕ
    ಲ್ಯಾಪ್‍ಲ್ಯಾಂಡಿನವನು; ಯೂರೋಪಿನ ಲ್ಯಾಪ್‍ಲ್ಯಾಂಡ್‍ನಲ್ಲಿ ಹುಟ್ಟಿದವನು, ವಾಸಿಸುವವನು ಯಾ ಆ ಮೂಲದವನು.

    Lapp
    ನಾಮವಾಚಕ
  • ಲ್ಯಾಪ್‍(ನು); ಉತ್ತರ ಸ್ಕ್ಯಾಂಡಿನೇವಿಯದ, ಅಲೆಮಾರಿಯಾದ ಕುಳ್ಳ ಜನಾಂಗದವನು.
  • ಲ್ಯಾಪ್‍ ಭಾಷೆ; ಲ್ಯಾಪ್‍ ಜನರ ಭಾಷೆ.

  • Lapp
    ಗುಣವಾಚಕ
    ಲ್ಯಾಪ್‍ಲ್ಯಾಂಡ್‍ ದೇಶದವರ ಯಾ ಅವರ ಭಾಷೆಯ.


    logo