logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

macedoine
ನಾಮವಾಚಕ
(ಹಣ್ಣು, ತರಕಾರಿ, ಮೊದಲಾದವನ್ನು ಜೆಲ್ಲಿಯಲ್ಲಿ ಸೇರಿಸಿ ತಯಾರಿಸಿದ) ಒಂದು ಬಗೆಯ ರಸಾಯನ, ಸೀಕರಣೆ.

macer
ನಾಮವಾಚಕ
ದಂಡಧಾರಿ; (ಮುಖ್ಯವಾಗಿ ಸ್ಕಾಟ್ಲೆಂಡಿನಲ್ಲಿ) ನ್ಯಾಯಾಲಯದಲ್ಲಿ ಶಿಸ್ತನ್ನು ಕಾಪಾಡುವ ಅಧಿಕಾರಿ.

macerate
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ದ್ರವದಲ್ಲಿ) ನೆನೆಸಿ ಮೆತು ಮಾಡು, ಮಿದುಗೊಳಿಸು.
  • ನೆನೆದು – ಮಿದುವಾಗು, ಮೆತುವಾಗು.
  • ಉಪವಾಸ ಮಾಡಿ – ಕೃಶವಾಗು, ನಮೆದು ಹೋಗು.

  • maceration
    ನಾಮವಾಚಕ
  • (ದ್ರವದಲ್ಲಿ ನೆನೆಸಿ) ಮೆತು ಮಾಡುವಿಕೆ.
  • (ಉಪವಾಸದಿಂದ ಉಂಟಾಗುವ ದೇಹದ) ಕೃಶತೆ; ಕ್ಷೀಣತೆ; ನಮೆತ.

  • macerator
    ನಾಮವಾಚಕ
    (ದ್ರವದಲ್ಲಿ) ನೆನೆಸಿ ಮೆತು ಮಾಡುವ ಸಾಧನ.

    Mach
    ನಾಮವಾಚಕ ಪದಗುಚ್ಛ
    ಮಾಕ್‍; ಒಂದು ಕಾಯದ ವೇಗಕ್ಕೂ ಸುತ್ತಮುತ್ತಲ ವಾತಾವರಣದಲ್ಲಿನ ಶಬ್ದವೇಗಕ್ಕೂ ಇರುವ ದಾಮಾಷಾ, ಅನುಪಾತ. Mach one (or two) ಶಬ್ದದಷ್ಟು (ಯಾ ಶಬ್ದದ ಎರಡರಷ್ಟು) ವೇಗ.

    Mach number
    ನಾಮವಾಚಕ
    = Mach.

    machan
    ನಾಮವಾಚಕ
    (ಆಂಗ್ಲೋ ಇಂಡಿಯನ್‍) ಮಚಾನು; ಮಚನು; (ಹುಲಿ ಷಿಕಾರಿ ಮೊದಲಾದವುಗಳಲ್ಲಿ ಬಳಸುವ, ಎತ್ತರದ) ಅಟ್ಟಣೆ; ಅಟ್ಟಣಿಗೆ.

    machete
    ನಾಮವಾಚಕ
    = matchet.

    Machiavelli
    ನಾಮವಾಚಕ
  • ಕಳಿಂಗ; ಕೌಟಿಲ್ಯ; ಚಾಣಕ್ಯ; ನೀತಿನಿಯಮಗಳನ್ನು ಲಕ್ಷ ಮಾಡದ ಸಂಚುಗಾರ, ತಂತ್ರಗಾರ.
  • (ಕುತಂತ್ರ, ಮೋಸ, ಮೊದಲಾದವನ್ನು ನಡೆಸುವ) ಕುಟಿಲ ರಾಜಕಾರಣಿ.


  • logo