logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accumulative
ಗುಣವಾಚಕ
  • ಶೇಖರಿಸಿದ; ಕೂಡಹಾಕಿದ; ಸಂಚಿತ: accumulative proof, evidence ಸಂಚಿತ ಸಾಕ್ಷ್ಯ.
  • ಶೇಖರವಾಗುವಂತೆ–ಏರ್ಪಾಟು ಮಾಡಿದ, ಯೋಜಿಸಿದ.
  • ಶೇಖರಿಸುವ, ಕೂಡುಹಾಕುವ, ಸಂಚಯಿಸುವ–ಮನೋಭಾವವುಳ್ಳ, ಪ್ರವೃತ್ತಿಯುಳ್ಳ, ಸಮಭಾವವುಳ್ಳ.
  • ರಾಶಿಗೂಡುವ; ಶೇಖರವಾಗುವ; ಸಂಚಯವಾಗುವ.

  • accumulatively
    ಕ್ರಿಯಾವಿಶೇಷಣ
  • ಒಟ್ಟಿಲಾಗುವಂತೆ; ಶೇಖರಿಸುವ ರೀತಿಯಲ್ಲಿ.
  • ರಾಶಿಯಾಗಿ; ಒಟ್ಟಿಲಾಗಿ; ಸಮೂಹವಾಗಿ.

  • accumulativeness
    ನಾಮವಾಚಕ
    ಕೂಡಹಾಕುವಿಕೆ; ಶೇಖರಿಸುವಿಕೆ; ಕೂಡಹಾಕುವ ಸ್ವಭಾವ; ಸಂಚಯ ಪ್ರವೃತ್ತಿ.

    accumulator
    ನಾಮವಾಚಕ
  • ಕೂಡಿಡುವವ; ಕೂಡ ಹಾಕುವವ; ಶೇಖರಿಸುವವ; ಸಂಗ್ರಾಹಕ; ಸಂಚಾಯಕ.
  • ಸಂಚಾಯಕ:
    1. (ಇಂಗ್ಲಿಷ್‍ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಪದವಿಯನ್ನು) ಕಡಮೆ ಪದವಿಯೊಡನೆ ಯಾ ಕಾಲಾವಧಿಗೆ ಮುಂಚೆ ಪಡೆಯುವವ.
    2. (ಬ್ರಿಟಿಷ್‍ ಪ್ರಯೋಗ) ಸಂಚಾಯಕ ಕೋಶ; ವಿದ್ಯುತ್ತನ್ನು ಶೇಖರಿಸಿಟ್ಟುಕೊಳ್ಳಬಲ್ಲ ವಿದ್ಯುತ್ಕೋಶ ಯಾ ಬ್ಯಾಟರಿ.
    3. ಸಂಚಾಯಕ ಪಣ; ಪಂದ್ಯಗಳ ಒಂದು ಸರಣಿಯಲ್ಲಿ ಪ್ರತಿಯೊಂದರಲ್ಲಿ ಗೆದ್ದ ಹಣವನ್ನು ಅದರ ಮುಂದಿನ ಪಂದ್ಯದ ಮೇಲೆ ಬಾಜಿ ಕಟ್ಟುವ ವ್ಯವಸ್ಥೆ ಇರುವ ಪಂದ್ಯ ಸರಣಿಯ ಮೇಲೆ ಕಟ್ಟಿದ ಹಣ.
    4. ಕಂಪ್ಯೂಟರ್‍ ಯಂತ್ರದಲ್ಲಿನ ಸಂಚಾಯಕ ಸಲಕರಣೆ.

  • accuracy
    ನಾಮವಾಚಕ
  • ನಿಖರತೆ; ಕರಾರುವಾಕು; ನಿಷ್ಕೃಷ್ಟತೆ.
  • ಯಥಾರ್ಥತೆ; ಯಥಾವತ್ತಾಗಿರುವಿಕೆ.

  • accurate
    ಗುಣವಾಚಕ
  • (ಲೆಕ್ಕ, ಭಾಷೆ, ಮೊದಲಾದವುಗಳ ವಿಷಯದಲ್ಲಿ) ನಿಖರವಾದ; ಕರಾರುವಾಕ್ಕಾದ; ನಿಷ್ಕೃಷ್ಟವಾದ.
  • ಯಥಾರ್ಥವಾದ; ಒಂದು ಸತ್ಯ, ಮಾನ, ಆದರ್ಶ ಯಾ ಮಾದರಿಗೆ ಸರಿಯಾದ.

  • accurately
    ಕ್ರಿಯಾವಿಶೇಷಣ
    ನಿಖರವಾಗಿ; ಕರಾರುವಾಕ್ಕಾಗಿ; ನಿಷ್ಕೃಷ್ಟತೆಯಿಂದ.

    accursed
    ಗುಣವಾಚಕ
  • ಶಾಪಗ್ರಸ್ತ; ಶಾಪಕ್ಕೆ ತುತ್ತಾದ.
  • ದುರದೃಷ್ಟದ; ನತದೃಷ್ಟ; ನಿರ್ಭಾಗ್ಯ.
  • (ಆಡುಮಾತು) ಹಾಳು; ಹಾಳಾದ; ಅನಿಷ್ಟ: this accursed system of slavery ಈ ಹಾಳು ದಾಸ್ಯಪದ್ಧತಿ.
  • ಕ್ಲೇಶಕರ; ದುಃಖಕರ.

  • accurst
    ಗುಣವಾಚಕ
    (ಪ್ರಾಚೀನ ಪ್ರಯೋಗ) = accursed.

    accusable
    ಗುಣವಾಚಕ
    ಆಪಾದನೀಯ; ದೂಷಣೀಯ; ನಿಂದನೀಯ; ತೆಗಳಿಕೆಗೆ ಒಳಗಾಗುವಂಥ.


    logo