logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

camshaft
ನಾಮವಾಚಕ
ಕ್ಯಾಮ್‍ದಂಡ; ಯಂತ್ರಗಳಲ್ಲಿ, ವೃತ್ತಚಲನೆಯನ್ನು ವ್ಯತ್ಯಾಸಗೊಳಿಸಲು ಅಳವಡಿಸಿರುವ ಚಕ್ರ, ಉರುಳೆ ಮೊದಲಾದವುಗಳ ಚಾಚುಭಾಗಗಳನ್ನು ಹೊತ್ತಿರುವ ದಂಡ.

camwood
ನಾಮವಾಚಕ
(ಪಶ್ಚಿಮ ಆಹ್ರಿಕದ, ವರ್ಣದ್ರವ್ಯ ಕೊಡುವ, ಗಟ್ಟಿಯಾದ) ಕೆಮ್ಮರ; ಕೆಂಪು ಮರ.

can
ನಾಮವಾಚಕ ನುಡಿಗಟ್ಟು
  • ಕ್ಯಾನು; ಕೈಡಬ್ಬಿ; (ನೀರು, ಎಣ್ಣೆ, ಮೊದಲಾದ ದ್ರವಗಳನ್ನಿಡುವ, ಸಾಮಾನ್ಯವಾಗಿ ಹಿಡಿಯುಳ್ಳ) ಡಬ್ಬಿ; ಪಾತ್ರೆ.
  • (ಬೈಜಿಕ ಇಂಧನದಂಡದ) ಕವಚ.
  • (ಅಮೆರಿಕನ್‍ ಪ್ರಯೋಗ) ಲೋಹದ–ಪಾತ್ರೆ, ಬಕೀಟು, ತಪ್ಪಲೆ, ಪೆಟ್ಟಿಗೆ ಮೊದಲಾದವು.
  • (ಅಶಿಷ್ಟ) ಕಕ್ಕಸು; ಪಾಯಿಖಾನೆ.
  • (ಅಶಿಷ್ಟ) ಜೈಲು; ಸೆರೆಮನೆ; ಬಂದೀಖಾನೆ.
  • (ಮಾಂಸ, ಮೀನು, ಹಣ್ಣು, ಪಾನೀಯ ಮೊದಲಾದವು ಕೆಡದಂತೆ ಇಡಲು, ಗಾಳಿಯಾಡದಂತೆ ಬೆಸುಗೆ ಹಾಕಿದ) ತವರದ ಡಬ್ಬಿ; ತವರ ಲೇಪಿಸಿದ, ಕಬ್ಬಿಣ ಯಾ ಸ್ಟೀಲಿನ–ಡಬ್ಬಿ, ಡಬ್ಬ.

  • can
    ಸಕರ್ಮಕ ಕ್ರಿಯಾಪದ
  • ಡಬ್ಬಿಗೆ ತುಂಬು; ಡಬ್ಬಿಗೆ ಹಾಕಿಡು; ಡಬ್ಬಿಯಲ್ಲಿ ಹಾಕು.
  • (ಗಾಳಿ ಹೊಗದಂತೆ) ಡಬ್ಬಿಯಲ್ಲಿ ಹಾಕಿ–ಭದ್ರಪಡಿಸು, ರಕ್ಷಿಸು.
  • (ಅಶಿಷ್ಟ) (ಯಾವುದನ್ನೋ) ಬಿಟ್ಟುಬಿಡು; (ಒಂದರಿಂದ) ದೂರ ಸರಿ.

  • can
    ಸಹಾಯಕ ಕ್ರಿಯಾಪದ
  • (ಯಾವುದನ್ನೇ ಮಾಡಲು) ಬಲ್ಲದ್ದಾಗಿರು; ಶಕ್ತವಾಗಿರು; ಸಮರ್ಥವಾಗಿರು; ಯೋಗ್ಯವಾಗಿರು; ಕುಶಲವಾಗಿರು: he can solve the problem easily ಅವನು ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಲ್ಲ.
  • ಹಕ್ಕು ಹೊಂದಿರು; ಅಧಿಕಾರ ಪಡೆದಿರು; ಅರ್ಹತೆ ಹೊಂದಿರು; ಅರ್ಹನಾಗಿರು: he can change whatever he wishes in the draft ಕರಡಿನಲ್ಲಿ ಅವನು ತನಗೆ ಬೇಕೆನಿಸಿದುದನ್ನು ಬದಲಾಯಿಸಬಲ್ಲ.
  • (ಆಡುಮಾತು) ಬಹುದು; ಒಪ್ಪಿಗೆ, ಅನುಮತಿ ಯಾ ಅವಕಾಶ ಪಡೆದಿರು: all right, you can go ಸರಿ, ನೀನು ಹೋಗಬಹುದು. can I speak to you? ನಾನು ನಿನ್ನೊಂದಿಗೆ ಮಾತಾಡಬಹುದೇ?
  • (ಹೇಗೆ ಎಂಬುದನ್ನು) ಅರಿತಿರು; ತಿಳಿದಿರು; ಗೊತ್ತಿರು; ಬಲ್ಲವನಾಗಿರು: can you play cricket? ನೀನು ಕ್ರಿಕೆಟ್‍ ಆಡಬಲ್ಲೆಯಾ? ನಿನಗೆ ಕ್ರಿಕೆಟ್‍ ಆಡುವುದು ಗೊತ್ತೆ? can you speak French? ನಿನಗೆ ಹ್ರೆಂಚ್‍ (ಮಾತಾಡಲು) ಬರುತ್ತದೆಯೇ?
  • ಅಧ್ಯಾಹೃತ ಕ್ರಿಯಾಪದಗಳ ಅರ್ಥವನ್ನು ಕೊಡುವಲ್ಲಿ: can do what I can ನನಗೆ (ಮಾಡಲು) ಆಗುವುದನ್ನು ಮಾಡಬಲ್ಲೆ.

  • can't
    ಕ್ರಿಯಾಪದ
    = cannot.

    can-buoy
    ನಾಮವಾಚಕ
    ತೇಲುಡಬ್ಬ; ಸಮುದ್ರದಿಂದ ರೇವನ್ನು ಹೊಗುತ್ತಿರುವ ಹಡಗಿಗೆ ಮರುಳುದಿಬ್ಬ, ಹಾದಿ ಮೊದಲಾದವನ್ನು ತೋರಿಸುವ, ಶಂಕುವಿನಾಕಾರದ ತೇಲುವೆ.

    can-dock
    ನಾಮವಾಚಕ
    ಕ್ಯಾಂಡಾಕ್‍; ಕನ್ನೈದಿಲೆ ಬಳಗದ ಹಲವಾರು ನೀರುಲಿ ಗಿಡಗಳು.

    can-opener
    ನಾಮವಾಚಕ
    ಡಬ್ಬಿತೆರೆಗ; ಡಬ್ಬಿಯ ಮುಚ್ಚಳವನ್ನು ತೆರೆಯುವ ಸಾಧನ.

    Can.
    ಸಂಕ್ಷಿಪ್ತ
  • Canada.
  • Canadian.


  • logo