ಲಬಾರಟರಿ; ಲ್ಯಾಬರಟರಿ; ಪ್ರಯೋಗಶಾಲೆ; ಪ್ರಯೋಗಾಲಯ; ಪ್ರಯೋಗ ಮಂದಿರ; ವೈಜ್ಞಾನಿಕ ಪ್ರಯೋಗಗಳನ್ನು, ಮುಖ್ಯವಾಗಿ ರಾಸಾಯನಿಕ ಪ್ರಯೋಗಗಳನ್ನು ನಡೆಸಲು, ಬೋಧನೆಗೆ ಯಾ ಔಷಧಗಳು ಮತ್ತು ರಾಸಾಯನಿಕಗಳನ್ನು ತಯಾರಿಸುವುದಕ್ಕೆ ಸಿದ್ಧಪಡಿಸಿರುವ ಕೊಠಡಿ ಯಾ ಕಟ್ಟಡ (ರೂಪಕವಾಗಿ ಸಹ): laboratory of the mind ಮನಸ್ಸಿನ ಪ್ರಯೋಗಶಾಲೆ; ಮಿದುಳು. laboratory of ideas ಕಲ್ಪನೆ ಕಮ್ಮಟ; ವಿಚಾರಾಲಯ; ಭಾವನೆಗಳ, ಕಲ್ಪನೆಗಳ, ಅಭಿಪ್ರಾಯಗಳ, ವಿಚಾರಗಳ – ಆಕರ, ಮೂಲಸ್ಥಾನ, ಜನ್ಮಸ್ಥಾನ.
laboratory animal
ನಾಮವಾಚಕ
(ಮುಖ್ಯವಾಗಿ ಪ್ರಯೋಗಶಾಲೆಗಳ ಪ್ರಯೋಗಗಳಲ್ಲಿ ಬಳಸುವ) ಪ್ರಾಯೋಗಿಕ ಪ್ರಾಣಿ, ಉದಾಹರಣೆಗೆ ಇಲಿ, ಮೊಲ, ಮೊದಲಾದವು.
laborer
ನಾಮವಾಚಕ
(ಅಮೆರಿಕನ್ ಪ್ರಯೋಗ) = labourer.
laborious
ಗುಣವಾಚಕ
ದುಡಿಮೆಯ; ಪ್ರಯಾಸದ; ಶ್ರಮದ; ಶ್ರಮಸಾಧ್ಯ.
(ಮುಖ್ಯವಾಗಿ ಸಾಹಿತ್ಯ ಶೈಲಿಯ ವಿಷಯದಲ್ಲಿ) ತಿಣುಕಿ ಬರೆದ; ಕಷ್ಟಪಟ್ಟು ಬರೆದಂತಿರುವ; ಸರಾಗವಿಲ್ಲದೆ, ಓಟವಿಲ್ಲದೆ, ಬಹುಶ್ರಮದಿಂದ ಯಾ ಪ್ರಯಾಸದಿಂದ – ರಚಿಸಿದಂತೆ ಕಾಣುವ.
(ಸಾಹಿತ್ಯಶೈಲಿ ಮೊದಲಾದವುಗಳ ವಿಷಯದಲ್ಲಿ) ತಿಣುಕಿದಂತಿರುವಿಕೆ; ಅತಿಪ್ರಯಾಸದ ಲಕ್ಷಣಗಳನ್ನು ತೋರಿಸುವಂತಿರುವಿಕೆ.
labour
ನಾಮವಾಚಕ
ಪದಗುಚ್ಛ
ನುಡಿಗಟ್ಟು
(ಅಮೆರಿಕನ್ ಪ್ರಯೋಗಮತ್ತು ಆಸ್ಟ್ರೇಲಿಯ labor). labour of Hercules (ಯಾ Herculean labour) ಭಗೀರಥ ಪ್ರಯತ್ನ; ಅತ್ಯಧಿಕ ಬಲ; ಭೀಮಶ್ರಮ; ಭೀಮಸಾಹಸ; ಬಹಳ ಸಾಮರ್ಥ್ಯ ಸಾಹಸಗಳನ್ನು ಕೋರುವ ಕೆಲಸ, ಸಾಹಸ.
ದುಡಿತ; ದುಡಿಮೆ; ಗೆಯ್ಮೆ; ಶ್ರಮದ ಕೆಲಸ; ದೇಹದ ಯಾ ಮನಸ್ಸಿನ ಶ್ರಮ.
(ಸಾಮಾಜಿಕ) ದುಡಿಮೆ; ಪರಿಶ್ರಮ; ಸಮಾಜದ ಆವಶ್ಯಕತೆಗಳನ್ನು ಒದಗಿಸಲು ಉಪಯೋಗವಾಗುವ ದುಡಿಮೆ.
(ಅಮೆರಿಕನ್ ಪ್ರಯೋಗ ಮತ್ತು ಆಸ್ಟ್ರೇಲಿಯ labor). labour in vain ವ್ಯರ್ಥ ಪ್ರಯತ್ನ ಮಾಡು.
(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ನೆಲವನ್ನು ಉಳು.
ಲಂಬಿಸು; ಬೆಳಸು; ಅತಿಯಾಗಿ ವಿಸ್ತರಿಸು; ವಿಸ್ತಾರವಾಗಿ ಪ್ರತಿಪಾದಿಸು; ಬಹಳವಿವರವಾಗಿ, ಕೂಲಂಕಷವಾಗಿ ಹೇಳು, ತಿಳಿಸು; ದೀರ್ಘವಾಗಿ ನಿರೂಪಿಸು: I will not labour the point ಆ ಅಂಶವನ್ನು ನಾನು ಲಂಬಿಸುವುದಿಲ್ಲ.