logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

band wheel
ನಾಮವಾಚಕ
ಪಟ್ಟೆಚಕ್ರ; ಪಟ್ಟೆಗಾಲಿ:
  • ಚಕ್ರದ ಮೇಲೆ ಹಾಯ್ದುಹೋಗಿರುವ ಪಟ್ಟೆ ಸುತ್ತುವುದರಿಂದ ನಡೆಯುವ ಚಕ್ರ.
  • ಪಟ್ಟೆಗರಗಸ ಯಾವುದರ ಮೇಲೆ ಸುತ್ತುವುದೋ ಆ ಚಕ್ರ.

  • band-saw
    ನಾಮವಾಚಕ
    ಪಟ್ಟಿ, ಪಟ್ಟೆ – ಗರಗಸ; ಚಕ್ರಗಳ ಮೇಲೆ ಸುತ್ತುತ್ತಿರುವ, ಕೊನೆಯಿಲ್ಲದ ಉಕ್ಕಿನ ಪಟ್ಟಿಯ ಏಣಿನಲ್ಲಿ ಹಲ್ಲುಗಳನ್ನು ಕೊಯ್ದಿರುವ ಗರಗಸ.

    band-saw
    ಸಕರ್ಮಕ ಕ್ರಿಯಾಪದ
    ಪಟ್ಟೆ ಗರಗಸದಿಂದ ಕೊಯ್ಯು.

    band-stone
    ನಾಮವಾಚಕ
    ಬಾಂದುಚಪ್ಪಡಿ; ಗೋಡೆಗೆ ಬಿಗಿಕೊಡಲು ಸೇರಿಸುವ ಅಡ್ಡ ಚಪ್ಪಡಿ.

    bandage
    ನಾಮವಾಚಕ
  • (ಮುರಿದ ಅಂಗ, ಗಾಯ, ಮೊದಲಾದವನ್ನು ಕಟ್ಟುವ) ಬ್ಯಾಂಡೇಜು; ಕಟ್ಟು; ಪಟ್ಟಿ. Figure: bandages
  • ಕಣ್ಣುಪಟ್ಟಿ; ಕಣ್ಣು ಕಟ್ಟುವ ಪಟ್ಟಿ.

  • bandage
    ಸಕರ್ಮಕ ಕ್ರಿಯಾಪದ
    ಬ್ಯಾಂಡೇಜು ಕಟ್ಟು; ಪಟ್ಟಿಕಟ್ಟು; ಕಟ್ಟುಹಾಕು.

    bandaging
    ನಾಮವಾಚಕ
    (ಶಸ್ತ್ರವೈದ್ಯ) ಬ್ಯಾಂಡೇಜು ಸಾಮಾಗ್ರಿ; ಕಟ್ಟುಪಟ್ಟಿ.

    bandan(n)a
    ನಾಮವಾಚಕ
  • ಚುಕ್ಕಿ ಕೈಚೌಕ; ವರ್ಣಕರವಸ್ತ್ರ; ಹಳದಿ ಯಾ ಬಿಳಿಯ ಚುಕ್ಕೆಗಳಿರುವ ಉಜ್ಜ್ವಲವರ್ಣದ ಕರವಸ್ತ್ರ.
  • (ಹಳದಿ ಯಾ ಬಿಳಿ ಚುಕ್ಕೆಗಳಿರುವ) ಕಂಠವಸ್ತ್ರ ಯಾ ತಲೆ ಚೌಕ.

  • bandbox
    ನಾಮವಾಚಕ ನುಡಿಗಟ್ಟು
    ಪಟ್ಟಿಪೆಟ್ಟಿಗೆ; ಹಿಂದೆ ಕೊರಳ ಪಟ್ಟಿಗಳನ್ನು ಇಡುತ್ತಿದ್ದ, ಈಗ ಕಾಲರ್‍, ಹ್ಯಾಟು, ಮೊದಲಾದವುಗಳನ್ನು ಇಡುವ, ಕಾಗದ ಹೊದಿಸಿದ ಕಾರ್ಡ್‍ಬೋರ್ಡಿನ ಯಾ ತೆಳುವಾದ ಮರದ ಪೆಟ್ಟಿಗೆ. looks as if one came out of a bandbox ಅವನು(ಳು), ಬಹಳ ನೀಟಾಗಿ, ತುಂಬ ಠಾಕು ಠೀಕಾಗಿ ಕಾಣುತ್ತಾನೆ(ಳೆ).

    bandeau
    ನಾಮವಾಚಕ
  • (ಹೆಂಗಸರ) ಕೂದಲಪಟ್ಟಿ; ಮುಂದಲೆ ಪಟ್ಟಿ; ಕೇಶಬಂಧನಿ.
  • (ಹೆಂಗಸರ ಟೋಪಿಯ) ಒಳಪಟ್ಟಿ.
  • ಮೊಲೆಕಟ್ಟು; ಸ್ತನಬಂಧ.
  • ಕಣ್ಣುಪಟ್ಟಿ.


  • logo