logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

xylene
ನಾಮವಾಚಕ
(ರಸಾಯನವಿಜ್ಞಾನ) ಸೆಲೀನ್‍; ಮರ ಮೊದಲಾದವುಗಳಿಂದ ದೊರೆಯುವ, ಬೆನ್ಸೀನ್‍ ಅಣು ವಿನಲ್ಲಿನ ಎರಡು ಹೈಡ್ರೊಜನ್‍ ಪರಮಾಣುಗಳ ಸ್ಥಾನದಲ್ಲಿ ಎರಡು ಮೀಥೈಲ್‍ ಗುಚ್ಫಗಳನ್ನು ಆದೇಶಿಸಿದಾಗ ಉಂಟಾಗುವ, ಮೂರು ಸಮಾಂಗಿ ಹೈಡ್ರೊಕಾರ್ಬನ್‍ಗಳಲ್ಲಿ ಒಂದು.

xylo-
ಸಮಾಸ ಪೂರ್ವಪದ
ಮರದ, ಮರ, ದಾರು ಎಂಬರ್ಥದ ಸಮಾಸ ಪೂರ್ವಪದ: xylocarp.

xylocarp
ನಾಮವಾಚಕ
ದಾರು ಫಲ(ವೃಕ್ಷ); ದಾರುವಿನಂಥ ಗಟ್ಟಿಯಾದ ಹಣ್ಣು(ಬಿಡುವ ಮರ).

xylocarpous
ಗುಣವಾಚಕ
ದಾರು ಫಲ(ವೃಕ್ಷ)ದ ಅಥವಾ ಅದಕ್ಕೆ ಸಂಬಂಧಿಸಿದ.

xylograph
ನಾಮವಾಚಕ
ದಾರುಚಿತ್ರ; ಮರದ ಎಳೆಗಳನ್ನು ಕೃತಕವಾಗಿ ರೂಪಿಸಿದ ಅಲಂಕಾರ ಚಿತ್ರ, ಮುಖ್ಯವಾಗಿ ಹಳೆಯದು.

xylography
ನಾಮವಾಚಕ
  • ದಾರುಚಿತ್ರಣ; ಮರದ ಎಳೆಗಳನ್ನು ಕೃತಕವಾಗಿ ರೂಪಿಸಿದ ಅಲಂಕಾರ ಮಾದರಿ.
  • ದಾರು ಮುದ್ರಣ; ಮುದ್ರಣದಲ್ಲಿ ಮರದಚ್ಚುಗಳ ಬಳಕೆ.

  • Xylonite
    ನಾಮವಾಚಕ
    Proprietary name ಸೆಲೊನೈಟ್‍; ಒಂದು ಬಗೆಯ ಸೆಲ್ಯುಲಾಯ್ಡ್‍.

    xylophagous
    ಗುಣವಾಚಕ
    (ಕ್ರಿಮಿಗಳ ವಿಷಯದಲ್ಲಿ) ಮರ ಕೊರೆಕ; ಮರವನ್ನು ಕೊರೆದು ತಿನ್ನುವ.

    xylophone
    ನಾಮವಾಚಕ
    ಕಾಷ್ಠ ತರಂಗ; ಸೆಲಹೋನ್‍; ಕ್ರಮಿಕ ವ್ಯತ್ಯಾಸದ ಉದ್ದದ ಮರದ ಅಥವಾ ಲೋಹದ ಪಟ್ಟಿಗಳನ್ನು ಜೋಡಿಸಿ, ಚಿಕ್ಕ ಮರದ ಬಡಿಗೆಯಿಂದ ಯಾ ಬಡಿಗೆಗಳಿಂದ ಬಡಿದು ನುಡಿಸುವ, ಒಂದು ಬಗೆಯ ವಾದ್ಯ.

    xylophonic
    ಗುಣವಾಚಕ
    ಸೆಲಹೋನಿನ ಅಥವಾ ಅದಕ್ಕೆ ಸಂಬಂಧಿಸಿದ.


    logo