logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ejector seat
ನಾಮವಾಚಕ
= ejection seat.

eke
ಸಕರ್ಮಕ ಕ್ರಿಯಾಪದ ಪದಗುಚ್ಛ
eke out = 1eke(1).
  • ಕೊರತೆ ತುಂಬಿಸಿಕೊ; ಸಾಲದಿರುವ ವರಮಾನ, ತಿಳಿವಳಿಕೆ, ಮೊದಲಾದವಕ್ಕೆ ಪೂರಣ ಮಾಡು, ಭರ್ತಿಮಾಡು, ಸೇರಿಸಿಕೊ.
  • ಜೀವನ ನಡೆಸು; ಹೊಟ್ಟೆ ಹೊರೆ; ಉದರಂಭರಣ ಮಾಡು.

  • eke
    ಕ್ರಿಯಾವಿಶೇಷಣ
    (ಪ್ರಾಚೀನ ಪ್ರಯೋಗ) ಮತ್ತೂ; ಕೂಡ; ಸಹ; ಅಲ್ಲದೆ; ಜೊತೆಗೆ; ಮೇಲಾಗಿ.

    ekistic
    ಗುಣವಾಚಕ
    ವಸತಿಶಾಸ್ತ್ರದ; ವಸತಿಶಾಸ್ತ್ರೀಯ; ವಸತಿಶಾಸ್ತ್ರಕ್ಕೆ ಸಂಬಂಧಿಸಿದ.

    ekistician
    ನಾಮವಾಚಕ
    ವಸತಿಶಾಸ್ತ್ರಜ್ಞ; ವಸತಿಶಾಸ್ತ್ರದಲ್ಲಿ — ತಜ್ಞ, ನುರಿತವ; ವಸತಿ ವಿಜ್ಞಾನಿ.

    ekistics
    ನಾಮವಾಚಕ
    ವಸತಿಶಾಸ್ತ್ರ; ವಸತಿ ವಿಜ್ಞಾನ; ಮಾನವ ಜನಾಂಗಗಳು, ಸಮುದಾಯಗಳು ನೆಲಸುವ ವಸತಿಗಳನ್ನು ಮತ್ತು ಅವುಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಶಾಸ್ತ್ರಭಾಗ.

    ekka
    ನಾಮವಾಚಕ
  • (ಭಾರತ) ಎಕ್ಕ; ಒಂಟಿಕುದುರೆಯ ಸಣ್ಣಗಾಡಿ.
  • ಒಂಟೆತ್ತಿನ ಗಾಡಿ.

  • el
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಆಡುಮಾತು) ಎತ್ತರಿಸಿದ ರೈಲುದಾರಿ.

    elaborate
    ಗುಣವಾಚಕ
  • ಎಚ್ಚರಿಕೆಯಿಂದ ಯಾ ಬಹಳ ವಿವರವಾಗಿ ಪರ್ಯಾಲೋಚಿಸಿ ಮಾಡಿದ; ಸೂಕ್ಷ್ಮ ಪರಿಶೀಲನೆಯಿಂದ ಮಾಡಿದ.
  • ಅತ್ಯುತ್ತಮವಾಗಿ ಪರಿಷ್ಕರಿಸಿದ, ನಯಗೊಳಿಸಿದ.
  • ವಿಸ್ತಾರವಾದ; ಬಹಳ ವಿವರವಾದ; ಸುದೀರ್ಘವಾದ; ಜಟಿಲವಾದ; ಸಂಕೀರ್ಣವಾದ; ವಿವರಗಳಿಂದ ತುಂಬಿದ; ವಿಸ್ತಾರವಾಗಿ — ಬೆಳೆಸಿದ, ನಿರೂಪಿಸಿದ, ಮಾಡಿದ.

  • elaborate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ವಿವರಿಸು; ವಿವರವಾಗಿ ನಿರೂಪಿಸು; ವಿಶದವಾಗಿ — ತಿಳಿಸು, ವರ್ಣಿಸು, ಹೇಳು: I need not elaborate ನಾನು ವಿವರವಾಗಿ ಹೇಳಬೇಕಾಗಿಲ್ಲ.
  • ಪರಿಶ್ರಮದಿಂದ ಉತ್ಪಾದಿಸು; ಕಷ್ಟಪಟ್ಟು, ಪ್ರಯತ್ನದಿಂದ ಉಂಟುಮಾಡು.
  • (ಹೊಸವಿಚಾರ, ಕಲ್ಪನೆ, ಸಂಶೋಧನೆ, ಮೊದಲಾದವನ್ನು) ವಿವರಿಸು; ವಿಸ್ತಾರವಾಗಿ ಬೆಳಸು; ವಿಶದೀಕರಿಸು; ದೀರ್ಘ ವಿವರಣೆಕೊಡು.
  • (ನೈಸರ್ಗಿಕ ಶಕ್ತಿಯ ವಿಷಯದಲ್ಲಿ) ತನ್ನ ಮೂಲಧಾತು ಯಾ ಇನ್ನಾವುದೇ ಆಕರಗಳಿಂದ (ಬೇಕಾದ ಪದಾರ್ಥಗಳನ್ನು) ಉತ್ಪತ್ತಿಮಾಡು, ಉತ್ಪಾದಿಸು.


  • logo