logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ice hockey
ನಾಮವಾಚಕ
ಐಸ್‍ ಹಾಕಿ; ಹಿಮ ಹಾಕಿ; ಹಿಮದ ಬಯಲಿನ ಮೇಲೆ ಆಡುವ ಹಾಕಿ ಆಟ.

ice point
ನಾಮವಾಚಕ
(ಭೌತವಿಜ್ಞಾನ) ಬರ್ಹಬಿಂದು; ಹಿಮ ಬಿಂದು; ಸಾಮಾನ್ಯ ವಾತಾವರಣ ಒತ್ತಡದಲ್ಲಿ ಶುದ್ಧನೀರು ಮತ್ತು ಶುದ್ಧ ಬರ್ಹ ಸಮತೋಲನದಲ್ಲಿರುವ ತಾಪ, ಅಂದರೆ $0^\circ{\rm C}$.

ice pudding
ನಾಮವಾಚಕ
ಹಿಮಗಡುಬು; ಮಂಜುಗಟ್ಟಿಸಿದ ಪುಡಿಂಗ್‍ ಭಕ್ಷ್ಯ.

ice station
ನಾಮವಾಚಕ
ಐಸ್‍ ಕೇಂದ್ರ; ಹಿಮಕೇಂದ್ರ; ಧ್ರುವಪ್ರದೇಶಗಳಲ್ಲಿರುವ ಪವನಶಾಸ್ತ್ರೀಯ ಸಂಶೋಧನ ಕೇಂದ್ರ.

ice-age
ನಾಮವಾಚಕ
ಹಿಮಯುಗ; ನೀರ್ಗಲ್ಲಯುಗ; ಭೂಮಿಯ ಇತಿಹಾಸದಲ್ಲಿ ಉತ್ತರ ಗೋಲಾರ್ಧದಲ್ಲಿ ಈಗ ಇರುವುದಕ್ಕಿಂತ ಹೆಚ್ಚು ಭೂಭಾಗವು ಮಂಜುಗಡ್ಡೆಯಿಂದ ಮುಚ್ಚಿಕೊಂಡಿದ್ದ ಕಾಲಾವಧಿಗಳಲ್ಲಿ ಒಂದು.

ice-axe
ನಾಮವಾಚಕ
ಹಿಮಗೊಡಲಿ; ಆಲ್ಪ್‍‘ ಮೊದಲಾದ ಹಿಮಪರ್ವತಗಳನ್ನು ಹತ್ತುವವರು ಹಿಮಗಡ್ಡೆಯ ಮೇಲೆ ಮೆಟ್ಟಿಲು ಕಡಿಯಲು ಬಳಸುವ ಕೊಡಲಿ.

ice-bag
ನಾಮವಾಚಕ
= ice-pack (2).

ice-blue
ನಾಮವಾಚಕ
ಹಿಮನೀಲಿ; ತುಂಬ ಮಸುಕಾದ ನೀಲಿ ಬಣ್ಣ.

ice-boat
ನಾಮವಾಚಕ
ನೀರ್ಗಲ್ಲದೋಣಿ; ಹಿಮದೋಣಿ:
  • ನೀರ್ಗಲ್ಲ ಮೇಲೆ ಚಲಿಸುವಂತೆ ಗಾಲಿಗಳ ಮೇಲೆ ಏರಿಸಿರುವ ದೋಣಿ.
  • ನದಿ ಮೊದಲಾದವುಗಳ ಮೇಲೆ ಕಟ್ಟಿರುವ ನೀರ್ಗಲ್ಲ ಪದರವನ್ನು ಒಡೆಯಲು ಬಳಸುವ ದೋಣಿ.

  • ice-bound
    ಗುಣವಾಚಕ
  • ಹಿಮಾವೃತ; ನೀರ್ಗಲ್ಲಿನಿಂದ, ಹಿಮಗಡ್ಡೆಯಿಂದ ಆವರಿಸಿದ: an ice-bound ship ನೀರ್ಗಲ್ಲಿನಿಂದ ಸುತ್ತುವರಿದ ಹಡಗು.
  • ಹಿಮರುದ್ಧ; ಹಿಮಬದ್ಧ; ಹಿಮಗಡ್ಡೆಯಿಂದ ತಡೆಯಲ್ಪಟ್ಟ, ಮುಚ್ಚಲ್ಪಟ್ಟ: an ice-bound harbour ಹಿಮರುದ್ಧ ಬಂದರು.


  • logo