ಬೇಗ ಮುಚ್ಚುವಿಕೆ; ವಾರದಲ್ಲಿ ಒಂದು ನಿರ್ದಿಷ್ಟ ದಿನ ಅಂಗಡಿ ಮೊದಲಾದ ಉದ್ಯಮ ಕೇಂದ್ರಗಳನ್ನು ಮಧ್ಯಾಹ್ನವೇ ಮುಚ್ಚುವುದು.
early days
ನಾಮವಾಚಕ
ಮುಂಚಿನ ದಿನಗಳು; ಪ್ರಾರಂಭದ ಕಾಲ.
(ಯಾವುದೇ ಘಟನೆ ನಡೆಯುವುದು ಮೊದಲಾದವುಗಳ ವಿಷಯದಲ್ಲಿ) ಮುಂಚಿತವಾಗಿರುವುದು; ಕಾಲಕ್ಕೆ ಮೊದಲೇ ಆಗುವುದು.
early door
ನಾಮವಾಚಕ
ಮುಂಚಿನ ಬಾಗಿಲು; ಮುಂಚಿನ ಪ್ರವೇಶದ ಬಾಗಿಲು; ನಿಗದಿಯಾದ ಕಾಲಕ್ಕಿಂತ ಮುಂಚೆಯೇ ಹೆಚ್ಚು ಹಣ ವಸೂಲು ಮಾಡಿ, ಪ್ರೇಕ್ಷಕರನ್ನು ನಾಟಕ ಶಾಲೆಯ ಒಳಕ್ಕೆ ಬಿಡುವ ಬಾಗಿಲು.
Early English style
ನಾಮವಾಚಕ
(ವಾಸ್ತುಶಿಲ್ಪ) (ಆರಂಭಕಾಲದ ಚರ್ಚ್ ಕಟ್ಟಡಗಳ) ಆದಿಮ ಇಂಗ್ಲಿಷ್ ಶೈಲಿ; ಚೂಪಾದ ಕಮಾನುಗಳು, ಮೊನಚುಕಮಾನಿನ ಕಿಟಕಿಗಳು ಮತ್ತು ಸರಳವಾದ ಜಾಲರಿ ಕೆಲಸವನ್ನು ಒಳಗೊಂಡ, 13ನೆ ಶತಮಾನದ ಇಂಗ್ಲಿಷ್ ಗಾತಿಕ್ ಶೈಲಿಯ ಪ್ರಾರಂಭದ ಹಂತ.
early night
ನಾಮವಾಚಕ
ಬೇಗ ಮಲಗುವಿಕೆ; ಮಾಮೂಲಿಗಿಂತ ಮೊದಲೇ ಮಲಗುವುದು.
early warning
ನಾಮವಾಚಕ
ಮುನ್ನೆಚ್ಚರಿಕೆ; ವಿಮಾನ ದಾಳಿ ಮೊದಲಾದವುಗಳ ಸಂದರ್ಭದಲ್ಲಿ ಮೊದಲೇ ಕೊಡುವ ಎಚ್ಚರಿಕೆ.
earmark
ನಾಮವಾಚಕ
ಕಿವಿಗುರುತು; ಯಾರಿಗೆ ಸೇರಿದ್ದೆಂದು ತೋರಿಸಲು ಕುರಿ ಮೊದಲಾದವುಗಳ ಕಿವಿಯ ಮೇಲೆ ಮಾಡುವ ಗುರುತು.
(ರೂಪಕವಾಗಿ) ಮಾಲಿಕ ಮುದ್ರೆ; ಸ್ವಾಮ್ಯ ಮುದ್ರೆ; ಸ್ವಾಮ್ಯ ಚಿಹ್ನೆ; ಒಡೆತನದ ಗುರುತು; ಯಾವುದೇ ವಸ್ತುವಿನ ಮೇಲೆ ಹಾಕುವ ಒಡೆತನದ ಗುರುತು.
earmark
ಸಕರ್ಮಕ ಕ್ರಿಯಾಪದ
ಕುರಿಗೆ ಮುದ್ರೆ ಯಾ ಗುರುತು ಹಾಕು.
(ರೂಪಕವಾಗಿ) ಮೀಸಲಿಡು; ಯಾವುದಾದರೂ ಖಚಿತ ಉದ್ದೇಶಕ್ಕಾಗಿ ಹಣ ಮೊದಲಾದವನ್ನು ಮೀಸಲಾಗಿಡು.