logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oatcake
ನಾಮವಾಚಕ
ಓಟ್‍ ರೊಟ್ಟಿ; ಹುದುಗು ಹಾಕದೆ ಮಾಡಿದ ಓಟ್ಸ್‍ ಹಿಟ್ಟಿನ ರೊಟ್ಟಿ.

oaten
ಗುಣವಾಚಕ
  • ಓಟ್‍ ಧಾನ್ಯದಿಂದ ಮಾಡಿದ, ತಯಾರಿಸಿದ.
  • ಓಟ್‍ ಹುಲ್ಲಿನಿಂದ ಯಾ ಓಟ್‍ ಕಾಂಡದಿಂದ ಮಾಡಿದ.
  • ಓಟ್‍ ಸಸಿಗಳ ಯಾ ಅವುಗಳಿಗೆ ಸಂಬಂಧಿಸಿದ.

  • oath
    ನಾಮವಾಚಕ ಪದಗುಚ್ಛ
  • (ತನ್ನ ಹೇಳಿಕೆ ನಿಜವೆಂದು ತೋರಿಸಲು ಯಾ ತಾನು ಕೊಟ್ಟ ಮಾತನ್ನು ನಡೆಸಿಕೊಡುವ ನಂಬಿಕೆ ಉಂಟುಮಾಡಲು, ದೇವರನ್ನೋ ಯಾರಾದರೂ ಪೂಜ್ಯರನ್ನೋ ಸಾಕ್ಷಿಯಾಗಿ ಕೋರಿ ಮಾಡುವ) ಪ್ರಮಾಣ; (ಇಟುಕೊಳ್ಳುವ) ಆಣೆ.
  • ಪ್ರಮಾಣ(ವಚನ); (ತನ್ನ ಹೇಳಿಕೆ ನಿಜವೆಂದು ಯಾ ತಾನು ಕೊಟ್ಟಿರುವ ಮಾತನ್ನು ನಡೆಸಿಯೇ ತೀರುವೆನೆಂದು ಘೋಷಿಸುವ) ಆಣೆ ಮಾತು, ಪ್ರಮಾಣ ವಚನ: oath of allegiance ಸ್ವಾಮಿನಿಷ್ಠೆ, ದೇಶಭಕ್ತಿ ತೋರಿಸುವ ಪ್ರಮಾಣ ವಚನ. oath of office ಅಧಿಕಾರ ವಹಿಸಿಕೊಳ್ಳುವಾಗ ತೆಗೆದುಕೊಳ್ಳುವ ಪ್ರಮಾಣ ವಚನ. oath of supremacy ಪರಮಾಧಿಕಾರದ ಪ್ರಮಾಣ ವಚನ.
  • (ಯಾವುದೇ ವಿಷಯವನ್ನು ಒತ್ತಿ ಹೇಳುವಲ್ಲಿ, ಇಲ್ಲವೆ ಕೋಪ ಮೊದಲಾದವನ್ನು ತೋರಿಸುವಲ್ಲಿ, ಬಳಸುವ) ಪಾಷಂಡ ಮಾತು, ಉದ್ಗಾರ; ಬೈಗುಳ; ನಿಂದೆ; ಶಾಪ.

  • oatmeal
    ನಾಮವಾಚಕ
  • (ಮುಖ್ಯವಾಗಿ ಗಂಜಿ ಯಾ ರೊಟ್ಟಿಗಾಗಿ ಬಳಸುವ) ಓಟ್‍ (ಧಾನ್ಯದ) ಹಿಟ್ಟು.
  • ಕಂದು ಬಣ್ಣದ ಮಚ್ಚೆಗಳಿಂದ ಕೂಡಿದ ನಸು ಬೂದಿ ಬಣ್ಣ.

  • OAU
    ಸಂಕ್ಷಿಪ್ತ
    Organization of African Unity.

    OB
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) outside broadcast.

    ob
    ಸಂಕ್ಷಿಪ್ತ
    he or she died [Latin obiit].

    ob-
    ಪೂರ್ವಪ್ರತ್ಯಯ
    c ಗೆ ಹಿಂದೆ oc- (occasion), f ಗೆ ಹಿಂದೆ of (offend) p ಗೆ ಹಿಂದೆ op- (oppose) ರೂಪಾಂತರ ಹೊಂದುವ, ಮುಖ್ಯವಾಗಿ ಲ್ಯಾಟಿನ್‍ ಮೂಲದ ಪದಗಳಲ್ಲಿ ಈ ಅರ್ಥಗಳಲ್ಲಿ ಪ್ರಯೋಗವಾಗುವ ಪೂರ್ವಪ್ರತ್ಯಯ:
  • ಗೋಚರತೆ; ಪ್ರಕಟವಾಗಿರುವಿಕೆ; object, obnoxious, obtrude, obverse.
  • ಎದುರಾಗು; ಅಭುಮುಖವಾಗು; ಎದುರಿಗೆ–ಕಾಣು, ಇರು, ನಿಲ್ಲು: observe, obvious, opportune.
  • ಯಾವುದೇ ದಿಕ್ಕಿನಲ್ಲಿ; ಕಡೆಗೆ: oblation, oblong, offer.
  • ವಿರೋಧ; ದ್ವೇಷ; objurgate, obloquy, obstreperous, oppose, oppress, opprobrium.
  • ಪ್ರತಿರೋಧ; ನಿರೋಧಕ; ನಿರೋಧ; ತಡೆ: obdurate, obstinate, obtuse.
  • ಅಡ್ಡಿ; ಅಡಚಣೆ; ಮರೆ ಮಾಡುವಿಕೆ: obese, obscure, obstacle, obstruct, occlude, occult, oppilate.
  • ಅಂತ್ಯ; ಕೊನೆ; ಸಮಾಪ್ತಿ; ಸಂಪೂರ್ಣವಾಗಿರುವಿಕೆ: obsolete, obtain, occident, occupy.
  • (ಆಧುನಿಕ ವೈಜ್ಞಾನಿಕ ಪಾರಿಭಾಷಿಕಗಳಲ್ಲಿ) ವಿಪರ್ಯಯವಾಗಿ; ಪ್ರತಿಲೋಮವಾಗಿ; ವ್ಯತಿರಿಕ್ತವಾಗಿ; ಸಾಮಾನ್ಯವಾದುದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಯಾ ರೀತಿಯಲ್ಲಿ: obconical, obovate, obcordate.
  • ಘಟಿಸು; ಸಂಭವಿಸು; ಸಂಯೋಗದಿಂದ ಆಗು: occasion, occur, offend.
  • ನಮ್ರತೆ; ವಿಧೇಯತೆ: obey, obsequious.

  • Obad.
    ಸಂಕ್ಷಿಪ್ತ
    Obadiah (ಬೈಬಲಿನ ಹಳೆ ಒಡಂಬಡಿಕೆ).

    obbligato
    ನಾಮವಾಚಕ
    (ಸಂಗೀತ) ಅವಿಭಾಜ್ಯ ಅಂಗ; ಕೃತಿಯ ಅಂಗಾಂಗಿಯಾಗಿರುವ ಪಕ್ಕವಾದ್ಯ ಯಾ ಹಿಮ್ಮೇಳ: with violin obbligato ಪೀಟಿಲಿನ ಪಕ್ಕ ವಾದ್ಯದೊಂದಿಗೆ.


    logo