logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

daemonic
ಗುಣವಾಚಕ
= demonic.

daff
ಸಕರ್ಮಕ ಕ್ರಿಯಾಪದ
(ಪ್ರಾಚೀನ ಪ್ರಯೋಗ) ಬದಿಗೊತ್ತು; ಪಕ್ಕಕ್ಕಿಡು; ಒತ್ತಟ್ಟಿಗಿಡು; ಆಚೆಗೆ ಸರಿಸು: to daff the world aside ಲೋಕವನ್ನು ಒತ್ತಟ್ಟಿಗಿಡು.

daff
ನಾಮವಾಚಕ
(ಆಡುಮಾತು) = 1daffodil.

daffodil
ನಾಮವಾಚಕ
  • ಡ್ಯಾಹಡಿಲ್‍:
    1. ನೆಲನೈದಿಲೆ; ವಸಂತಕಾಲದಲ್ಲಿ ಅರಳುವ, ತುತೂರಿಯಾಕಾರದ ನಸುಹಳದಿ ಹೂಬಿಡುವ ಗೆಡ್ಡೆಸಸ್ಯ. Figure: daffodilla
    2. ವೇಲ್ಸಿನ ರಾಷ್ಟ್ರೀಯ ಲಾಂಛನವಾಗಿರುವ ಈ ಹೂವು.
  • ನಸುಹಳದಿ; ತಿಳಿಹಳದಿಬಣ್ಣ.

  • daffodil
    ಗುಣವಾಚಕ
    ನಸುಹಳದಿಯ; ತಿಳಿಹಳದಿಬಣ್ಣವಿರುವ.

    daffy
    ಗುಣವಾಚಕ
    (ಅಶಿಷ್ಟ) = daft.

    daft
    ಗುಣವಾಚಕ
  • ಅವಿವೇಕದ; ತಿಳಿಗೇಡಿತನದ.
  • ನಿರ್ಲಕ್ಷ್ಯದ; ಎಚ್ಚರಗೇಡಿನ; ಹುಚ್ಚುಧೈರ್ಯದ.
  • ಗೀಳಿನ; ಮರುಳುಗೊಂಡ.
  • ಬುದ್ಧಿಗೆಟ್ಟ; ಉನ್ಮತ್ತ; ಹುಚ್ಚುಹುಚ್ಚಾದ; ಮತಿವಿಕಲವಾದ; ಬುದ್ಧಿವಿಕಲ್ಪವಾದ; ಉನ್ಮಾದ ಹತ್ತಿದ; ಚಿತ್ತಭ್ರಮಣೆಯಾದ: in this daft confusion ಈ ಹುಚ್ಚು ಗೊಂದಲದಲ್ಲಿ.
  • (ಸ್ಕಾಟ್ಲಂಡ್‍) ಹುಡುಗಾಟಿಕೆಯ; ವಿನೋದಪ್ರವೃತ್ತಿಯ; ತಮಾಷೆಸ್ವಭಾವದ.

  • dag
    ನಾಮವಾಚಕ
  • (ಉಡುಪು ಮೊದಲಾದವುಗಳಲ್ಲಿರುವ ಆಲಂಕಾರಿಕವಾದ) ನೇತಾಡುವ ಕುಚ್ಚು, ಚುಂಗು.
  • (ಸ್ಕಾಟ್ಲಂಡ್‍ನಲ್ಲಿ) ಕುರಿಯ ಹಿಂಭಾಗದಲ್ಲಿ ಕೆಸರು ಅಂಟಿಕೊಂಡಿರುವ ಉಣ್ಣೆಬೊಂತೆ.

  • dag
    ನಾಮವಾಚಕ
  • ನೇರಕೊಂಬು; ಚೂಪಾಗಿಯೂ ನೆಟ್ಟಗೂ ಇರುವ ಮರಿ ಜಿಂಕೆಯ ಕೊಂಬು.
  • ಮೊನಚಾದ ಆಯುಧ, ಹತ್ಯಾರು, ಮರದ ತುಂಡು, ಮೊದಲಾದವುಗಳನ್ನು ಜಂಟಿಸುವ, ಕೂಡಿಸುವ ಮೊಳೆ.

  • dag
    ನಾಮವಾಚಕ
    ಇಬ್ಬನಿ; ತುಂತುರುಮಂಜು; ತುಂತುರುಹಿಮ.


    logo